ಸೌಜನ್ಯಾ ಪ್ರಕರಣದಲ್ಲಿ ಸಾಕ್ಷಿ ನೀಡಿದ ದೂರುದಾರನಿಗೆ ಆಶ್ರಯ ನೀಡಿದ ಆರೋಪದ ವಿಚಾರವಾಗಿ, ಹೋರಾಟಗಾರ ಜಯಂತ್ ಟಿ ಅವರ ಪತ್ನಿ ಶುಕ್ರವಾರ ಎಸ್‌ಐಟಿ ಕಚೇರಿಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಿಂದ ಬೆಳ್ತಂಗಡಿಗೆ ಬಂದ ಜಯಂತ್ ಅವರ ಪತ್ನಿ, ಮಧ್ಯಾಹ್ನ 12 ಗಂಟೆಗೆ ಎಸ್‌ಐಟಿ ಅಧಿಕಾರಿಗಳನ್ನು ಭೇಟಿಯಾದರು. ಸಂಜೆ 4:30 ರವರೆಗೆ ವಿಚಾರಣೆ ನಡೆಯಿತು.ಇದನ್ನೂ ಓದಿ: ಜಾತಿ ಗಣತಿ ಹೆಸರಿನಲ್ಲಿ ದರೋಡೆ, ನಡೆದೇ ಹೋಯ್ತು ಅಮಾನುಷ ಕೃತ್ಯ…!!
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಯಂತ್ ನನಗೆ ನೋಟಿಸ್ ಬಂದಿತ್ತು. ನಾನು ಈಗಾಗಲೇ ಕೆಲವು ದಿನಗಳ ಹಿಂದೆ ಹೇಳಿಕೆ ದಾಖಲಿಸಿದ್ದೇನೆ. ಪತ್ನಿಯ ಆರೋಗ್ಯ ಸಮಸ್ಯೆಯಿಂದಾಗಿ ಸ್ವಲ್ಪ ವಿಳಂಬವಾಯಿತು. ಇಂಜಿನಿಯರಿಂಗ್ ಓದುತ್ತಿರುವ ನಮ್ಮ ಮಗನೊಂದಿಗೆ ಅವರು ಹೋಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಬೆಳಗಾವಿಯಲ್ಲಿ 'ಐ ಲವ್ ಮೊಹಮ್ಮದ್' ಘೋಷಣೆ...ಉರುಸ್ ಮೆರವಣಿಗೆ ವೇಳೆ ಕಲ್ಲು ತೂರಾಟ!
ಬೇರೆ ಊರುಗಳಿಂದ ಬರುವ ಹೋರಾಟಗಾರರಿಗೆ ಊಟ ಮತ್ತು ಆಶ್ರಯ ನೀಡುವ ಸಂಪ್ರದಾಯವನ್ನು ನಾವು ರೂಢಿಸಿಕೊಂಡಿದ್ದೇವೆ. ಸಾಕ್ಷಿ ದೂರುದಾರರಿಗೂ ಅದೇ ರೀತಿ ಊಟ ಹಾಕಿದ್ದೆವು. ಎಸ್‌ಐಟಿಯವರು ಕರೆದಾಗ ಹೋಗಿ ಸಹಕರಿಸುವುದು ನಮ್ಮ ಕರ್ತವ್ಯ. ಹಾಗಾಗಿ ನಾವಿಬ್ಬರೂ ಮತ್ತು ನಮ್ಮ ಮಗ ಹೇಳಿಕೆಗಳನ್ನು ನೀಡಿದ್ದೇವೆ ಎಂದು ಜಯಂತ್ ಹೇಳಿದರು.C J Enterprise Women's Pure Kanjivaram Silk Saree Banarasi Soft Sari With Blouse Piece For Wedding (Pari124-50)