Skip to main content
ವಿಡಿಯೋ
1/3
general

ದಾವಣಗೆರೆಯಲ್ಲಿ ಲೋಕಾಯುಕ್ತ ದಾಳಿ: ಇಬ್ಬರು ಸರ್ಕಾರಿ ಇಂಜಿನಿಯರ್‌ಗಳ ಮನೆ-ಕಚೇರಿಗಳಲ್ಲಿ ಶೋಧ!

By Pavitra Ganapathi Baradavalli
ದಾವಣಗೆರೆಯಲ್ಲಿ ಲೋಕಾಯುಕ್ತ ದಾಳಿ: ಇಬ್ಬರು ಸರ್ಕಾರಿ ಇಂಜಿನಿಯರ್‌ಗಳ ಮನೆ-ಕಚೇರಿಗಳಲ್ಲಿ ಶೋಧ!

ನಗರದಲ್ಲಿ ಬೆಳಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳ ತೀವ್ರ ಕಾರ್ಯಾಚರಣೆ ಆರಂಭವಾಗಿದ್ದು, ಭ್ರಷ್ಟಾಚಾರ ಆರೋಪದಡಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ.

ದಾವಣಗೆರೆ: ನಗರದಲ್ಲಿ ಬೆಳಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳ ತೀವ್ರ ಕಾರ್ಯಾಚರಣೆ ಆರಂಭವಾಗಿದ್ದು, ಭ್ರಷ್ಟಾಚಾರ ಆರೋಪದಡಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಜ್ಯೂನಿಯರ್ ಇಂಜಿನಿಯರ್ ಬಿ. ನಡುವಿನಮನಿ ಅವರ ನಿವಾಸದಲ್ಲಿ ಲೋಕಾಯುಕ್ತ ತಂಡವು ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.ಇದನ್ನೂ ಓದಿ: ನೇರ ತೆರಿಗೆ ಸಂಗ್ರಹ ಶೇ. 6.33 ರಷ್ಟು ಹೆಚ್ಚಳ, 11.89 ಲಕ್ಷ ಕೋಟಿ ರೂಪಾಯಿಗೆ ಏರಿಕೆ…!!


ಅಲ್ಲದೆ, KRIDL ಎಇಇ ಜಗದೀಶ್ ನಾಯ್ಕ್ ಅವರ ಮನೆ ಮತ್ತು ಕಚೇರಿಗಳಲ್ಲಿ ವ್ಯಾಪಕ ಶೋಧ ನಡೆಯುತ್ತಿದ್ದು, ಅಪಾರ ಪ್ರಮಾಣದ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.KRIDL ಎಇಇ ಜಗದೀಶ್ ನಾಯ್ಕ್ ಕಚೇರಿಯಲ್ಲಿ ಮುಂದುವರಿದ ದಾಖಲಾತಿ ಪರಿಶೀಲನೆಯು ಗಂಟೆಗಳ ಕಾಲ ನಡೆದಿದ್ದು, ಆರ್ಥಿಕ ದುರ್ಬಳಕೆ ಮತ್ತು ಅಕ್ರಮ ಆಸ್ತಿ ಸಂಗ್ರಹಕ್ಕೆ ಸಂಬಂಧಿಸಿದ ಮಾಹಿತಿ ಪತ್ತೆಯಾಗುತ್ತಿದೆ ಎನ್ನಲಾಗಿದೆ.ಇದನ್ನೂ ಓದಿ: ಈಜಿಪ್ಟ್ ಶಾಂತಿ ಸಮ್ಮೇಳನದಲ್ಲಿ ಭಾರತವನ್ನು ಕೊಂಡಾಡಿ, ಪಾಕಿಸ್ತಾನದ ಕಾಲೆಳೆದ ಅಧ್ಯಕ್ಷ ಟ್ರಂಪ್‌


ದಾವಣಗೆರೆಯ ಲೋಕಿಕೆರೆ ರಸ್ತೆಯಲ್ಲಿ ಇರುವ ಕಚೇರಿಯಲ್ಲಿ ಕಡತಗಳ ಪರಿಶೀಲನೆಯು ತೀವ್ರಗೊಂಡಿದ್ದು, ಸ್ಥಳೀಯರು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಹಲವು ಮುಖ್ಯ ದಾಖಲೆಗಳು ಬೆಳಕಿಗೆ ಬರುವ ನಿರೀಕ್ಷೆಯಿದೆ. ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ನಡೆಯುತ್ತಿರುವ ದಾಳಿಯು ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಹೊಸ ಆಯಾಮ ನೀಡಿದೆ.Sidhidata Women's Kanjivaram Banarasi Soft Silk Saree With Unstitched Blouse Piece (Silk Box Flower)