ಕೋಲ್ಕತ್ತಾ: ಈಗ ಎಲ್ಲಿ ನೋಡಿದರೂ ಮಳೆಯ ಆವಾಂತರ ಸೃಷ್ಟಿಯಾಗುತ್ತಾ ಇದೆ. ಅದೇ ರೀತಿಯಾಗಿ ಈ ಭಯಾನಕ ಮಳೆಗೆ ಕೋಲ್ಕತ್ತಾದಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಪ್ರವಾಹಕ್ಕೆ ಸಿಕ್ಕಿ ಐದು ಜನ ಅಸುನಗಿದ್ದಾರೆ. ನಗರದಲ್ಲಿ ಭಾರೀ ಮಳೆಯಾದ ಕಾರಣ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಬೇನಿಯಾಪುಕುರ್, ಕಲಿಕಪುರ್, ನೇತಾಜಿ ನಗರ, ಗರಿಯಾಹಾಟ್ ಹಾಗೂ ಏಕಲ್ಪುರದಲ್ಲಿ ಪ್ರವಾಹಕ್ಕೆ ಹಲವಾರು ಮಂದಿ ಬಲಿಯಾಗಿದ್ದಾರೆ.ಇದನ್ನೂ ಓದಿ: ಬಾರ್‌ನಲ್ಲಿ ಎಣ್ಣೆ ಹೊಡೆಯುವಾಗ ಕಿರಿಕ್: ಗುಂಪುಗಳ ನಡುವೆ ಮಾರಾಮಾರಿ
ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದರಿಂದ, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಉಪ ನಗರ ರೈಲ್ವೆ ಹಾಗೂ ಮೆಟ್ರೊ ಸೇವೆಗಳೂ ವ್ಯತ್ಯಯಗೊಂಡಿವೆ. ನಗರದ ವಿವಿಧ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದೆ. ಹಲವಾರು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಇದನ್ನೂ ಓದಿ: ಲೋಹಿತಾಶ್ವನಿಗೆ ರೇಖಾ ಮೇಲೆ ಅನುಮಾನ: ಕೊನೆಗೆ ಕೊಲೆಯಲ್ಲಿ ಅಂತ್ಯ: ಅನುಮಾನಕ್ಕೆ ಮಹಿಳೆ ಬಲಿ!
ಮಳೆಯ ತೀವ್ರತೆ ಕೋಲ್ಕತ್ತಾ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಹೆಚ್ಚಿದ್ದರಿಂದ ಸಂಪೂರ್ಣ ನಗರ ಪ್ರದೇಶಗಳು ಜಲಾವೃತಗೊಂಡಿವೆ. ಕೋಲ್ಕತ್ತಾ ಮಹಾನಗರ ಪಾಲಿಕೆಯ ದತ್ತಾಂಶದ ಪ್ರಕಾರ, ಗರಿಯಾ ಕಾಮ್ಹಹರಿಯಲ್ಲಿ ಕೆಲವೇ ಗಂಟೆಗಳಲ್ಲಿ ದಾಖಲೆಯ 332 ಮಿಮೀ ಮಳೆಯಾಗಿರುವುದು ತಿಳಿದುಬಂದಿದೆ. ಜೋಧ್ರುರ್ ಪಾರ್ಕ್ ಬಳಿ 285 ಮಿಮೀ, ಕಾಳಿಘಾಟ್ ಬಳಿ 280 ಮಿಮೀ, ತೋಪ್ಪಿಯಾದ ಬಳಿ 275 ಮಿಮೀ ಹಾಗೂ ಬಲ್ಲಿಗುಂಜೆ ಬಳಿ 264 ಮಿಮೀ ಮಳೆಯಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರದಲ್ಲಿ ಇನ್ನೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.TENHEM Luxury Men's Mercerised Cotton Pique Brown Polo Tshirt in Narrow Placket with Top Stitch