Skip to main content
ವಿಡಿಯೋ
1/2
crime

ಜಾತಿ ಗಣತಿ ಹೆಸರಿನಲ್ಲಿ ದರೋಡೆ, ನಡೆದೇ ಹೋಯ್ತು ಅಮಾನುಷ ಕೃತ್ಯ…!!

By Pavitra Ganapathi Baradavalli
ಜಾತಿ ಗಣತಿ ಹೆಸರಿನಲ್ಲಿ ದರೋಡೆ, ನಡೆದೇ ಹೋಯ್ತು ಅಮಾನುಷ ಕೃತ್ಯ…!!

ಈಗ ಎಲ್ಲಿ ನೋಡಿದರೂ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಜಾತಿ ಗಣತಿ ಎಲ್ಲರ ಮನೆಗೂ ಶಿಕ್ಷಕರು ಬರುತ್ತಾರೆ ನಮ್ಮ ಮನೆಯಲ್ಲಿ ಎಷ್ಟು ಜನರಿದ್ದಾರೆ ನಮ್ಮ ಜಾತಿ ಯಾವುದು ಮತ್ತು ಇತ್ಯಾದಿ ವಿಷಯಗಳನ್ನು ಪಡೆಯುತ್ತಾರೆ ಎಂಬುದಾಗಿರುತ್ತದೆ. ಆದರೆ ಶಿವಮೊಗ್ಗದಲ್ಲಿ ಜಾತಿ ಗಣತಿಯನ್ನೇ ನೆಪ ಮಾಡಿಕೊಂಡು ದರೋಡೆಗೆ ಮುಂದಾಗಿದ್ದಾರೆ.

ಶಿವಮೊಗ್ಗ: ಈಗ ಎಲ್ಲಿ ನೋಡಿದರೂ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಜಾತಿ ಗಣತಿ ಎಲ್ಲರ ಮನೆಗೂ ಶಿಕ್ಷಕರು ಬರುತ್ತಾರೆ ನಮ್ಮ ಮನೆಯಲ್ಲಿ ಎಷ್ಟು ಜನರಿದ್ದಾರೆ ನಮ್ಮ ಜಾತಿ ಯಾವುದು ಮತ್ತು ಇತ್ಯಾದಿ ವಿಷಯಗಳನ್ನು ಪಡೆಯುತ್ತಾರೆ ಎಂಬುದಾಗಿರುತ್ತದೆ. ಆದರೆ ಶಿವಮೊಗ್ಗದಲ್ಲಿ ಜಾತಿ ಗಣತಿಯನ್ನೇ ನೆಪ ಮಾಡಿಕೊಂಡು ದರೋಡೆಗೆ ಮುಂದಾಗಿದ್ದಾರೆ.
ಖತರ್ನಾಕ್ದಂಪತಿಗಳಿಬ್ಬರು, ಜಾತಿ ಗಣತಿಯ (Caste census) ಹೆಸರಿನಲ್ಲಿ ಮನೆಯೊಳಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ (Assault case) ಮಾಡಿ, ದರೋಡೆಗೆ (Robbery attempt) ವಿಫಲ ಯತ್ನ ನಡೆಸಿದ ಘಟನೆ ಶಿವಮೊಗ್ಗದಲ್ಲಿ (Shivamogga) ದಾಖಲಾಗಿದೆ.ಇದನ್ನೂ ಓದಿ: ನನ್ನ ಹಾಗೂ ಮೋದಿ ಸಂಬಂಧ ಗಟ್ಟಿಯಾಗಿದೆ...ನೆರೆ ಪರಿಹಾರಕ್ಕೆ ಒತ್ತಾಯಿಸುತ್ತೇನೆ- ಹೆಚ್.ಡಿ.ದೇವೇಗೌಡ ..!


ಶಿವಮೊಗ್ಗದ ಆಜಾದ್‌ ನಗರದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಮನೆಯಲ್ಲಿದ್ದ ಮಹಿಳೆ ಈ ಇಬ್ಬರು ಖೇಡಿಗಳ ಕೈಯಲ್ಲಿ ಒದೆ ತಿಂದು ಆಸ್ಪತ್ರೆ ಸೇರಿದ್ದಾರೆ. ಸದ್ಯ ದರೋಡೆಗೆ ಯತ್ನಿಸಿದ ಆ ಇಬ್ಬರು ದಂಪತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಇದನ್ನೂ ಓದಿ: ಬೆಳಗಾವಿಯಲ್ಲಿ 'ಐ ಲವ್ ಮೊಹಮ್ಮದ್' ಘೋಷಣೆ...ಉರುಸ್ ಮೆರವಣಿಗೆ ವೇಳೆ ಕಲ್ಲು ತೂರಾಟ!

ಶಿವಮೊಗ್ಗ ನಗರದ ಕ್ಲಾರ್ಕ್‌ ಪೇಟೆಯ ಆಜಾದ್‌ ನಗರದ ಎರಡನೇ ತಿರುವಿನಲ್ಲಿ ಮಹಿಳೆ ದಿಲ್‌ ಶಾದ್‌ ಎಂಬುವವರ ಮನೆ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆ ನಡೆಸಿದ ದಂಪತಿ ಹೆಸರು ತಸ್ಲಿಮಾ ಹಾಗೂ ಅಸ್ಲಾಂ ಎಂದು ತಿಳಿದುಬಂದಿದೆ. ಮನೆಯಲ್ಲಿ ಯಾರೂ ಪುರುಷರು ಇಲ್ಲದ ವೇಳೆ ಜಾತಿ ಗಣತಿ ಹೆಸರಿನಲ್ಲಿ ಮನೆಗೆ ಆಗಮಿಸಿದ ದಂಪತಿ, ಮನೆಯಲ್ಲಿದ್ದ ದಿಲ್‌ ಶಾದ್‌ ಜೊತೆ ವಿಚಾರಿಸಿದ್ದಾರೆ. ಆಧಾರ್‌ ಕಾರ್ಡ್‌ ತೋರಿಸುವಂತೆ ಹೇಳಿದ್ದ ಮಹಿಳೆ ತಸ್ಲೀಮಾ, ಮಹಿಳೆ ಆಧಾರ್‌ ಕಾರ್ಡ್‌ ತರಲು ಒಳಗೆ ಹೋದ ಬೆನ್ನಲ್ಲೇ ದಿಲ್‌ ಶಾದ್‌ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆಯ ತಲೆಗೆ ರಾಡ್‌ನಿಂದ ಬಲವಾಗಿ ಹೊಡೆದಿದ್ದಾರೆ.C J Enterprise Women's Pure Kanjivaram Silk Saree Banarasi Soft Sari With Blouse Piece For Wedding (Pari124-50)

ಬಲವಾದ ಪೆಟ್ಟು ಬೀಳುತ್ತಿದ್ದಂತೆ ತಸ್ಲೀಮಾ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ವೇಳೆ ಆಕೆಯ ಕಿರುಚಾಟ ಕೇಳಿ ರಕ್ಷಣೆಗೆ ಅಕ್ಕಪಕ್ಕದ ಮನೆಯವರು ಧಾವಿಸಿದ್ದಾರೆ. ವೇಳೆ ಕಂಗಾಲಾದ ತಸ್ಲೀಮಾ, ಅದೇ ಮನೆಯಲ್ಲಿ ಅಡಗಿ ಕುಳಿತಿದ್ದಳು. ಸ್ಥಳೀಯರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಕೆ ತಂದ ಬ್ಯಾಗ್ಗಳನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಕೆಲವು ಮಾರಕಾಸ್ತ್ರಗಳು ಪತ್ತೆ ಆಗಿವೆ. ರಕ್ತದ ಮಡಿಲಿನಲ್ಲಿ ಬಿದ್ದಿದ್ದ ಮಹಿಳೆ ದಿಲ್ ಶಾದ್ಳನ್ನು ಶಿವಮೊಗ್ಗ ನಗರದ ಸಹರಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ನೂರು ವರ್ಷಗಳ ದೇಶಸೇವೆ - ಆರ್‌ಎಸ್ಎಸ್ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಲೇಖನ


ದಿಲ್ ಶಾದ್ಗೆ ತಲೆಯ ಭಾಗಕ್ಕೆ ಬಲವಾದ ಹೊಡೆತ ಬಿದ್ದಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸಂಬಂಧ ತನಿಖೆ ನಡೆಸುತ್ತಿದ್ದಾರೆ.