ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಹೋರಾಟದ ಸಭೆಯಲ್ಲಿ ಹಿತಚಿಂತಕರು ಭಾಗಿಯಾಗಿದ್ದಾರೆ. ಇಂದು ಯಾರೂ ಕಾರು ಮಾಡಿಕೊಂಡು ಬಂದಿಲ್ಲ. ಎಲ್ಲರೂ ಜನಸಾಮಾನ್ಯರು ಎಂದು ಆಕ್ಟಿವಿಸ್ಟ್ ಗಿರೀಶ್ ಮಟ್ಟಣ್ಣನವರ್ ಹೇಳಿಕೆ ನೀಡಿದ್ದಾರೆ. ಎಸ್‌ಐಟಿ ತನಿಖೆಗೆ ಹೆಚ್ಚಿನ ಶಕ್ತಿ ನೀಡಬೇಕು ಎಂದು ಒತ್ತಿ ಹೇಳಿದ ಅವರು, ಧರ್ಮಸ್ಥಳ ಟ್ರಸ್ಟ್‌ನಿಂದ ಉಂಟಾಗಿರುವ ಸಮಸ್ಯೆಗಳಿಗೆ ನ್ಯಾಯ ಸಿಗಬೇಕು ಎಂದರು.ಇದನ್ನೂ ಓದಿ: ಕೋರ್ಟ್ ಆದೇಶ ಇದ್ರೂ ದರ್ಶನ್‌ಗಿಲ್ಲ ಬೇಕಾದ ಸೌಲಭ್ಯ...ಇದು ಯಾವ ನ್ಯಾಯ ಎಂದು ಆರೋಪ!
ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಪಿಐಎಲ್ ಅರ್ಜಿಯನ್ನು ತಿರಸ್ಕರಿಸಿರುವ ಬಗ್ಗೆ ಮಾತನಾಡಿ, ಸದ್ಯ ಎರಡು ಕಾರಣ ಕೇಳಿ ಅರ್ಜಿ ತಿರಸ್ಕಾರ ಮಾಡಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ವಕೀಲರನ್ನು ಕೇಳಿ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಮಟ್ಟಣ್ಣನವರ್ ಹೇಳಿದರು. ಒಂದು ಕೊಲೆಯಾದಾಗ ಅದನ್ನು ಪತ್ತೆಹಚ್ಚಬೇಕು; ಆದರೆ ಕೊಲೆ ಮಾಡಿದವರನ್ನು ಬಿಟ್ಟು, ನೋಡಿದ್ದವರಿಗೆ, ಕಂಪ್ಲೇಂಟ್ ಕೊಟ್ಟವರಿಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಈ ದೇಶದಲ್ಲಿ 27 ನಿಮಿಷಕ್ಕೊಂದು ಅತ್ಯಾಚಾರ ಆಗುತ್ತಿದೆ. ಇದು ನಿಲ್ಲಬೇಕು.ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಕನ್ನಡ ಚಿತ್ರರಂಗಕ್ಕೆ ಗುಡ್‌ನ್ಯೂಸ್...ಏನಿದು ಹೊಸ ಓಟಿಟಿ ವೇದಿಕೆ?
ಅದಕ್ಕೆ ಸೌಜನ್ಯ ಒಂದು ರೂಪ ಎಂದು ಹೇಳಿದರು.ಎಸ್‌ಐಟಿ ಅಧಿಕಾರಿಗಳಲ್ಲಿ ಒಂದು ಫೈರ್ ಇದೆ. ಆದರೆ ರಾಜಕೀಯ ಮುಖಂಡರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮಟ್ಟಣ್ಣನವರ್, ದೇವಸ್ಥಾನದವರು ರಾಜಕೀಯದಿಂದ ಷಡ್ಯಂತ್ರದಿಂದ ತನಿಖೆ ತಡವಾಗುತ್ತಿದೆ ಎಂದರು. ಆದರೆ ಹಿರಿಯ ಅಧಿಕಾರಿಗಳ ಮೇಲೆ ನಂಬಿಕೆಯಿದೆ ಎಂದು ಸ್ಪಷ್ಟಪಡಿಸಿದರು.ತಿಮ್ಮರೋಡಿ ಮೇಲಿನ ಎಫ್‌ಐಆರ್‌ಗೆ ಈ ಪ್ರಕರಣಕ್ಕೆ ಸಂಬಂಧ ಇಲ್ಲ ಎಂದು ಹೇಳಿದ ಅವರು, ತಿಮ್ಮರೋಡಿ ಈ ಹೋರಾಟಕ್ಕೆ ಒಂದು ರೂಪಾಯಿ ತಗೊಂಡಿದ್ದರೂ ತನಿಖೆ ಮಾಡಲಿ ಎಂದು ಸವಾಲು ಹಾಕಿದರು.ಇದನ್ನೂ ಓದಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ - ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದು ಮಿಂಚಿದ ಪುಟಾಣಿ ತಾರೆ ಯಾರು ಗೊತ್ತಾ?
ಪಿಐಎಲ್ ಅಂದರೆ ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್ ಅಲ್ಲ ಎಂದು ಸ್ಪಷ್ಟಪಡಿಸಿದರು.ಧರ್ಮಸ್ಥಳದಲ್ಲಿ ಮಾನವ ಕಳ್ಳಸಾಗಣೆ ಆರೋಪಕ್ಕೆ ಸಂಬಂಧಿಸಿ, ಮಹಾಬಲಶೆಟ್ಟಿ ಅವರು 60-70 ಪೋಸ್ಟ್‌ಮಾರ್ಟಮ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅವರು ಖಾಸಗಿ ಆಸ್ಪತ್ರೆಯ ವೈದ್ಯ, ಯಾಕೆ ಇದರಲ್ಲಿ ಎಂಟ್ರಿಯಾಗಬೇಕು? ಧರ್ಮಸ್ಥಳದವರು ಬಸವಣ್ಣನವರನ್ನು ಕರೆದುಕೊಂಡು ಹೋದರು ಎಂದು ಹೇಳುತ್ತಾರೆ, ಆದರೆ ಅವರು ಏನಾದರೂ ಎಂಬುದನ್ನು ತಿಳಿಯಬೇಕು ಎಂದು ಮಟ್ಟಣ್ಣನವರ್ ಆರೋಪಿಸಿದರು.Yashika Women's Fancy Banarasi Kanjivaram Art Silk Saree with Blouse Pieces||Yellow Coloured Kanjivaram Saree|| AZ-YS-OG-YUKTI YELLOW