ಕರ್ನಾಟಕದಲ್ಲಿ ಸೆಪ್ಟೆಂಬರ್ 22ರಂದು ಪ್ರಾರಂಭವಾದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಪೂರ್ಣಗೊಳಿಸಲು ಸರ್ಕಾರ ನೀಡಿದ ಅಕ್ಟೋಬರ್ 7ರ ಗಡುವು ಸಮೀಪಿಸಿದೆ. ಅಂದರೆ, ಸಮೀಕ್ಷೆ ಮುಗಿಯಲು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ನಿಗದಿತ ಅವಧಿಯಲ್ಲಿ ಇದು ಪೂರ್ಣಗೊಳ್ಳುತ್ತದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ.
ಮೈಸೂರಿನಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಕ್ಟೋಬರ್ 7ರೊಳಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಪ್ರಸ್ತುತ ಸಮೀಕ್ಷೆಯ ಪ್ರಗತಿಯನ್ನು ಗಮನಿಸಿದರೆ, ನಿಗದಿತ ಸಮಯದಲ್ಲಿ ಕೆಲಸ ಮುಗಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ: ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!
ಜಾತಿ ಗಣತಿ ಸಮೀಕ್ಷೆಗೆ ಒಟ್ಟು 1,43,77,978 ಕುಟುಂಬಗಳನ್ನು ನಿಗದಿಪಡಿಸಲಾಗಿದೆ. ಭಾನುವಾರದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅಕ್ಟೋಬರ್ 4ರ ವರದಿಯ ಪ್ರಕಾರ, ರಾಜ್ಯದಲ್ಲಿ 1,02,83,172 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಇನ್ನೂ 40,94,806 ಮನೆಗಳ ಸಮೀಕ್ಷೆ ಬಾಕಿ ಇದೆ.
ಬೆಂಗಳೂರಿನಲ್ಲಿ 32 ಲಕ್ಷ ಮನೆಗಳ ಸಮೀಕ್ಷೆಗೆ ಗುರಿ ನಿಗದಿಪಡಿಸಲಾಗಿತ್ತು. ಇಲ್ಲಿ ಕೇವಲ ಮೂರು ದಿನಗಳಲ್ಲಿ 1,41,588 ಮನೆಗಳ ಸಮೀಕ್ಷೆ ನಡೆದಿದೆ. ಬೆಂಗಳೂರಿನಲ್ಲಿ ಇನ್ನೂ 30,58,412 ಮನೆಗಳ ಸಮೀಕ್ಷೆ ಬಾಕಿ ಇದೆ. ರಾಜ್ಯಾದ್ಯಂತ ಒಟ್ಟಾರೆ ಶೇಕಡಾ 65ರಷ್ಟು ಸಮೀಕ್ಷೆ ಗುರಿ ಸಾಧಿಸಲಾಗಿದೆ. ಇದರಿಂದಾಗಿ ಇಂದು ಮತ್ತು ನಾಳೆಯೊಳಗೆ ಸಮೀಕ್ಷೆ ಪೂರ್ಣಗೊಳ್ಳುವುದು ಅನುಮಾನವಾಗಿದೆ. ಸಮೀಕ್ಷೆ ನಡೆಸುವವರಿಗೆ ಹಲವು ಸವಾಲುಗಳು ಎದುರಾಗಿವೆ.
ಪ್ರತಿ ಗಣತಿದಾರರಿಗೆ 250 ಮನೆಗಳ ಸಮೀಕ್ಷೆ ನಡೆಸಲು ಕಾರ್ಯಭಾರ ನೀಡಲಾಗಿದ್ದು, ಇದು ಕಷ್ಟಕರವಾಗಿದೆ.ಇದನ್ನೂ ಓದಿ: ಬಿಹಾರ ಚುನಾವಣೆ: 17 ಹೊಸ ಉಪಕ್ರಮಗಳೊಂದಿಗೆ ಚುನಾವಣಾ ಆಯೋಗದ ಕ್ರಾಂತಿಕಾರಿ ಹೆಜ್ಜೆ
ಸಮೀಕ್ಷಾದಾರರನ್ನು ತಮ್ಮ ಮನೆಯಿಂದ ದೂರದ ಪ್ರದೇಶಗಳಿಗೆ ಅಥವಾ ವಾರ್ಡ್‌ಗಳಿಗೆ ನೇಮಿಸಲಾಗಿದೆ. ಇದರಿಂದ ಪ್ರಯಾಣಕ್ಕೆ ಹೆಚ್ಚು ಸಮಯ ವ್ಯಯಿಸಬೇಕಾಗಿದೆ. ಇದಲ್ಲದೆ, UHID ಸಂಖ್ಯೆ ನಮೂದಿಸಿದರೂ ಕೆಲವು ಪ್ರದೇಶಗಳಲ್ಲಿ ಲೊಕೇಶನ್ ತೆರೆದುಕೊಳ್ಳುತ್ತಿಲ್ಲ. ಇದರಿಂದ ಒಂದು ಮನೆಯ ಸಮೀಕ್ಷೆಗೆ 30-45 ನಿಮಿಷಗಳಷ್ಟು ಸಮಯ ಹಿಡಿಯುತ್ತಿದೆ. ಇದೀಗ ದಸರಾ ರಜೆ ಮುಗಿಯುತ್ತಿದ್ದು, ಸಮೀಕ್ಷೆಗೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಶಾಲೆ ಪ್ರಾರಂಭವಾದರೆ ಮತ್ತೊಂದು ಸಮಸ್ಯೆ ಎದುರಾಗಲಿದೆ.ಇದನ್ನೂ ಓದಿ: ಬಿಹಾರ ಚುನಾವಣೆ ನಂತರ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ: ಬಿಜೆಪಿ ಅಧ್ಯಕ್ಷ ವಿಜಯೇಂದ್ರ..!
ಶಾಲೆಗಳು ಆರಂಭವಾದರೆ, ಬೆಳಿಗ್ಗೆಯಿಂದ ಸಂಜೆಯವರೆಗೆ ತರಗತಿಗಳನ್ನು ನಡೆಸಿ, ಸಂಜೆ ನಂತರ ಸಮೀಕ್ಷೆ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಈ ಸವಾಲುಗಳ ಮಧ್ಯೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.SIRIL Women's Shimmer Chiffon Sequence Embroidery Saree With Unstitched Blouse Piece for Wedding and Parties