ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಟ್ವೀಟ್ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ. ಶುಕ್ರವಾರ, ಭಾರತದ ವಿದೇಶಾಂಗ ಸಚಿವರೊಟ್ಟಿಗೆ ಮಾತುಕತೆ ನಡೆಸಿದ ಬಳಿಕ ಆಫ್ಗನ್ ವಿದೇಶಾಂಗ ಸಚಿವ ಆಮಿರ್ ಖಾನ್ ಮುತ್ತಾಖಿ ಪತ್ರಿಕಾಗೋಷ್ಠಿಯ ವೇಳೆ ಮಹಿಳಾ ಪತ್ರಕರ್ತರನ್ನು ಹೊರಗಿರಿಸಿರುವುದನ್ನು ಖಂಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವೇನು ಎಂದು ಪ್ರಶ್ನಿಸಿದ್ದಾರೆ.
ಭಾರತಕ್ಕೆ ಭೇಟಿ ನೀಡಿರುವ ಆಫ್ಘಾನಿಸ್ತಾನದ ವಿದೇಶಾಂಗ ಸಚಿವರಾದ ಆಮಿರ್ ಖಾನ್ ಮುತ್ತಾಖಿ ಅವರ ಸುದ್ದಿಗೋಷ್ಠಿಯ ವೇಳೆ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟದ್ದೇಕೆ ಎಂದು ಅವರು ಪ್ರಶ್ನಿಸಿದರು. ಈ ಘಟನೆ ದೇಶದ ಮಹಿಳೆಯರಿಗೆ ಮಾಡಿದ ಅವಮಾನವೆಂದು ಪ್ರತಿಪಾದಿಸಿದರು. ನಮ್ಮ ದೇಶದಲ್ಲಿ ಮಹಿಳೆಯರು ಸಮರ್ಥವಾಗಿ ದೇಶದ ಭಾಗವಾಗಿರುವಾಗ ಈ ಅವಮಾನವನ್ನು ಹೇಗೆ ಅನುಮತಿಸಲಾಯಿತು ಎಂದು ಅವರು ಕೇಳಿದ್ದಾರೆ. Fujifilm Instax Square SQ1 Camera - Terracotta Orange
ಶುಕ್ರವಾರ ನವದೆಹಲಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆದ ಬಳಿಕ ಹಾಗೂ ಅವರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಮಹಿಳೆಯರ ಅನುಪಸ್ಥಿತಿ ಎದ್ದು ಕಂಡು ಸೀಮಿತ ಪತ್ರಕರ್ತರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಅನೇಕ ಆರೋಪಗಳು ಕೇಳಿಬಂದಿದ್ದು, ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯ ಕುರಿತಾಗಿ ವ್ಯಾಪಕ ಖಂಡನೆ ಉಂಟಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಬಿಹಾರ: RJDಗೆ ಸೇರ್ಪಡೆಯಾದ JDU ಸಂಸದರ ಮಗ; ತೇಜಸ್ವಿ ಯಾದವ್ ‘ನನ್ನ ಅಣ್ಣನಂತೆʼ ಎಂದ ರಂಜನ್
ತಮ್ಮ ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಪ್ರಧಾನಿ ಮೋದಿ ಅವರೇ, ಭಾರತಕ್ಕೆ ಭೇಟಿ ನೀಡಿರುವ ತಾಲಿಬಾನ್ ಪ್ರತಿನಿಧಿಯ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಹಿಳೆಯರನ್ನು ದೂರವಿರಿಸಿರುವ ಬಗ್ಗೆ ನಿಮ್ಮ ನಿಲುವೇನು ಎಂಬುದನ್ನ ದಯವಿಟ್ಟು ತಿಳಿಸಿ ಎಂದಿದ್ದಾರೆ. ಸ್ತ್ರೀಯರೇ ಹೆಮ್ಮೆ ಹಾಗೂ ಬೆನ್ನೆಲುಬಾಗಿರುವ ದೇಶದಲ್ಲಿ ಮಹಿಳೆಯರಿಗೆ ಇಂಥ ಅವಮಾನ ಆಗಲು ಹೇಗೆ ಸಾಧ್ಯವಾಯಿತು?” ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಐಎಸ್ಐ ಸಂಪರ್ಕ ಆರೋಪ: ರಾಜಸ್ಥಾನದಲ್ಲಿ ಆರೋಪಿಯು ಬಂಧನ!