ಭಾರತದ ಆದಾಯ ತೆರಿಗೆ ಇಲಾಖೆಯು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹವು ಶೇ.6.33ರಷ್ಟು ಏರಿಕೆಯೊಂದಿಗೆ 11.89 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.ಬಲಿಷ್ಠ ಕಾರ್ಪೊರೇಟ್ ತೆರಿಗೆ ಸಂಗ್ರಹ ಮತ್ತು ಮರುಪಾವತಿಗಳಲ್ಲಿ ನಿಧಾನಗತಿಯ ಬೆಳವಣಿಗೆಯಿಂದಾಗಿ ನೇರ ತೆರಿಗೆ ಆದಾಯ ಹೆಚ್ಚಾಗಿದೆ ಎಂದು ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.ಇದನ್ನೂ ಓದಿ: NHAIಯ ಕೊಳಕು ಶೌಚಾಲಯಗಳನ್ನು ವರದಿ ಮಾಡಿ ₹1,000 FASTag ರೀಚಾರ್ಜ್ ಗೆದ್ದುಕೊಳ್ಳಿ: ಹೇಗೆ? ಮಾಹಿತಿ ಹೀಗಿದೆ
ಒಟ್ಟು ನೇರ ತೆರಿಗೆ ಸಂಗ್ರಹವು 13.92 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 13.60 ಲಕ್ಷ ಕೋಟಿ ರೂಪಾಯಿಗಳಿದ್ದವು. ಮರುಪಾವತಿಗಳು 2.03 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿದಿದ್ದು, 2024-25ರಲ್ಲಿ 2.41 ಲಕ್ಷ ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಶೇ.16ರಷ್ಟು ಕುಸಿತ ಕಂಡಿದೆ.ನಿವ್ವಳ ಸಂಗ್ರಹದಲ್ಲಿ ಕಾರ್ಪೊರೇಟ್ ತೆರಿಗೆಗಳು 4.91 ಲಕ್ಷ ಕೋಟಿಯಿಂದ 5.02 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿವೆ.ಇದನ್ನೂ ಓದಿ: ಬೆಂಗಳೂರಿನ ಕ್ಲಾರೆನ್ಸ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ...ಕಾರಣ ಇನ್ನೂ ಅಸ್ಪಷ್ಟ!
ವ್ಯಕ್ತಿಗತ ಮತ್ತು ಹಿಂದೂ ಅವಿಭಕ್ತ ಕುಟುಂಬ (HUF) ಸೇರಿದಂತೆ ಕಾರ್ಪೊರೇಟ್ ಅಲ್ಲದ ತೆರಿಗೆ ಸಂಗ್ರಹಗಳು 5.94 ಲಕ್ಷ ಕೋಟಿಯಿಂದ 6.56 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿವೆ.ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಸಂಗ್ರಹವು 30,878 ಕೋಟಿ ರೂಪಾಯಿಗಳಿಗೆ ಸ್ವಲ್ಪ ಏರಿಕೆ ಕಂಡಿದ್ದು, ಇತರ ಸಣ್ಣ ತೆರಿಗೆಗಳು 294 ಕೋಟಿ ರೂಪಾಯಿಗಳಿಗೆ ತಲುಪಿವೆ.ಇದನ್ನೂ ಓದಿ: ಹೆಲ್ಮೆಟ್ ಇಲ್ಲ, ರಾಂಗ್ ರೂಟ್ ಡ್ರೈವ್: ಮತ್ತೊಬ್ಬ ವಾಹನ ಚಾಲಕನಿಗೆ ಅವಾಜ್
2025-26ರ ಪೂರ್ಣ ಹಣಕಾಸು ವರ್ಷಕ್ಕೆ ಸರ್ಕಾರವು 25.20 ಲಕ್ಷ ಕೋಟಿ ರೂಪಾಯಿಗಳ ನೇರ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.12.7ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ವರ್ಷದಲ್ಲಿ STTಯಿಂದ 78,000 ಕೋಟಿ ರೂಪಾಯಿಗಳ ಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ.Sidhidata Women's Kanjivaram Banarasi Soft Silk Saree With Unstitched Blouse Piece (Silk Box Flower)