Skip to main content
ವಿಡಿಯೋ
1/2
crime

ಚಿಕ್ಕಮಗಳೂರಿನ ವೈವಾಹಿಕ ವಿವಾದದ ಬಳಿಕ ಬೆಂಗಳೂರು ಯುವಕನ ಮೇಲೆ ದೊಡ್ಡ ಮೊತ್ತದ ಬೇಡಿಕೆ ಮತ್ತು ಹಲ್ಲೆ ಆರೋಪ

By Vinutha U
 ಚಿಕ್ಕಮಗಳೂರಿನ ವೈವಾಹಿಕ ವಿವಾದದ ಬಳಿಕ ಬೆಂಗಳೂರು ಯುವಕನ ಮೇಲೆ ದೊಡ್ಡ ಮೊತ್ತದ ಬೇಡಿಕೆ ಮತ್ತು ಹಲ್ಲೆ ಆರೋಪ

ಈ ವಿವಾದ ಹೆಚ್ಚಾದ ನಂತರ, ಆಗಸ್ಟ್ 12,2025 ರಂದು ಪತ್ನಿ ಕುಟುಂಬಸ್ಥರು ಪ್ರವೀಣ್‌ರ ಗೋವಿಂದರಾಜನಗರ ಮನೆಗೆ ನುಗ್ಗಿ, ಅವರ ಮೇಲೆ ಹಾಗೂ ಕುಟುಂಬದವರ ಮೇಲೆ ಹಲ್ಲೆ ನಡೆಸಿದರು.

ಚಿಕ್ಕಮಗಳೂರು ಜಿಲ್ಲೆಯ ತರಿಕೇರೆಯಲ್ಲಿ ಮೇ 5, 2025ರಂದು ಗೋವಿಂದರಾಜನಗರ (ಬೆಂಗಳೂರು) ನಿವಾಸಿ ಪ್ರವೀಣ್ ಎಂಬ ಯುವಕನು ಚಿಕ್ಕಮಗಳೂರು ಮೂಲದ ಯುವತಿಯನ್ನು ವಿವಾಹವಾಗಿದ್ದನು. ಫಸ್ಟ್ ನೈಟ್‌ನಲ್ಲಿ ಲೈಂಗಿಕ ಸಂಬಂಧ ಸ್ಥಾಪಿಸಲು ಪ್ರವೀಣ್ ಹಿಂಜರಿದರು ಇದರಿಂದ ಬೇಸತ್ತಾ ಯುವತಿಯು ತನ್ನ ಕುಟುಂಬದವಿರಿಗೆ ಮಾಹಿತಿಯನ್ನು ತಿಳಿಸಿದ್ದಾಳೆ.

ಇದರಿಂದ ಪತ್ನಿ ಮತ್ತು ಕುಟುಂಬಸ್ಥರು ಪ್ರವೀಣ್‌ರ ಮೇಲೆ ನಪುಂಸಕತೆ (ಇಂಪೋಟೆನ್ಸಿ) ಆರೋಪ ಮಾಡಿ, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ವೈದ್ಯರ ವರದಿಯ ಪ್ರಕಾರ, ಪ್ರವೀಣ್ ಲೈಂಗಿಕ ಕ್ರಿಯೆಗೆ ಸಾಮರ್ಥ್ಯವುಳ್ಳವರಾಗಿದ್ದಾರೆ ಎಂದು ದೃಢಪಡಿಸಲಾಯಿತು. ಆದರೆ, ಮಾನಸಿಕ ಒತ್ತಡದಿಂದ ಸ್ವಲ್ಪ ಹಿಂಜರಿಯುತ್ತಿದ್ದಾರೆ ಎಂದು ಹೇಳಿದ್ದರು ತಾಳ್ಮೆಯಿಂದ ಇರುವಂತೆ ಸಲಹೆ ನೀಡಿದರು. ಸಾಕುಪ್ರಾಣಿ ವಿಚಾರ ಜಗಳ: ಆಶ್ರಮದ ಮಕ್ಕಳಿಗೆ ತಿನಿಸು ಕೊಡಿಸುವಂತೆ ಆದೇಶಿಸಿದ ದೆಹಲಿ ಹೈಕೋರ್ಟ್; FIR ರದ್ದು

ಆದರೂ, ಪತ್ನಿ ಮತ್ತು ಕುಟುಂಬಸ್ಥರು ತಾಳ್ಮೆ ಕಳೆದುಕೊಂಡು ದಂಗೆಯಾಗಿ, ಜೀವನಾಂಶಕ್ಕೆ ಬರೋಬ್ಬರಿ ೨ ಕೋಟಿ ರೂಪಾಯಿ ಡಿಮಾಂಡ್ ಮಾಡಿದರು. ಪ್ರವೀಣ್ ಇದನ್ನು "ಕೋಟಿ ಕೋಟಿ ಹಣಕ್ಕೆ ಒತ್ತಡ" ಎಂದು ಆರೋಪಿಸಿದ್ದಾರೆ. ಈ ವಿವಾದ ಹೆಚ್ಚಾದ ನಂತರ, ಆಗಸ್ಟ್ 12,2025 ರಂದು ಪತ್ನಿ ಕುಟುಂಬಸ್ಥರು ಪ್ರವೀಣ್‌ರ ಗೋವಿಂದರಾಜನಗರ ಮನೆಗೆ ನುಗ್ಗಿ, ಅವರ ಮೇಲೆ ಹಾಗೂ ಕುಟುಂಬದವರ ಮೇಲೆ ಹಲ್ಲೆ ನಡೆಸಿದರು. ನವರಾತ್ರಿ + ಜಿಎಸ್‌ಟಿ ಕಟ್: ಒಂದೇ ದಿನದಲ್ಲಿ 30,000ದ ಮಾರುತಿ ಹ್ಯುಂಡಾಯ್ 11,000 ಕಾರುಗಳ ದಾಖಲೆ ಮಾರಾಟ!

ಈ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನೊಂದ ಪ್ರವೀಣ್, ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಮತ್ತು ಪತ್ನಿ ಸಂಬಂಧಿಕರ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು (FIR ಸಂಖ್ಯೆ ಇನ್ನೂ ಬಹಿರಂಗವಾಗಿಲ್ಲ), ತನಿಖೆ ನಡೆಯುತ್ತಿದೆ.