ಕನ್ನಡ ಸಾಹಿತ್ಯ ಲೋಕದ ಪರ್ವ ಇನ್ನು ನೆನಪು ಮಾತ್ರ. ಸಾಹಿತ್ಯ ಲೋಕದ ಅಕ್ಷರ ಮಾತ್ರಿಂಕನಿಗೆ ಕೊನೆಗೂ ಅಗ್ನಿ ಸ್ವರ್ಷ ಮಾಡಲಾಗಿದೆ. ಕೊನೆಗೂ ಎಸ್ ಎಲ್ ಬೈರಪ್ಪ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಕೊನೆಗೂ ಬದುಕಿನ ಯಾನ ಮುಗಿಸಿ ಎಸ್ ಎಲ್ ಬೈರಪ್ಪ ಇಹ ಲೋಕ ತ್ಯಜಿಸಿದ್ದಾರೆ. ಎಸ್ ಎಲ್ ಬೈರಪ್ಪನವರ ಇಬ್ಬರೂ ಪುತ್ರನಿಂದ ಬೈರಪ್ಪ ಚಿತೆಗೆ ಅಗ್ನಿ ಸ್ವರ್ಷ ಮಾಡಲಾಗಿದೆ.ಇದನ್ನೂ ಓದಿ: ಓವಲ್ ಆಫೀಸ್‌ನಲ್ಲಿ ಶೆಹಬಾಜ್ ಶರೀಫ್, ಆಸಿಮ್ ಮುನೀರ್‌ರನ್ನು ಕಾಯಿಸಿದ ಟ್ರಂಪ್: ಕಾರಣ ಹೀಗಿದೆ
ಬೈರಪ್ಪ ಪುತ್ರರಾದ ಉದಯ್‌ಶಂಕರ್ ಮತ್ತು ರವಿಶಂಕರ್ ಅವರು ಬೈರಪ್ಪ ಅವರ ಚಿತೆಗೆ ಕೊನೆಯದಾಗಿ ಅಗ್ನಿ ಸ್ಪರ್ಷ ಮಾಡಿದ್ದಾರೆ. ಜೊತೆಗೆ ಸಹನಾ ವಿಜಯ್‌ಕುಮಾರ್ ಸಹ ಅಗ್ನಿ ಸ್ವರ್ಷವನ್ನು ನೆರವೇರಿಸಿದರು. ಬೈರಪ್ಪನವರ ಆಸೆ ಆಗಿತ್ತಂತೆ ಸಹನಾವಿಜಯ್‌ಕುಮಾರ್ ಅವರು ನಾನು ಸಾವನಪ್ಪದ ತರುವಾಯ ನನ್ನ ಚಿತೆಗೆ ಅಗ್ನಿ ಸ್ಪರ್ಷ ಮಾಡಬೇಕೆಂಬುದು ಅದಕ್ಕಾಗಿ ಸಹನಾವಿಜಯ್‌ಕುಮಾರ್ ಸಹ ಜೊತೆಯಾಗಿ ಅಗ್ನಿ ಸ್ವರ್ಷವನ್ನು ನೆರವೇರಿಸಿದರು.ಇದನ್ನೂ ಓದಿ: ಚರಂಡಿಗೆ ಬಿದ್ದು 4 ವರ್ಷದ ಬಾಲಕ ಸಾವು…!!
ಚಾಮುಂಡಿ ತಪ್ಪಲಿನ ಚಿತಾಗಾರದಲ್ಲಿ ಅವರು ಇಚ್ಛೆ ಪಟ್ಟ ಹಾಗೇ ಬ್ರಾಹ್ಮಣ ಸಂಪ್ರದಾಯದಂತೆ ಅವರಿಗೆ ಕೊನೆಯ ವಿದಾಯವನ್ನು ಹೇಳಿ ಪರಲೋಕಕ್ಕೆ ಅವರನ್ನು ಕಳಿಸಿಕೊಡಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಬೈರಪ್ಪರವರ ಅಂತ್ಯಕ್ರಿಯೆ ನೆರವೇರಿತು. ಬೈರಪ್ಪನವರು ಸರಸ್ವತಿ ಪುತ್ರರು ಅವರ ಕೃತಿಗಳು ಕೇವಲ ಕನ್ನಡ ಮಾತ್ರವಲ್ಲ ಮರಾಠಿ, ಉರ್ದು, ತೆಲಗು ಮಲಯಾಳಂ ಇನ್ನೂ ಅನೇಕ ಭಾಷೆಗಳಿಗೆ ಭಾಷಾಂತರವಾಗುತ್ತಿದ್ದವು. ಆದರೆ ಇನ್ನುಮುಂದೆ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ನೆನಪು ಮಾತ್ರ..C J Enterprise Women's Pure Soft Kanjivaram Silk Saree Banarasi Design Style With Blouse Piece for Wedding (Pari9016-51)