ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳು, ಪ್ರವಾಹ, ಟ್ರಾಫಿಕ್ ದಟ್ಟಣೆಗಳಂತಹ ಗಂಭೀರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ ಉದ್ಯಮಿಗಳನ್ನು ಬೆದರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಮಂತ್ರಿಗಳ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ವಾಸ್ತವಿಕ ಸಮಸ್ಯೆಗಳ ಬಗ್ಗೆ ಮಾತನಾಡಿದವರನ್ನು ಬೆದರಿಸುವುದು ಪ್ರಜಾಪ್ರಭುತ್ವವೇ? ಎಂದು ಪ್ರಶ್ನಿಸಲಾಗಿದೆ.ಇದನ್ನೂ ಓದಿ: ಭಾರತದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?
ಈಗಾಗಲೇ ಬೆಂಗಳೂರು ಐಟಿ ಹಬ್ನಿಂದ ಗುಂಡಿ ಹಬ್ ಆಗಿದೆ ಎಂದು ಟೀಕಿಸಲಾಗಿದ್ದು, ಉದ್ಯಮಿಗಳನ್ನು ಓಡಿಸಿ ನಿರುದ್ಯೋಗ ಹೆಚ್ಚಿಸುವ ಗುರಿಯೇ? ಎಂದು ಕೇಳಲಾಗಿದೆ. ದುರಾಡಳಿತದಿಂದ 30,000 ಉದ್ಯೋಗ ಸೃಷ್ಟಿಸಿ 10,000 ಕೋಟಿ ಆದಾಯ ನೀಡಬಲ್ಲ ಗೂಗಲ್ ಎಐ ಹಬ್ ಆಂಧ್ರಪ್ರದೇಶಕ್ಕೆ ಹೋಗಿದೆ.ಇದನ್ನೂ ಓದಿ: 2025ರಲ್ಲಿ ಭಾರತವೇ ವಿಶ್ವದಲ್ಲಿ ವೇಗವಾಗಿ ಬೆಳೆಯುವ ಆರ್ಥಿಕ ಶಕ್ತಿ : IMF ವರದಿ
ಏಷ್ಯಾದ ಅತಿದೊಡ್ಡ ಗೂಗಲ್ ಹೂಡಿಕೆಯನ್ನು ಕಳೆದುಕೊಂಡಿದ್ದಕ್ಕೆ ನಾಚಿಕೆಯಿಲ್ಲವೇ? ಎಂದು ಐಟಿ ಮಂತ್ರಿ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ಪ್ರಶ್ನಿಸಲಾಗಿದೆ.ಕೋಮು ಗಲಭೆ ಹುಟ್ಟಿಸುವ ಬದಲು ಉದ್ಯಮಗಳನ್ನು ಬೆಳೆಸಿ ಎಂದು ಸಲಹೆ ನೀಡಲಾಗಿದ್ದು, ಸತ್ಯ ಮಾತನಾಡಿದವರನ್ನು ಬೆದರಿಸುವುದು ಕಾಂಗ್ರೆಸ್ನ ಪ್ರಜಾಪ್ರಭುತ್ವ ನೀತಿಯೇ? ಎಂದು ಟ್ವೀಟ್ನಲ್ಲಿ ಸಿಟಿ ರವಿ ಅವರು ಕಾಂಗ್ರೆಸ್ ಸರ್ಕಾರವನ್ನು ಕುರಿತು ಟ್ವೀಟರ್‌ನಲ್ಲಿ ಕಿಡಿಕಾರಿದ್ದಾರೆ.
ಈ ಟೀಕೆಗಳು ನಗರದ ಮೂಲಸೌಕರ್ಯ ಸಮಸ್ಯೆಗಳು ಮತ್ತು ಉದ್ಯಮ ಸ್ನೇಹಿ ವಾತಾವರಣದ ಕೊರತೆಯನ್ನು ಎತ್ತಿ ತೋರಿಸುತ್ತವೆ.SIRIL Women's Chiffon Sequence Embroidery Lace Saree with Unstitched Blouse Piece