ಬಾಗಲಕೋಟೆ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದಾಳೆ. 17 ವರ್ಷದ ಸೀಮಾ ರಾಠೋಡ್ ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ನಿನ್ನೆ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯರ ಶವ ಪತ್ತೆಯಾಗಿರುತ್ತೆ. ಬಾಗಲಕೋಟೆಯ ವಿದ್ಯಾಗಿರಿಯಲ್ಲಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ನಿಲ್ಲದ ಪುಡಿ ರೌಡಿಗಳ ಅಟ್ಟಹಾಸ, ಕುಡಿದ ಮತ್ತಿನಲ್ಲಿ ಕಾರು ಗಾಜು ಪುಡಿ ಪುಡಿ..!!
ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡು ಉಳಿದ ಬಾಲಕಿಯರು ಹೆದರಿಕೊಂಡು ಹಾಸ್ಟೆಲ್‌ನಿಂದ ಆಚೆ ಬಂದಿದ್ದಾರೆ. ನೇಣು ಕುಣಿಕೆಯಿಂದ ಕೆಳಗಿಳಿಸಿ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ ಹಾಸ್ಟೆಲ್ ಸಿಬ್ಬಂದಿ ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಇದನ್ನೂ ಓದಿ: ಕಿಟಕಿ ಸಜ್ಜಾ ಬಿದ್ದು ವಿದ್ಯಾರ್ಥಿ ಕಾಲು ನುಜ್ಜು ಗುಜ್ಜು, ಚಿಕಿತ್ಸೆಗೆ ಹಣವಿಲ್ಲದೆ ವಿದ್ಯಾರ್ಥಿ ಪರದಾಟ…!!
ಬಿಳಗಿ ತಾಲೂಕಿನ ಸುನಗ ತಾಂಡಾದ ನಿವಾಸಿ ಸೀಮಾ ಎಂದು ತಿಳಿದುಬಂದಿದೆ. ಈ ಸೀಮಾ ರಾಠೋಡ್ ಪ್ರಥಮ ಪಿಯುಸಿ ವಿದ್ಯಾಬ್ಯಾಸ ನಡೆಸುತ್ತಿದ್ದಳು. ಬಾಗಲಕೋಟೆಯ ವಾಗ್ದೇವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ಸೇರಿದ್ದ ಹಾಸ್ಟೆಲ್‌ನಲ್ಲಿಯೇ ಈ ಸೀಮಾ ಉಳಿದುಕೊಂಡಿದ್ದಳು. ನಿನ್ನೆ ಸಂಜೆ ಸೀಮಾ ಪೋಷಕರಿಗೆ ಹಾಸ್ಟಲ್‌ನಿಂದ ಕರೆ ಬಂದಿದೆ ನಿಮ್ಮ ಮಗಳಿಗೆ ಫಿಡ್ಸ್ ಬಂದಿದೆ. ಆದರೆ ಈಗ ನೋಡಿದರೆ ನೇಣು ಹಾಕಿಕೊಂಡಿದ್ದಾಳೆ ಎಂದು ಪೋಷಕರು ಹಾಸ್ಟೆಲ್ ಸಿಬ್ಬಂದಿಯ ಮೇಲೆ ಆರೋಪ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಬಾಗಲಕೋಟೆ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.C J Enterprise Women's Pure Soft Kanjivaram Silk Saree Banarasi Design Style With Blouse Piece for Wedding (Pari9016-51)