Skip to main content
ವಿಡಿಯೋ
1/2
politics

ಬೆಂಗಳೂರು ಗುಂಡಿಗಳ ವಿಚಾರ: ಸರ್ಕಾರದ ವಿರುದ್ಧ ಮಾಜಿ ಸಚಿವ ಸಿಸಿ ಪಾಟೀಲ್ ವಾಗ್ದಾಳಿ..!!

By Pavitra Ganapathi Baradavalli
ಬೆಂಗಳೂರು ಗುಂಡಿಗಳ ವಿಚಾರ: ಸರ್ಕಾರದ ವಿರುದ್ಧ ಮಾಜಿ ಸಚಿವ ಸಿಸಿ ಪಾಟೀಲ್ ವಾಗ್ದಾಳಿ..!!

ನಗರದ ರಸ್ತೆಗಳಲ್ಲಿ ಗುಂಡಿಗಳ ಹಾವಳಿ ಮತ್ತು ಅಧಿಕಾರಿಗಳ ಕಾರ್ಯಶೀಲತೆಯ ಕೊರತೆಯ ಬಗ್ಗೆ ಮಾಜಿ ಸಚಿವ ಸಿ.ಸಿ. ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ಗುಂಡಿಗಳನ್ನ ನಡೆಸೋ ಸರ್ಕಾರವನ್ನ ನಾನು ನೋಡೇ ಇರಲಿಲ್ಲ ಎಂದು ಸರ್ಕಾರವನ್ನು ಟೀಕಿಸಿದರು.

ಬೆಂಗಳೂರು: ನಗರದ ರಸ್ತೆಗಳಲ್ಲಿ ಗುಂಡಿಗಳ ಹಾವಳಿ ಮತ್ತು ಅಧಿಕಾರಿಗಳ ಕಾರ್ಯಶೀಲತೆಯ ಕೊರತೆಯ ಬಗ್ಗೆ ಮಾಜಿ ಸಚಿವ ಸಿ.ಸಿ. ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ಗುಂಡಿಗಳನ್ನ ನಡೆಸೋ ಸರ್ಕಾರವನ್ನ ನಾನು ನೋಡೇ ಇರಲಿಲ್ಲ ಎಂದು ಸರ್ಕಾರವನ್ನು ಟೀಕಿಸಿದರು. ಈ ಹೇಳಿಕೆಯು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಧಾನಿ ನರೇಂದ್ರ ಮೋದಿ ನಿವಾಸದ ಮುಂದಿನ ರಸ್ತೆ ಗುಂಡಿಗಳ ಬಗ್ಗೆ ನೀಡಿದ ಹೇಳಿಕೆಗೆ ಕಿಡಿಕಾರಿದರು.ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ: ಸಚಿವ ಜಮೀರ್ ಅಹಮದ್‌ಗೆ ಎರಡೂವರೆ ಗಂಟೆ ಲೋಕಾಯುಕ್ತ ಡ್ರಿಲ್!


ಸಿಸಿ ಪಾಟೀಲ್ ಅವರು ಹೇಳಿದಂತೆ, 6 ಸಾವಿರ, 3 ಸಾವಿರ ಗುಂಡಿಗಳ ಅಂತಿದ್ದಾರೆ. ಅಧಿಕಾರಿಗಳನ್ನ ಗುಂಡಿ ಮುಚ್ಚೋಕೆ ಹಚ್ಚಿರೋ ಏಕೈಕ ಸರ್ಕಾರ ಅಂದರೆ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಸರ್ಕಾರ ಎಂದು ವ್ಯಂಗ್ಯವಾಗಿ ಟೀಕಿಸಿದರು. ನಗರದಲ್ಲಿ ಮಳೆಯ ತೀವ್ರತೆಯ ಹೊರತುಪಡಿಸಿ, ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ಅಧಿಕಾರಿಗಳಿಗೆ ಸಾಕಷ್ಟು ಜ್ಞಾನವಿಲ್ಲ ಎಂದು ಪಾಟೀಲ್ ಆಕ್ಷೇಪಿಸಿದರು.
ಇದನ್ನೂ ಓದಿ: ಸಾಕುಪ್ರಾಣಿ ವಿಚಾರ ಜಗಳ: ಆಶ್ರಮದ ಮಕ್ಕಳಿಗೆ ತಿನಿಸು ಕೊಡಿಸುವಂತೆ ಆದೇಶಿಸಿದ ದೆಹಲಿ ಹೈಕೋರ್ಟ್; FIR ರದ್ದು

 ನಿನ್ನೆ ರಾತ್ರಿ ವಿಮಾನದಲ್ಲಿ ಬೆಂಗಳೂರಿಗೆ ಬಂದ ಸಿಸಿ ಪಾಟೀಲ್, ಬಿಡಿಎ ಮುಂದಿನ ಫ್ಲೈ ಓವರ್ ಮೇಲೆ ಮಳೆ ಬರುತ್ತಿದ್ದರೂ ಅಧಿಕಾರಿಗಳು ಗುಂಡಿಗಳನ್ನು ಮುಚ್ಚುತ್ತಿದ್ದರು ಎಂದು ಉದಾಹರಣೆ ನೀಡಿದರು. ಮಳೆ ಬರೋವಾಗ ಗುಂಡಿ ಮುಚ್ಚಿದ್ರೆ ಇರುತ್ತದೆಯಾ? ಜಿಬಿಎ ಅಧಿಕಾರಿಗಳಿಗೆ ಅಷ್ಟು ಪರಿಜ್ಞಾನ ಇಲ್ಲವಾ? ಮಳೆ ಬರೋವಾಗ ಗುಂಡಿ ಮುಚ್ಚಿದ್ರೆ ಆಗುತ್ತಾ. ಏನ್ ಮಾಡ್ತಿದೆ ಸರ್ಕಾರ ಎಂದು ಕೆಲಸದ ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತಪಡಿಸಿದರು.ನಗರದ ರಸ್ತೆ ಗುಂಡಿಗಳ ಸಮಸ್ಯೆಯು ಈಗ ಹೊಸದಲ್ಲ.ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಸಕ ಸುನೀಲ್ ಕುಮಾರ್ ಆರೋಪ: ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಲ್ಲಿ ಗೊಂದಲ..!


ಪ್ರಧಾನಿ ಮೋದಿ ನಿವಾಸದ ಮುಂದಿನ ರಸ್ತೆಯಲ್ಲೂ ಗುಂಡಿಗಳಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಸಿ ಪಾಟೀಲ್, ಪ್ರಧಾನಿ ಮನೆ ಮುಂದೆ ಗುಂಡಿ ಇದ್ದರೆ ಡಿಕೆಶಿ ಮನೆ ಮುಂದೆ ಹೊಂಡಾ ಮಾಡಿಕೊಳ್ಳೋಕೆ ಹೇಳಿ. ಇವರ ಮನೆ ಮುಂದೆ ಒಂದು ಲೇಕ್ ಮಾಡಿಕೊಳ್ಳಲಿ ಎಂದು ವ್ಯಂಗ್ಯ ಮಾಡಿದರು. ಹೆಚ್ಚುವರಿಯಾಗಿ, ಏನ್ ಕೇಳಿದ್ರು ಮೋದಿ ಮಾಡಿಲ್ಲ, ನೀವು ಇದ್ದಾಗ ಮಾಡಿಲ್ಲ ಅಂತಾರೆ. ನಾವು ಇದ್ದಾಗ ಮಾಡಿಲ್ಲ ಅನ್ನೋದಕ್ಕೆ ನೀವು ಅಧಿಕಾರಕ್ಕೆ ಬಂದಿದ್ದೀರಾ. ಮತ್ತೆ ನೀವು ಹೋಗೋಕೆ ತಯಾರಾಗಿ ನಾವು ಬರ್ತೀವಿ ಎಂದು ಡಿಕೆಶಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.NOBERO Men's Cotton Solid Regular Fit Polo Shirt