ಬೆಂಗಳೂರು: ಕರ್ನಾಟಕದ ರಾಜಕೀಯ ಅಂಗಳದಲ್ಲಿ ಗಾಳಿ ಚರ್ಚೆಗಳು ಮರಳಿ ಉಂಟಾಗಿವೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಕ್ರಾಂತಿ ಖಚಿತ. ಡಿಸೆಂಬರ್ ನೊಳಗೆ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದು ಅವರು ಸುದ್ದಿಗೋಷ್ಠಿಯೊಂದಿಗೆ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹಗಳು, ಶಾಸಕರ ರಾಜಾರೋಷ ಮತ್ತು ಹೈಕಮಾಂಡ್‌ನ ಸೂಚನೆಗಳು ಈ ಬದಲಾವಣೆಗೆ ಕಾರಣವಾಗಿವೆ ಎಂದು ಅಶೋಕ್ ಆರೋಪಿಸಿದರು. ಈ ಹೇಳಿಕೆಯು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕ್ಯಾಬಿನೆಟ್ ಪುನರ್ ರಚನೆಯು ಚರ್ಚೆಗಳೊಂದಿಗೆ ಸಂಬಂಧ ಹೊಂದಿದೆ. ಇತ್ತೀಚೆಗೆ ಮಂತ್ರಿಗಳು ಸಿದ್ದರಾಮಯ್ಯ ಅವರ ವಿರುದ್ಧ ತೆರೆಬಿಚ್ಚಿಬಿಟ್ಟಿದ್ದಾರೆ.ESR Geo iPad Pencil Findmy for Apple Pencil Compatible with iPad 2018-2025,iPad Pencil Pro with Easy Shortcuts for iPad 11/10/9/8 & Air 13/11 & Pro 12.9/13/11 & Mini 7/6/5,White(No Wireless Charging)
ಅಕ್ಟೋಬರ್ ಕ್ರಾಂತಿಯ ಬಗ್ಗೆ ಅಶೋಕ್ ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಈಗ ಅದನ್ನು ಡಿಸೆಂಬರ್‌ಗೆ ವಿಸ್ತರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿದೆ. ಎಲ್ಲರೂ ಸಿಎಂ ಆಗಲು ಓಡಾಡುತ್ತಿದ್ದಾರೆ. ಇದು ಕೇವಲ ಟ್ರೇಲರ್. ಪೂರ್ಣ ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ವ್ಯಂಗ್ಯವಾಗಿ ಹೇಳಿದರು. ಅಶೋಕ್ ಅವರ ಈ ಭವಿಷ್ಯವು ಕಾಂಗ್ರೆಸ್ ಹೈಕಮಾಂಡ್‌ನ ಮೇಲೆ ಒತ್ತಡ ಹೇರಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆಗೆ ಒಪ್ಪಂದದಲ್ಲಿ ಎರಡು ವರ್ಷಗಳ ಅವಧಿ ನೀಡಲಾಗಿತ್ತು. ಆ ಅವಧಿ ಮುಗಿಯುತ್ತಿದೆ. ಡಿ.ಕೆ. ಶಿವಕುಮಾರ್ ಅವರಂತಹ ನಾಯಕರು ಹುದ್ದೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಊಹಾಪೋಹಗಳು ಕಂಡುಬರುತ್ತಿವೆ. ನಾನು ಜ್ಯೋತಿಷ್ಯ ನುಡಿಯುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಇದನ್ನು ಹೇಳುತ್ತಿದ್ದಾರೆ. ರಾಜ್ಯದ ಆರ್ಥಿಕ ಸಂಕಷ್ಟ, ಗ್ಯಾರಂಟಿ ಯೋಜನೆಗಳ ಕೊರತೆ ಇದಕ್ಕೆ ಕಾರಣ ಎಂದು ಅಶೋಕ್ ಸ್ಪಷ್ಟಪಡಿಸಿದರು.ಲಡಾಕ್ ಪ್ರತಿಭಟನೆ - ಬಂಧನ ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸೋನಮ್ ವಾಂಗ್‌ಚುಕ್ ಪತ್ನಿ.!
ಬಿಜೆಪಿ ನಾಯಕರಿಂದ ಇಂತಹ ಹೇಳಿಕೆಗಳು ಹೊಸದಲ್ಲ. ಜುಲೈಯಲ್ಲಿ ಅಶೋಕ್ ಅವರು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬದಲಾವಣೆ ಎಂದು ಹೇಳಿದ್ದರು. ರಾಜ್ಯದ ರಾಜಕೀಯದಲ್ಲಿ ಈ ಬದಲಾವಣೆಯು ದೊಡ್ಡ ಪರಿಣಾಮ ಬೀರಲಿದೆ. ಪಾಪರ್ ಸರ್ಕಾರದಿಂದ ಜನರ ಕೈಗೆ ಚಿಪ್ಪು ಸಿಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಇದಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ ಶಾಸಕರ ನಡುವೆ ಚರ್ಚೆಗಳ ಜೋರಾಗಿವೆ.ಧರ್ಮಸ್ಥಳ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿದ ಎಸ್‌ಐಟಿ…!!