Skip to main content
ವಿಡಿಯೋ
1/3
weather

ಮಂಡ್ಯದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

By Pavitra Ganapathi Baradavalli
ಮಂಡ್ಯದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಮಂಡ್ಯ ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗುತ್ತಿದ್ದು, ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದಾಗಿ ನಗರದ ಕೆಹೆಚ್‌ಬಿ ಕಾಲೋನಿಯ ಒಳಗೆ ನೀರು ನುಗ್ಗಿ ಜನರಿಗೆ ತೊಂದರೆ ಉಂಟಾಗಿದೆ.

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗುತ್ತಿದ್ದು, ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದಾಗಿ ನಗರದ ಕೆಹೆಚ್‌ಬಿ ಕಾಲೋನಿಯ ಒಳಗೆ ನೀರು ನುಗ್ಗಿ ಜನರಿಗೆ ತೊಂದರೆ ಉಂಟಾಗಿದೆ. ಮನೆಯಿಂದ ಹೊರಬರಲಾಗದೆ ಜನರು ತೀವ್ರ ಪರದಾಟ ನಡೆಸುತ್ತಿದ್ದಾರೆ.ಇದನ್ನೂ ಓದಿ: ಟ್ರಂಪ್‌ಗೆ ಸಿಗುತ್ತಾ ಶಾಂತಿ ನೊಬೆಲ್‌ ಪುರಸ್ಕಾರ..?? ಇಷ್ಟು ದಿನಗಳ ಟ್ರಂಪ್‌ ಕನಸು ಈಡೇರುತ್ತಾ..??


ರಸ್ತೆಗಳಲ್ಲಿ ನೀರು ತುಂಬಿ ಒದ್ದಾಡುವಂತೆ ಆಗಿದ್ದು, ಸಾರಿಗೆ ವ್ಯವಸ್ಥೆ ಸಹ ಸಂಪೂರ್ಣ ಬಂದ್‌ ಆಗಿದೆ. ಈ ಮಧ್ಯೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದರಲ್ಲಿ ಪೋಷಕರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಶಾಲೆಗಳಿಗೆ ತೆರಳಲು ದಾರಿಯಲ್ಲಿ ನೀರು ತುಂಬಿರುವುದರಿಂದ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಗೃಹ ಇಲಾಖೆ, ಐಟಿ, ಇಡಿ, ಎಸ್‌ಐಟಿ ಸೇರಿದಂತೆ ಅಗ್ರ ಅಧಿಕಾರಿಗಳಿಗೆ ನೋಟಿಸ್ ಜಾರಿ!


ಪ್ರಾಥಮಿಕ ವರದಿಗಳ ಪ್ರಕಾರ, ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿದ್ದು, ಜನರು ಮಳೆಗೆ ಹೈರಾಣಾಗಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲಾಡಳಿತ ತುರ್ತು ಸಹಾಯ ತಂಡಗಳನ್ನು ರವಾನಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸುತ್ತಿದ್ದು, ಮಳೆ ಸದ್ಯಕ್ಕೆ ಹೆಚ್ಚಾಗಿರುವ ಹಿನ್ನೆಲೆ ಜನರಿಗೆ ಎಚ್ಚರಿಕೆ
 ನೀಡಲಾಗಿದೆ.SIRIL Women's Shimmer Chiffon Sequence Embroidery Scalloped Border Saree With Unstitched Blouse Piece