ಶ್ರೀಶಾರದಾ ಇನ್ಸ್ಟಿಟ್ಯೂಟ್ನ ಮಾಜಿ ನಿರ್ದೇಶಕ ಸ್ವಾಮಿ ಚೈತನ್ಯನಂದ ಸರಸ್ವತಿ ವಿರುದ್ಧ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಟಾರ್ಚರ್ ರೂಮ್ ನಿರ್ಮಿಸಿ ದೌರ್ಜನ್ಯ ಎಸಗುತ್ತಿದ್ದ ಈತ, ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.ದೆಹಲಿಯ ಶ್ರೀಶಾರದಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಮಾಜಿ ನಿರ್ದೇಶಕ, ಒಡಿಶಾ ಮೂಲದ ಸ್ವಾಮಿ ಚೈತನ್ಯನಂದ ಸರಸ್ವತಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ಆರೋಪಗಳು ಕೇಳಿಬಂದಿವೆ. ದೆಹಲಿ ಪೊಲೀಸರು ಈತನನ್ನು ಪತ್ತೆಹಚ್ಚಲು ಉತ್ತರ ಭಾರತದಾದ್ಯಂತ ತೀವ್ರ ಶೋಧ ನಡೆಸುತ್ತಿದ್ದಾರೆ. ಬಿಹಾರ ಮತ್ತು ಉತ್ತರಾಖಂಡ ಸೇರಿದಂತೆ ಹಲವು ರಾಜ್ಯ