ಬೆಂಗಳೂರು: ಬಿ- ಫಾರ್ಮಸಿ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರ ನಿರ್ಲಕ್ಯ ಎದ್ದು ಕಾಣುತ್ತಿರುವುದು ಕಂಡು ಬರುತ್ತಿದೆ. ಪ್ರಿಯಾ ಕುಟುಂಬ 6 ತಿಂಗಳ ಹಿಂದೆಯಷ್ಟೇ ವಿದ್ಯಾರ್ಥಿನಿ ಹಿಂದೆ ಬಿದ್ದು ಯುವಕ ತೊಂದರೆ ಕೊಡುತ್ತಿದ್ದಾನೆ ಎಂದು ಠಾಣೆಗೆ ದೂರನ್ನೂ ನೀಡಿತ್ತು. ಶ್ರೀರಾಮ್‌ಪುರ ಪೊಲೀಸ್ ಠಾಣೆಯಲ್ಲಿ ವಿಘ್ನೇಶ್ ವಿರುದ್ಧ ದೂರನ್ನ ದಾಖಲಿಸಿದ್ದ ಕುಟುಂಬಸ್ತರು.ಇದನ್ನೂ ಓದಿ: ಬಿಹಾರ ಚುನಾವಣೆ ಮುನ್ನ ಕಣ್ಗಾವಲು ಬಿಗಿ:ಆರ್‌ಬಿಐ, ಸಿಬಿಡಿಟಿ ಸೇರಿ ಇಂದು ಬೆಳಿಗ್ಗೆ 11ಕ್ಕೆ ಮೀಟಿಂಗ್..!
ಆದರೆ ಪೊಲೀಸರು ವಾರ್ನ್ ಮಾಡದೇ ಬೇಜಾವಾಬ್ದಾರಿ ತೋರಿದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಈಗ ಕೊಲೆಯಾದ ಬಳಿಕ ವಿಘ್ನೇಶ್ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿರೋ ಪೊಲೀಸರು. ತನಿಖೆ ವೇಳೆ ವಿಘ್ನೇಶ್ ಸುಲಿಗೆಕೋರ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಸುತ್ತ ಮುತ್ತ ಇರುವ ಪೊಲೀಸ್ ಠಾಣೆಯಲ್ಲಿರುವ ಪೊಲೀಸರ ಹೆಸರು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದ ಅನ್ನುವ ವಿಷಯ ಈಗ ತಿಳಿದುಬಂದಿದೆ.ಇದನ್ನೂ ಓದಿ: ಗುಜರಾತ್‌ನಲ್ಲಿ ನೂತನ ಸಚಿವ ಸಂಪುಟ ರಚನೆ - 22 ಸಚಿವರ ಪ್ರಮಾಣವಚನ ಸ್ವೀಕಾರ
ತನ್ನ ಪ್ರೀತಿ ನಿರಾಕರಿಸಿದಕ್ಕೆ ಈ ಕೃತ್ಯ ಮಾಡಿದ್ದಾನೆ ಎನ್ನಲಾಗುತ್ತಿದೆ. ಯಾಮಿನಿ ಪ್ರಿಯಾ ನಿನ್ನೆ ಕಾಲೇಜು ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ವಿಘ್ನೇಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಅಂದು ದೂರು ನೀಡಿದ ತಕ್ಷಣ ಪೊಲೀಸರು ಕ್ರಮ ತೆಗೆದುಕೊಂಡಿದ್ದರೆ ಈ ರೀತಿಯ ಕೃತ್ಯ ಇಂದು ಸಂಭವಿಸುತ್ತಿರಲಿಲ್ಲ ಎಂದು ಕುಟುಂಬಸ್ಥರು ಪೊಲೀಸರನ್ನು ದೂರುತ್ತಿದ್ದಾರೆ. ಸದ್ಯ ಪೊಲೀಸರು ಎರೆಡು ತಂಡ ರಚಿಸಿಕೊಂಡು ಆರೋಪಿ ವಿಘ್ನೇಶ್ ಹುಡುಕಾಟದಲ್ಲಿ ತೊಡಗಿದ್ದಾರೆ.SGF11 Women's Kanjivaram Patola Soft Pure Silk Sarees With Unstitched Blouse Piece
ಯುವತಿಯ ಕಣ್ಣಿಗೆ ಖಾರದ ಪುಡಿ ಎರಚಿ ಕತ್ತು ಕೊಯ್ದು ಅಮಾನುಷವಾಗಿ ಹತ್ಯೆಗೈದಿದ್ದ ವಿಘ್ನೇಶ್. ಮಂತ್ರಿ ಮಾಲ್ ಹಿಂಭಾಗ ಇರುವ ರೈಲ್ವೆ ಟ್ರಾಕ್ ಬಳಿ ಹತ್ಯೆಯನ್ನು ನಡೆಸಲಾಗಿದೆ. ಸದ್ಯ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.ಇದನ್ನೂ ಓದಿ: ಬಿಹಾರ 2025 ಚುನಾವಣೆ: ಖೇಸರಿ ಲಾಲ್ ಯಾದವ್ RJDಗೆ ಬೆಳಕು ಚೆಲ್ಲಲಿದ್ದಾರೆ, ಈ ಕ್ಷೇತ್ರದಿಂದ ಸ್ಪರ್ಧೆ..!