Skip to main content
ವಿಡಿಯೋ
1/2
politics

ಅಕ್ರಮ ಆಸ್ತಿ ಗಳಿಕೆ ಆರೋಪ: ಸಚಿವ ಜಮೀರ್ ಅಹಮದ್‌ಗೆ ಎರಡೂವರೆ ಗಂಟೆ ಲೋಕಾಯುಕ್ತ ಡ್ರಿಲ್!

By Pavitra Ganapathi Baradavalli
 ಅಕ್ರಮ ಆಸ್ತಿ ಗಳಿಕೆ ಆರೋಪ: ಸಚಿವ ಜಮೀರ್ ಅಹಮದ್‌ಗೆ ಎರಡೂವರೆ ಗಂಟೆ ಲೋಕಾಯುಕ್ತ ಡ್ರಿಲ್!

ಅಕ್ರಮ ಆಸ್ತಿ ಸಂಪಾದನೆ ಆರೋಪ ಪ್ರಕರಣದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸೋಮವಾರ ಬೆಳಿಗ್ಗೆ ಅವರು ಡಿವೈಎಸ್ಪಿ ಹಾಗೂ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಎರಡೂವರೆ ಗಂಟೆಗಳ ಕಾಲ ವಿಚಾರಣೆಗೆ ಉತ್ತರಿಸಿದರು.

ಅಕ್ರಮ ಆಸ್ತಿ ಸಂಪಾದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಚಾರಣೆ ಸೋಮವಾರ ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ನಡೆಯಿತು. ತಮ್ಮ ಎಲ್ಲಾ ವ್ಯವಹಾರಗಳು ಕಾನೂನುಬದ್ಧವಾಗಿದ್ದು, ಯಾವುದೇ ಅಕ್ರಮ ಆಸ್ತಿ ಸಂಪಾದಿಸಿಲ್ಲ ಎಂದು ಸಚಿವ ಜಮೀರ್ ಹೇಳಿದ್ದಾರೆ.ಇದನ್ನೂ ಓದಿ: ಇಟಲಿಯಲ್ಲಿ ಪ್ರತಿಭಟನೆಯ ಕಿಚ್ಚು - ಪ್ಯಾಲೆಸ್ಟೀನ್‌ ಪ್ರತ್ಯೇಕ ರಾಷ್ಟ್ರಕ್ಕೆ ಆಗ್ರಹ


ಲೋಕಾಯುಕ್ತ ಪೊಲೀಸರಿಂದ ನೋಟಿಸ್ ಪಡೆದ ನಂತರ, ಜಮೀರ್ ಅಹ್ಮದ್ ಖಾನ್ ಅವರು ಬೆಳಗ್ಗೆ 10:15ಕ್ಕೆ ಲೋಕಾಯುಕ್ತ ಡಿವೈಎಸ್ಪಿ ಹಾಗೂ ತನಿಖಾಧಿಕಾರಿ ಎಚ್.ಎಂ.ಸತೀಶ್ ಅವರ ಮುಂದೆ ಹಾಜರಾದರು. ಸುಮಾರು ಎರಡೂವರೆ ಗಂಟೆಗಳ ಕಾಲ ಸುದೀರ್ಘ ವಿಚಾರಣೆ ಎದುರಿಸಿದ ನಂತರ, ಸಚಿವರು ಮಧ್ಯಾಹ್ನ 12:45ಕ್ಕೆ ಕಚೇರಿಯಿಂದ ಹೊರಬಂದರು.ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಸಹಾಯಕ ಭಾರತದ ವಿರುದ್ಧ ಟೀಕೆ..ನಿಮ್ಮ ಈ ಭಾಷೆ ಅನವಶ್ಯಕ ಎಂದು ಖಡಕ್ ಟಾಂಗ್ ನೀಡಿದ ಶಶಿ ತರೂರ್!

ತನಿಖೆಗೆ ಅಗತ್ಯ ಬಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ಸತೀಶ್ ಸೂಚಿಸಿರುವುದಾಗಿ ಮಾಧ್ಯಮ ಮೂಲಗಳು ವರದಿ ಮಾಡಿವೆ. ನಾನು ಕಾನೂನುಬದ್ಧವಾಗಿ ಹಣಕಾಸು ವ್ಯವಹಾರ ನಡೆಸಿದ್ದೇನೆ. ಹಲವು ವರ್ಷಗಳಿಂದ ಸಾರಿಗೆ ಉದ್ಯಮದಲ್ಲಿ ತೊಡಗಿದ್ದೆ. ಅಕ್ರಮವಾಗಿ ಆಸ್ತಿ ಸಂಪಾದಿಸಿಲ್ಲ ಎಂದು ಜಮೀರ್ ಪೊಲೀಸರಿಗೆ ತಿಳಿಸಿದ್ದಾರೆ.

ಸಚಿವರು ತಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡಲಾಗಿದೆ ಎಂದಿದ್ದಾರೆ. ಪ್ರತಿ ವರ್ಷ ಆದಾಯ ತೆರಿಗೆ ಪಾವತಿಸಿದ್ದೇನೆ. ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಕೂಡ ಎಲ್ಲ ವಿವರ ಕೊಟ್ಟಿದ್ದೇನೆ ಎಂದು ಲೋಕಾಯುಕ್ತ ಪೊಲೀಸರಿಗೆ ವಿವರಣೆ ನೀಡಿರುವುದಾಗಿ ತಿಳಿದುಬಂದಿದೆ.ಇದನ್ನೂ ಓದಿ: ಟಿಕ್‌ಟಾಕ್ ಇನ್ನು ಬಹುತೇಕ ಯುಎಸ್‌ ಮಾಲೀಕತ್ವಕ್ಕೆ! ಒರಾಕಲ್ ಭದ್ರತಾ ಪಾಲುದಾರ!


ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದಡಿ ಜಮೀರ್ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಚಿವರ ಆದಾಯದ ಮೂಲಗಳನ್ನು ಶೋಧಿಸುತ್ತಿರುವ ಪೊಲೀಸರು, ಈಗಾಗಲೇ ಅವರೊಂದಿಗೆ ಆರ್ಥಿಕ ವ್ಯವಹಾರ ಹೊಂದಿದ್ದ ಕೆಲವರಿಗೆ ವಿಚಾರಣೆ ಬಿಸಿ ಮುಟ್ಟಿಸಿದ್ದಾರೆ.

ಈ ತನಿಖೆಯ ಭಾಗವಾಗಿ ನಟಿ ರಾಧಿಕಾ ಕುಮಾರಸ್ವಾಮಿ, ಸಚಿವ ದಿನೇಶ್ ಗುಂಡೂರಾವ್, ಉದ್ಯಮಿ ಕೆಜಿಎಫ್ ಬಾಬು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ದಿನೇಶ್ ಗುಂಡೂರಾವ್ ಮತ್ತು ಕುಪ್ಪೇಂದ್ರ ರೆಡ್ಡಿ ಹೊರತುಪಡಿಸಿ, ಉಳಿದವರು ಈಗಾಗಲೇ ಪೊಲೀಸರಿಗೆ ವಿವರಣೆ ನೀಡಿದ್ದಾರೆ.NOBERO Men's Cotton Solid Regular Fit Polo Shirt