Skip to main content
ವಿಡಿಯೋ
1/2
crime

ಬೆಡ್‌ರೂಂನಲ್ಲಿ ಸೀಕ್ರೇಟ್‌ ಕ್ಯಾಮರಾ, ಪತ್ನಿ ಜೊತೆಗಿನ ಖಾಸಗಿ ವಿಡಿಯೋವನ್ನ ಸ್ನೇಹಿತರಿಗೆ ಕಳುಹಿಸಿತ್ತಿದ್ದ ಪಾಪಿ ಪತಿ ವಿರುದ್ಧ ದಾಖಲಾಯ್ತು ಎಫ್‌ಐಆರ್‌…!!

By Pavitra Ganapathi Baradavalli
ಬೆಡ್‌ರೂಂನಲ್ಲಿ ಸೀಕ್ರೇಟ್‌ ಕ್ಯಾಮರಾ, ಪತ್ನಿ ಜೊತೆಗಿನ ಖಾಸಗಿ ವಿಡಿಯೋವನ್ನ ಸ್ನೇಹಿತರಿಗೆ ಕಳುಹಿಸಿತ್ತಿದ್ದ ಪಾಪಿ ಪತಿ ವಿರುದ್ಧ ದಾಖಲಾಯ್ತು ಎಫ್‌ಐಆರ್‌…!!

ಬೆಂಗಳೂರಿನಲ್ಲೊಬ್ಬ ಸೈಕೋಪಾತ್‌ ಪತಿರಾಯ ಹುಟ್ಟಿಕೊಂಡಿದ್ದಾನೆ. ತನ್ನ ಬೆಡ್‌ ರೂಂನಲ್ಲಿ ಸೀಕ್ರೇಟ್‌ ಕ್ಯಾಮರವನ್ನ ಫಿಕ್ಸ್‌ ಮಾಡಿದ್ದಾನೆ. ಪತ್ನಿ ಜೊತೆ ಲೈಂಗಿಕ ಕ್ರಿಯೆ ಮಾಡಿದ ವೀಡಿಯೋ ರೆಕಾರ್ಡ್‌ ಮಾಡಿದ ಪಾಪಿ ಗಂಡ. ಈ ರೀತಿ ಮಾಡಿದ ಗಂಡನ ವಿರುದ್ಧವಾಗಿ ಸ್ವತಃ ಪತ್ನಿಯೇ ಹೋಗಿ ಪೊಲೀಸರಿಗೆ ದೂರನ್ನು ನೀಡಿದ್ದಾಳೆ. ಪತಿ ಸೈಯದ್‌ ಇನಾಮುಲ್‌ ಹಕ್‌ನ ವಿರುದ್ಧ ಈಗ ದೂರು ದಾಖಲಾಗಿದೆ.

ಬೆಂಗಳೂರು: ಬೆಂಗಳೂರಿನಲ್ಲೊಬ್ಬ ಸೈಕೋಪಾತ್‌ ಪತಿರಾಯ ಹುಟ್ಟಿಕೊಂಡಿದ್ದಾನೆ. ತನ್ನ ಬೆಡ್‌ ರೂಂನಲ್ಲಿ ಸೀಕ್ರೇಟ್‌ ಕ್ಯಾಮರವನ್ನ ಫಿಕ್ಸ್‌ ಮಾಡಿದ್ದಾನೆ. ಪತ್ನಿ ಜೊತೆ ಲೈಂಗಿಕ ಕ್ರಿಯೆ ಮಾಡಿದ ವೀಡಿಯೋ ರೆಕಾರ್ಡ್‌ ಮಾಡಿದ ಪಾಪಿ ಗಂಡ. ಈ ರೀತಿ ಮಾಡಿದ ಗಂಡನ ವಿರುದ್ಧವಾಗಿ ಸ್ವತಃ ಪತ್ನಿಯೇ ಹೋಗಿ ಪೊಲೀಸರಿಗೆ ದೂರನ್ನು ನೀಡಿದ್ದಾಳೆ. ಪತಿ ಸೈಯದ್‌ ಇನಾಮುಲ್‌ ಹಕ್‌ನ ವಿರುದ್ಧ ಈಗ ದೂರು ದಾಖಲಾಗಿದೆ.ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಸಿಎಂ ಹೊಸ ಮನೆ ಗೃಹ ಪ್ರವೇಶ, ಮೈಸೂರಿನಲ್ಲಿ ಸಿಎಂ ಹೇಳಿಕೆ…!!


ಪತ್ನಿಯ ಜೊತೆಗಿನ ಖಾಸಗಿ ವೀಡಿಯೋ ಇಟ್ಟುಕೊಂಡು ತಾನೇ ತಾಳಿ ಕಟ್ಟಿದ ಪತ್ನಿಗೆ ಬ್ಲಾಕ್‌ಮೇಲ್‌ ಮಾಡ್ತಿದ್ದ ಪಾಪಿ ಗಂಡ. ಜೊತೆಗೆ ಇದಿಷ್ಟೇ ಅಲ್ಲದೇ ತನ್ನ ಸ್ನೇಹಿತರೊಂದಿಗೆ ಮಲಗೂ ಅಂತ ಸಹ ಒತ್ತಾಯ ಮಾಡುತ್ತಿದ್ದ ಎಂದು ಆರೋಪದಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲದೇ ಪತ್ನಿಯ ಜೊತೆಗಿದ್ದ ಖಾಸಗಿ ವೀಡಿಯೋವನ್ನ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದ ಎನ್ನುವ ಆರೋಪವನ್ನು ಸಹ ಅವರ ಪತ್ನಿ ಈಗ ಪೊಲೀಸರಿಗೆ ದೂರನ್ನು ದಾಖಲಿಸಿದ್ದಾಳೆ.
ಇದನ್ನೂ ಓದಿ: ಆಪರೇಷನ್ ಸಿಂದೂರ್‌ನಲ್ಲಿ ಐಎಎಫ್‌ನ ಶಕ್ತಿ: ಎಪಿ ಸಿಂಗ್‌ನ ಭಾವುಕ ಹೇಳಿಕೆ..!

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಮಹಿಳೆ ಜೊತೆ ಮದುವೆಯಾಗಿದ್ದ, ಆದ್ರೆ ಇನಾಮುಲ್‌ಗೆ ಈಗಾಗಲೇ ಮದುವೆಯಾಗಿತ್ತು ಎನ್ನುವ ವಿಚಾರ ಮಹಿಳೆಯನ್ನ ಮದುವೆಯಾದ ನಂತರ ಗೊತ್ತಾಗಿದೆ. ಮುಂಚಿತವಾಗಿ ಮದುವೆಯಾಗಿರೋದನ್ನು ತಿಳಿಸದೇ ಎರಡನೇ ಮದುವೆಯಾಗಿದ್ದಾನೆ ಎಂದು ಸಹ ಆರೋಪ ಮಾಡಲಾಗಿದೆ. ಜೊತೆಗೆ ಈ ಸೈಯದ್‌ಗೆ 19 ಹೆಂಗಸರ ಜೊತೆ ಸಂಬಂಧ ಇತ್ತು ಎಂದು ಪತ್ನಿ ಆರೋಪ ಮಾಡುತ್ತಿದ್ದಾಳೆ. ಇವನಷ್ಟೇ ಅಲ್ಲದೇ ಸೈಯದ್‌ ಸಂಬಂಧಿಯಿಂದಲೂ ಸಹ ಲೈಂಗಿಕ ಕ್ರಿಯೆಗೆ ಒತ್ತಾಯ ಕೇಳಿಬಂದಿತ್ತು ಎಂದು ಸಂಬಂಧಿ ವಸೀಮ್‌ ಬೋಕಾರಿ ವಿರುದ್ಧ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಕರೂರು ಕಾಲ್ತುಳಿತ ಪ್ರಕರಣ - ಟಿವಿಕೆ ಪಕ್ಷದಿಂದ ಸಿಬಿಐ ತನಿಖೆಗೆ ಆಗ್ರಹಿಸಿದ ಅರ್ಜಿ ವಜಾಗೊಳಿಸಿದ ಮದ್ರಾಸ್‌ ಹೈಕೋರ್ಟ್‌.!


ಸದ್ಯ ನೊಂದ ಮಹಿಳೆ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ. ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಆರೋಪಿ ಪತಿ ಎಸ್ಕೇಪ್‌ ಆಗಿದ್ದಾನೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಾಕ್ತೀನಿ ಅಂತ ಹೆದರಿಸುತ್ತಿದ್ದ, ನೀನು ಅವರಿಗೆ ಸಹಕಾರ ನೀಡದೇ ಇದ್ರೆ ಅಂತ ದೂರಲ್ಲಿ ದಾಖಲಿಸಿದ್ದಾಳೆ.
SWORNOF Women's Patola Silk Saree With Unstitched Boluse Piece