Skip to main content
ವಿಡಿಯೋ
1/2
local

ರಾಮನಗರ: ಲೋಕಾಯುಕ್ತ ಡಿವೈಎಸ್‌ಪಿ ಹೆಸರಿನಲ್ಲಿ ಬೆದರಿಕೆ: ಆರೋಪಿಯ ಬಂಧನ..!!

By Pavitra Ganapathi Baradavalli
ರಾಮನಗರ: ಲೋಕಾಯುಕ್ತ ಡಿವೈಎಸ್‌ಪಿ ಹೆಸರಿನಲ್ಲಿ ಬೆದರಿಕೆ: ಆರೋಪಿಯ ಬಂಧನ..!!

ಲೋಕಾಯುಕ್ತ ಡಿವೈಎಸ್‌ಪಿ (Lokayukta DySP) ಎಂದು ಗುರುತಿಸಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದ ಐಜೂರು ಪೊಲೀಸರು (Ijoor Police) ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯ ಹೆಸರು ಮುರೇಗಪ್ಪ.

ರಾಮನಗರ: ಲೋಕಾಯುಕ್ತ ಡಿವೈಎಸ್‌ಪಿ (Lokayukta DySP) ಎಂದು ಗುರುತಿಸಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದ ಐಜೂರು ಪೊಲೀಸರು (Ijoor Police) ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯ ಹೆಸರು ಮುರೇಗಪ್ಪ. ಇವನು ಮಾಗಡಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO) ಸುರೇಂದ್ರ ಅವರಿಗೆ ಕರೆ ಮಾಡಿ, ತಾನು ಲೋಕಾಯುಕ್ತ ಅಧಿಕಾರಿಯೆಂದು ಗುರುತಿಸಿಕೊಂಡು ಹಣಕ್ಕೆ ಬೇಡಿಕೆಯಿಟ್ಟಿದ್ದ.ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ಆಂಬ್ಯುಲೆನ್ಸ್‌ ಡ್ರೈವರ್‌ಗೂ ಬಂತೂ ಎಸ್‌ಐಟಿ ನೋಟೀಸ್‌…!!


ಈ ಬಗ್ಗೆ ಸುರೇಂದ್ರ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಐಜೂರು ಪೊಲೀಸರು, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿ ಮುರೇಗಪ್ಪನ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಂಧಿತನಿಂದ 3 ಮೊಬೈಲ್ ಫೋನ್‌ಗಳು ಹಾಗೂ 9ಕ್ಕೂ ಅಧಿಕ ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇದನ್ನೂ ಓದಿ:ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅ.11ರವರೆಗೆ ಮಳೆ ಸಾಧ್ಯತೆ..!


ಮುರೇಗಪ್ಪ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಯೆಂದು ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಈತ ಎಂಟು ವರ್ಷಗಳ ಕಾಲ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸಿದ್ದ. ಎರಡು ವರ್ಷ ಲೋಕಾಯುಕ್ತದಲ್ಲಿ ಕೆಲಸ ಮಾಡಿದ್ದ ಈತ, ನಂತರ ಸಸ್ಪೆಂಡ್ ಆಗಿದ್ದ. ಬಳಿಕ ಬೆದರಿಕೆಯ ಮೂಲಕ ಹಣ ವಸೂಲಿಯನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಂಡಿದ್ದ. ಸದ್ಯ, ಐಜೂರು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.C J Enterprise Womens Pure Banarasi Soft Silk Saree Kanjivaram Style Sarees With Blouse Piece For Wedding (KeriGola-51)