ಬೆಂಗಳೂರು, ಸೆಪ್ಟೆಂಬರ್ 22: ಚಿನ್ನ ಮತ್ತು ಬೆಳ್ಳಿ ಬೆಲೆಗಳ ನಡುವೆ ಏರಿಕೆಯ ಪೈಪೋಟಿ ನಡೆದಿದೆ. ಕಳೆದ ಒಂದು ವರ್ಷದಲ್ಲಿ ಈ ಅಮೂಲ್ಯ ಲೋಹಗಳಲ್ಲಿ ಹೂಡಿಕೆ ಮಾಡಿದವರಿಗೆ ಭಾರೀ ಲಾಭ ಸಿಕ್ಕಿದೆ, ಆದರೆ ಷೇರು ಮಾರುಕಟ್ಟೆ ಕುಸಿದಿದೆ. ನಿಫ್ಟಿ ಮತ್ತು ಸೆನ್ಸೆಕ್ಸ್‌ಗಳು ಋಣಾತ್ಮಕ ರಿಟರ್ನ್ ನೀಡಿದರೆ, ಚಿನ್ನ ಮತ್ತು ಬೆಳ್ಳಿಗಳು ಗಣನೀಯ ಲಾಭವನ್ನು ಒದಗಿಸಿವೆ.
ಒಂದು ವರ್ಷದ ರಿಟರ್ನ್ಸ್ (2024ರ ಸೆ. 22ರಿಂದ 2025ರ ಸೆ. 22ರವರೆಗೆ)
ಚಿನ್ನ: ಗ್ರಾಮ್‌ಗೆ ₹7,593 ರಿಂದ ₹11,258 (48.26% ಏರಿಕೆ)
ಬೆಳ್ಳಿ: ಗ್ರಾಮ್‌ಗೆ ₹85 ರಿಂದ ₹135 (58.82% ಏರಿಕೆ)
ನಿಫ್ಟಿ 50: -2.84%
ಸೆನ್ಸೆಕ್ಸ್: -3.26%
ಈ ವರ್ಷದ ರಿಟರ್ನ್ಸ್ (2025 ಜನವರಿ 1 ರಿಂದ ಸೆ. 22 ರವರೆಗೆ):
ಚಿನ್ನ: 44.33%
ಬೆಳ್ಳಿ: 49.17%
ನಿಫ್ಟಿ 50: 6.15%
ಸೆನ್ಸೆಕ್ಸ್: 4.65%
ಜಾಗತಿಕವಾಗಿ ಅನಿಶ್ಚಿತತೆ ಮತ್ತು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಷೇರು ಮಾರುಕಟ್ಟೆ ಕುಸಿಯುತ್ತದೆ. ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೂಡಿಕೆದಾರರು ಇವುಗಳಿಗೆ ಹೆಚ್ಚಿನ ಹೂಡಿಕೆಗೆ ಆದ್ಯತೆ ನೀಡುತ್ತಾರೆ. ಆದ್ದರಿಂದ, ಷೇರು ಮಾರುಕಟ್ಟೆ ಕುಸಿದಾಗ ಚಿನ್ನ ಮತ್ತು ಬೆಳ್ಳಿಯ ಬೆಲೆ ಗಗನಕ್ಕೇರುತ್ತದೆ. ಷೇರು ಮಾರುಕಟ್ಟೆ ಏರಿಕೆ ಕಂಡಾಗ ಇವುಗಳ ಬೇಡಿಕೆ ಸ್ವಲ್ಪ ಕಡಿಮೆಯಾಗುತ್ತದೆ. ಕೂಡಲಸಂಗಮದಲ್ಲಿ ಹೈಡ್ರಾಮಾ: ಪಂಚಮಸಾಲಿ ಪೀಠಕ್ಕೆ ಬೀಗ, ಭಕ್ತರು ಆಲದ ಮರದ ಕೆಳಗೆ ಸಭೆ!
ಬೆಳ್ಳಿಯು ಚಿನ್ನವನ್ನು ಮೀರಿಸಲು ಕಾರಣವೇನು?
ಐತಿಹಾಸಿಕವಾಗಿ ಬೆಳ್ಳಿಯು ಚಿನ್ನಕ್ಕಿಂತ ಹೆಚ್ಚಿನ ಬೇಡಿಕೆಯನ್ನು ಪಡೆದಿರುವುದು ಇದೇ ಮೊದಲಿರಬಹುದು. ಕಳೆದ ಒಂದು ವರ್ಷದಲ್ಲಿ ಸಾಂಸ್ಥಿಕ ಹೂಡಿಕೆದಾರರು ಬೆಳ್ಳಿಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ್ದಾರೆ. ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಬೆಸ್ಕಾಂ ಮೀಟರ್ ರೀಡರ್‌ಗಳಿಗೆ ಜಾತಿ ಸಮೀಕ್ಷೆ ಜವಾಬ್ದಾರಿ..ವಿದ್ಯುತ್ ಬಿಲ್‌ಗಳಲ್ಲಿ ದಿಢೀರ್ ಏರಿಕೆ, ಗ್ರಾಹಕರು ಆಕ್ರೋಶ!
ಮುಂದಿನ ದಿನಗಳಲ್ಲೂ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಮುಂದುವರಿಯಲಿದೆ. ಕಳೆದ ಒಂದು ವರ್ಷದಂತಹ ಭಾರೀ ಏರಿಕೆಯನ್ನು ಮುಂದಿನ ವರ್ಷದಲ್ಲಿ ನಿರೀಕ್ಷಿಸಲಾಗದಿದ್ದರೂ, ಸಾಮಾನ್ಯಕ್ಕಿಂತ ಹೆಚ್ಚಿನ ಏರಿಕೆಯನ್ನು ಊಹಿಸಬಹುದು. ಐತಿಹಾಸಿಕವಾಗಿ ಚಿನ್ನವು ವರ್ಷಕ್ಕೆ ಸರಾಸರಿ 12% ಏರಿಕೆ ಕಾಣುತ್ತದೆ, ಆದರೆ ಬೆಳ್ಳಿಯು ಸುಮಾರು 10% ರಿಟರ್ನ್ ನೀಡಿದೆ.