Skip to main content
ವಿಡಿಯೋ
1/2
politics

ಕಲ್ಯಾಣ ಕರ್ನಾಟಕದ ರೈತರಿಗೆ ತಕ್ಷಣ ಪರಿಹಾರ ಘೋಷಿಸಿ: ವಿಜಯೇಂದ್ರ..!

By Sushmitha R
ಕಲ್ಯಾಣ ಕರ್ನಾಟಕದ ರೈತರಿಗೆ ತಕ್ಷಣ ಪರಿಹಾರ ಘೋಷಿಸಿ: ವಿಜಯೇಂದ್ರ..!

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆಗೆ ಕಲಬುರಗಿಗೆ ಬರುವ ಮುನ್ನವೇ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆಗೆ ಕಲಬುರಗಿಗೆ ಬರುವ ಮುನ್ನವೇ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.ಧರ್ಮಸ್ಥಳ ಪ್ರಕರಣ: ಹೊಸ ಕಥೆ ಶುರು ಮಾಡಿದ ದೂರುದಾರ ಚಿನ್ನಯ್ಯ...SIT ತನಿಖೆ ಮತ್ತೆ ತೀವ್ರ ಸಾಧ್ಯತೆ!

ರೈತರು ರಾಜ್ಯ ಸರ್ಕಾರದ ಕಡೆಗೆ ಆಶಾಭಾವದಿಂದ ನೋಡುತ್ತಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಸಚಿವರು, ಕಂದಾಯ ಸಚಿವರು ಬೆಂಗಳೂರಿನ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಇದೀಗ ರೈತರ ಸಮಸ್ಯೆ ಚರ್ಚಿಸಲು ಆರಂಭಿಸಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು. MILLION CASES Back Cover Case for OnePlus 11R Shockproof Protective Classic Pattern Leather Case for Men & Boys(Black)

ವೈಮಾನಿಕ ಸಮೀಕ್ಷೆಗೆ ಮಾತ್ರ ಸೀಮಿತವಾದರೆ ಜನಪ್ರತಿನಿಧಿಗಳ ಉಪಯೋಗವೇನು? ಅಧಿಕಾರಿಗಳೇ ಇಂತಹ ಸಮೀಕ್ಷೆ ಮಾಡಬಹುದು. ಕಲಬುರಗಿಗೆ ಭೇಟಿ ನೀಡಿ, ಸಭೆ ನಡೆಸಿ, ಎರಡು ದಿನಗಳ ನಂತರ ಕೇಂದ್ರಕ್ಕೆ ಪರಿಹಾರಕ್ಕಾಗಿ ಪತ್ರ ಬರೆದಿದ್ದೇವೆ ಎಂದು ಹೇಳುವುದು ರಾಜ್ಯ ಸರ್ಕಾರದ ಕೆಲಸವಲ್ಲ.

ರೈತರಿಗೆ ಆರ್ಥಿಕ ಪರಿಹಾರ ಕೊಡುವಷ್ಟೇ ಮುಖ್ಯವಾಗಿ, ಅವರನ್ನು ಭೇಟಿಯಾಗಿ ಧೈರ್ಯ ತುಂಬಿ, ಸಾಂತ್ವನ ಹೇಳುವುದು ಅಷ್ಟೇ ಮುಖ್ಯ. ಈ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು ಎಂದು ವಿಜಯೇಂದ್ರ ಹೇಳಿದರು.ಮೈಸೂರು ದಸರಾ: 2,983 ಡ್ರೋನ್‌ಗಳ ಭವ್ಯ ಪ್ರದರ್ಶನ...ಹುಲಿಯ ಕಲಾಕೃತಿ ಗಿನ್ನೆಸ್ ದಾಖಲೆ!

ಮುಖ್ಯಮಂತ್ರಿಯವರು ತಮ್ಮ ಸಚಿವರಿಗೆ ಒಂದು ತಿಂಗಳ ಕಾಲ ಬೆಂಗಳೂರು ತೊರೆಯದಂತೆ ಸೂಚಿಸಿ, ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕಲ್ಪಿಸುವ ಕೆಲಸಕ್ಕೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕದ ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ, ಆರ್ಥಿಕ ಸಹಾಯದ ಜೊತೆಗೆ ಮಾನಸಿಕ ಬೆಂಬಲ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಬಿಜೆಪಿ ಮುಖಂಡ ಎ.ಎಸ್. ಪಾಟೀಲ್ ನಡಹಳ್ಳಿ, ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಶಾಸಕ ಬಸವರಾಜ ಮತ್ತಿಮಡು ಸೇರಿದಂತೆ ಇತರರು ಉಪಸ್ಥಿತರಿದ್ದರು.ರೈತರ ವಿಶ್ವಾಸ ಗೆದ್ದುಕೊಂಡ ಸಚಿವೆ: ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಹೊಸ ಜೀವ! - ಲಕ್ಷ್ಮೀ ಹೆಬ್ಬಾಳ್ಕರ್