ಯಾದಗಿರಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಆರ್ಭಟಿಸುತ್ತಿರುವ ಭೀಮನದಿಯ ಪ್ರವಾಹ ರೈತರ ಬದುಕಿಗೆ ಭೀಕರ ಹೊಡೆತ ನೀಡಿದೆ. ನದಿಯ ಶಾಂತ ಪ್ರವಾಹವಾಗಿದ್ದರೂ ಕೂಡ, ಅದರ ಪರಿಣಾಮಗಳು ಇನ್ನೂ ನಿಂತಿಲ್ಲ.ಸಿಲಿಕಾನ್ ಸಿಟಿ ಸೇರಿ ಕರ್ನಾಟಕದ 13 ಜಿಲ್ಲೆಗಳಲ್ಲಿ ವರುಣನ ಆರ್ಭಟ..!
ನದಿಯ ನಿಕಟ ಪ್ರದೇಶಗಳಲ್ಲಿ ಹರಿದ ನೀರು ಸಾವಿರಾರು ಎಕರೆ ಕೃಷಿಭೂಮಿಯನ್ನು ಮುಚ್ಚಿ ಬೆಳೆ ನಾಶಮಾಡಿದೆ. ಹತ್ತಿ, ಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿದ್ದು, ಈಗ ಕೃಷಿಕರು ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದಾರೆ. Lenovo LOQ, AMD Ryzen 5 7235HS, NVIDIA RTX 3050A 4GB, 12GB RAM, 512GB SSD, 15.6"(39.6cm), 144Hz, Windows 11, Office Home 2024, Grey, 2.4Kg, 83JC00HNIN, 3 Mon. Game Pass Gaming Laptop
ಭೂಮಿಯಲ್ಲಿ ಇನ್ನೂ ನೀರು ನಿಂತಿರುವ ಕಾರಣ, ಕೊಳೆಯುತ್ತಿರುವ ಬೆಳೆಗಳು ತೀವ್ರ ದುರ್ಗಂಧವನ್ನು ಹರಡುತ್ತಿವೆ. ನೆಲ ಒಣಗದವರೆಗೆ ಮತ್ತೆ ಕೃಷಿಗೆ ಸಾಧ್ಯವಿಲ್ಲ ಎಂಬ ಆತಂಕದಲ್ಲಿ ರೈತರು ದುಃಖದಲ್ಲಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕೆಲ ಅಧಿಕಾರಿಗಳು ಪರಿಶೀಲನೆ ನಡೆಸಿದರೂ, ಪರಿಹಾರದ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ. ನೆರೆಪೀಡಿತ ಪ್ರದೇಶಗಳಲ್ಲಿ ಹಲವು ಕುಟುಂಬಗಳು ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ಇತ್ತೀಚೆಗೆ ಅಕ್ಕಿ, ನೀರು ಹಾಗೂ ಔಷಧೋಪಚಾರಕ್ಕೆ ಕಷ್ಟವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಉತ್ತರಾಖಾಂಡದಲ್ಲಿ ಮತ್ತೆ ಮೇಘಸ್ಫೋಟ..ಮೇಘಸ್ಫೋಟದಲ್ಲಿ 5 ಕ್ಕೂ ಹೆಚ್ಚು ಮಂದಿ ನಾಪತ್ತೆ..!!
ಇದೇ ಬೆಳೆದಿದ್ದರೆ ನಮ್ಮ ಕುಟುಂಬಕ್ಕೆ ದಿನಸಿ ಬಂದಿತ್ತಿತ್ತು. ಇವತ್ತು ಎದ್ದು ನೋಡಿದ್ರೆ ಏನು ಇಲ್ಲ. ಎಲ್ಲವೂ ಹಾಳಾಗಿದೆ ಎಂಬಂತೆ ಒಂದು ರೈತ ಕಣ್ಣೀರು ಹಾಕಿದ್ದಾರೆ.
ಸ್ಥಳೀಯ ರೈತ ಸಂಘಗಳು ಸರ್ಕಾರದಿಂದ ತಕ್ಷಣ ಪರಿಹಾರ ಘೋಷಿಸಲು ಆಗ್ರಹಿಸುತ್ತಿವೆ. ಕೃಷಿ ಇಲಾಖೆ, ನದಿ ನಿರ್ವಹಣಾ ಮಂಡಳಿ ಹಾಗೂ ಜಿಲ್ಲಾಡಳಿತ ಸಮನ್ವಯದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಜನರ ಬೇಡಿಕೆ ಜೋರಾಗಿದೆ.ಫಿಲಿಪನ್ಸ್ ಭೂಕಂಪ: ರೆಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲು 31 ಸಾವು…!!