Skip to main content
ವಿಡಿಯೋ
1/2
general

ಸಿಗಂಧೂರು ಬಳಿ 12 ಜನ ಪ್ರವಾಸಿಗರಿದ್ದ ಟಿಟಿ ಪಲ್ಟಿ, ಸಿಗಂಧೂರು ದೇವಿ ದರ್ಶನಕ್ಕೆಂದು ತೆರಳುತ್ತಿದ್ದ ಗುಂಪು..!!

By Pavitra Ganapathi Baradavalli
ಸಿಗಂಧೂರು ಬಳಿ 12 ಜನ ಪ್ರವಾಸಿಗರಿದ್ದ ಟಿಟಿ ಪಲ್ಟಿ, ಸಿಗಂಧೂರು ದೇವಿ ದರ್ಶನಕ್ಕೆಂದು ತೆರಳುತ್ತಿದ್ದ ಗುಂಪು..!!

ಸಿಗಂದೂರು (SINGANDOORU) ಬಳಿಯ ಕೂರನಕೊಪ್ಪದ ಬಳಿ ಪ್ರವಾಸಿಗರಿದ್ದ ಟಿಟಿ ವಾಹನ ಪಲ್ಟಿಯಾಗಿದೆ. ಟಿಟಿಯಲ್ಲಿ 12 ಮಹಿಳೆಯರು (WOMEN’S) ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಟಿಟಿಯಲ್ಲಿದ್ದ 12 ಜನ ಮಹಿಳೆಯರು ಸೇರಿ   ಚಾಲಕ ಗಾಯಗೊಂಡಿದ್ದಾರೆ.

ಶಿವಮೊಗ್ಗ: ಸಿಗಂದೂರು (SINGANDOORU) ಬಳಿಯ ಕೂರನಕೊಪ್ಪದ ಬಳಿ ಪ್ರವಾಸಿಗರಿದ್ದ ಟಿಟಿ ವಾಹನ ಪಲ್ಟಿಯಾಗಿದೆ. ಟಿಟಿಯಲ್ಲಿ 12 ಮಹಿಳೆಯರು (WOMEN’S) ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಟಿಟಿಯಲ್ಲಿದ್ದ 12 ಜನ ಮಹಿಳೆಯರು ಸೇರಿ   ಚಾಲಕ ಗಾಯಗೊಂಡಿದ್ದಾರೆ. ಇವರೆಲ್ಲ ಬೆಂಗಳೂರಿನಿಂದ (BENGALURU) ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಆಗಮಿಸಿದ್ದರು.ಇದನ್ನೂ ಓದಿ: ಮುಂಬೈನಲ್ಲಿ ರಾತ್ರಿಯಿಡೀ ಧಾರಾಕಾರ ಮಳೆ, ಪ್ರವಾಹಭೀತಿ - ʻರೆಡ್ ಅಲರ್ಟ್ʼ ಘೋಷಣೆ!


ಬೆಂಗಳೂರಿನಿಂದ ರೈಲಿನ ಮೂಲಕ ಸಾಗರಕ್ಕೆ 12 ಮಹಿಳೆಯರ ತಂಡ ಬಂದಿಳಿದಿತ್ತು. ಅಲ್ಲಿಂದ ಟಿಟಿ ವಾಹನ ಮಾಡಿಕೊಂಡು ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕೂರನಕೊಪ್ಪ ಸಮೀಪದಲ್ಲಿ ಟಿಟಿ ವಾಹನ ಪಲ್ಟಿಯಾಗಿದೆ.ಇದನ್ನೂ ಓದಿ: ಪಹಲ್ಗಾಂ ದಾಳಿ ನೆನಪಿಸಿದ ಜೈಶಂಕರ್: ಪಾಕ್‌ಗೆ ಯುಎನ್‌ನಲ್ಲಿ ತೀವ್ರ ಕಿಡಿ; ಭಯೋತ್ಪಾದನೆಯ ಇಂಡಸ್ಟ್ರಿಯಲ್ ಸ್ಕೇಲ್ ಎಂದು ಟೀಕೆ!


12 ಮಹಿಳೆಯರಲ್ಲಿ ಮೂರು ಮಹಿಳೆಯರಿಗೆ ಗಂಭೀರ ಗಾಯವಾಗಿದೆ. ಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.‌C J Enterprise Women's Pure Kanjivaram Silk Saree Banarasi Soft Sari With Blouse Piece For Wedding (Pari124-50)