Skip to main content
ವಿಡಿಯೋ
1/2
local

ನಾಗಮಂಗಲದಲ್ಲಿ ಫೇಕ್ ದೆವ್ವದ ವಿಡಿಯೋ ವೈರಲ್: ಯುವಕನಿಗೆ ಪೊಲೀಸರ ತರಾಟೆ

By Pavitra Ganapathi Baradavalli
ನಾಗಮಂಗಲದಲ್ಲಿ ಫೇಕ್ ದೆವ್ವದ ವಿಡಿಯೋ ವೈರಲ್: ಯುವಕನಿಗೆ ಪೊಲೀಸರ ತರಾಟೆ

ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ದೆವ್ವದ ಫೇಕ್ ವಿಡಿಯೋ ಹಂಚಿಕೊಂಡ ಯುವಕನಿಗೆ ಮಂಡ್ಯ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಗಮಂಗಲದ ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿ ಬೈಕ್ ಸವಾರನಿಗೆ ದೆವ್ವ ಕಾಣಿಸಿಕೊಂಡಿದೆ ಎಂಬ ವಿಡಿಯೋ ವೈರಲ್ ಆಗಿತ್ತು.

ಮಂಡ್ಯ: ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ದೆವ್ವದ ಫೇಕ್ ವಿಡಿಯೋ ಹಂಚಿಕೊಂಡ ಯುವಕನಿಗೆ ಮಂಡ್ಯ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಗಮಂಗಲದ ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿ ಬೈಕ್ ಸವಾರನಿಗೆ ದೆವ್ವ ಕಾಣಿಸಿಕೊಂಡಿದೆ ಎಂಬ ವಿಡಿಯೋ ವೈರಲ್ ಆಗಿತ್ತು.ಇದನ್ನೂ ಓದಿ: ಜಾತಿ ಗಣತಿ ಸಮೀಕ್ಷೆ ಮುಗಿಸಲು ಒಂದೇ ದಿನ ಬಾಕಿ...ನಾಳೆಯೊಳಗೆ ಮುಗಿಯೋದು ಡೌಟ್! ಗಡುವು ಹೆಚ್ಚಿಸುತ್ತಾ ಸರ್ಕಾರ!


ಈ ವಿಡಿಯೋದಿಂದ ಆ ರಸ್ತೆಯಲ್ಲಿ ಓಡಾಡಲು ಜನರು ಭಯಪಡುತ್ತಿದ್ದರು.ನಾಗಮಂಗಲ ಟೌನ್‌ನ ಗೋಪಿ ಎಂಬ ಯುವಕ ಈ ಫೇಕ್ ವಿಡಿಯೋವನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ. ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಾಗಮಂಗಲ ಪೊಲೀಸರು, ಗೋಪಿಯಿಂದ ತಪ್ಪೊಪ್ಪಿಗೆ ಪಡೆದಿದ್ದಾರೆ
.ಇದನ್ನೂ ಓದಿ: ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!


ಆತ ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ.ಪೊಲೀಸರು ಗೋಪಿಯ ತಪ್ಪೊಪ್ಪಿಗೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಫೇಕ್ ವಿಡಿಯೋಗಳನ್ನು ನಂಬದಂತೆ ಮತ್ತು ಭಯಬೀಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ಕೃತ್ಯಗಳು ಸಮಾಜದಲ್ಲಿ ಗೊಂದಲ ಸೃಷ್ಟಿಸುವುದರಿಂದ ಕಾನೂನು ಕ್ರಮಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
SIRIL Women's Shimmer Chiffon Sequence Embroidery Saree With Unstitched Blouse Piece for Wedding and Parties