Skip to main content
ವಿಡಿಯೋ
1/3
crime

ವೈದ್ಯ ಪತಿಯಿಂದಲೇ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌…!!

By Pavitra Ganapathi Baradavalli
ವೈದ್ಯ ಪತಿಯಿಂದಲೇ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌…!!

ವೈದ್ಯ ಪತಿಯಿಂದಲೇ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಈಗ ಟ್ವಿಸ್ಟ್‌ ಸಿಕ್ಕಿದೆ. ಈ ಪ್ರಕರಣವನ್ನು ಬಗೆದಷ್ಟು  ಮತ್ತಷ್ಟು ಆಳಕ್ಕೆ ಹೋಗುತ್ತಿದೆ ಪ್ರಕರಣ. ಕೊಲೆ ಮಾಡಿ ಯಾವುದೇ ಕಾರಣಕ್ಕೂ ಸಿಕ್ಕಿ ಬೀಳಬಾರದೂ ಅಂತ ಸಿನಿಮಾ ಸ್ಟೈಲ್‌ನಲ್ಲಿ ಸಂಚು ರೂಪಿಸಿದ್ದ ಡಾಕ್ಟರ್‌ ಪತಿ.

ಬೆಂಗಳೂರು: ವೈದ್ಯ ಪತಿಯಿಂದಲೇ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಈಗ ಟ್ವಿಸ್ಟ್‌ ಸಿಕ್ಕಿದೆ. ಈ ಪ್ರಕರಣವನ್ನು ಬಗೆದಷ್ಟು  ಮತ್ತಷ್ಟು ಆಳಕ್ಕೆ ಹೋಗುತ್ತಿದೆ ಪ್ರಕರಣ. ಕೊಲೆ ಮಾಡಿ ಯಾವುದೇ ಕಾರಣಕ್ಕೂ ಸಿಕ್ಕಿ ಬೀಳಬಾರದೂ ಅಂತ ಸಿನಿಮಾ ಸ್ಟೈಲ್‌ನಲ್ಲಿ ಸಂಚು ರೂಪಿಸಿದ್ದ ಡಾಕ್ಟರ್‌ ಪತಿ. ಅನಸ್ತೇಷಿಯಾ ಬಗ್ಗೆ ಸಂಪೂರ್ಣ ಮಾಹಿತಿ ಅರಿತಿದ್ದ ಡಾ. ಮಹೇಂದ್ರ. ದೇಹದಲ್ಲಿ ಅನಸ್ತೇಷಿಯಾ ಹೆಚ್ಚು ಹೊತ್ತು ಇರೋದಿಲ್ಲಾ. ಕೊಟ್ಟಂತಹ ಅನಸ್ತೇಷಿಯಾ 4ಗಂಟೆಯ ಬಳಿಕ 50% ಕಡಿಮೆಯಾಗುತ್ತದೆ.ಇದನ್ನೂ ಓದಿ: ಕಾಡಸಿದ್ದೇಶ್ವರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ: ವಿಜಯಪುರ ಪ್ರವೇಶ ನಿಷೇಧದ ವಿರುದ್ಧ ಹೈಕೋರ್ಟ್ ಅರ್ಜಿ ವಜಾ!


24ಗಂಟೆ ಕಳೆದ್ರೆ ಅನಸ್ತೇಷಿಯಾದ ಸಂಪೂರ್ಣ ಅಂಶ ಪತ್ತೆಯಾಗುವುದಿಲ್ಲ. ಪೋಸ್ಟ್‌ಮಾರ್ಟಂ ಮಾಡಿದ್ರೂ ಅನಸ್ತೇಷಿಯಾ ವಿರಳ ಪತ್ತೆಯಾಗುತ್ತೆ ಎಂಬುದನ್ನ ಅರಿತಿದ್ದ ಪತಿ. ಹೀಗಾಗಿ ಪ್ಲಾನ್‌ ಮಾಡಿ ಪತ್ನಿ ಕೃತಿಕಾ ರೆಡ್ಡಿಗೆ ಅನಸ್ತೇಷಿಯಾ ಕೊಟ್ಟಿದ್ದ ಪತಿ. ಈ ರೀತಿ ಕೊಲೆ ಮಾಡಿದರೆ ನಾನು ಬಚಾವಾಗಬಹುದು ಎಂದು ತಿಳಿದು ಈ ಕೆಲಸ ಮಾಡಿದ್ದನು. ಪ್ರೊಪೊಫೋಲ್‌ ಅನ್ನುವಂಥ ಅನಸ್ತೇಷಿಯಾ ಕೊಟ್ಟಿದ್ದನು ಪತಿ ಡಾ. ಮಹೇಂದ್ರ.
ಇದನ್ನೂ ಓದಿ: ಬಿಹಾರ ಚುನಾವಣೆ: ಕಪ್ಪು ಹಣ ಹತ್ತಿಕ್ಕಲು ಜಾರಿ ಸಂಸ್ಥೆಗಳ ಸಭೆ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..!


ಆದರೆ ವೈದ್ಯ ಪತಿಯಿಂದಲೇ ಕೃತಿಕಾ ರೆಡ್ಡಿ ಕೊಲೆ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ. ಅದಕ್ಕೆ ಕೃತಿಕಾ ಮೃತ ದೇಹದ ಪೋಸ್ಟ್‌ಮಾರ್ಟಂ ಮಾಡುವುದು ಬೇಡ ಎಂದು ಹಠ ಹಿಡಿದಿದ್ದ ಪತಿ ಮಹೇಂದ್ರ ಆದರೆ ಅದಕ್ಕೆ ಕುಟುಂಬಸ್ಥರು ಒಪ್ಪದ ಕಾರಣ ಪೋಸ್ಟ್‌ಮಾರ್ಟ್ಂ ಮಾಡಿಸಿದ್ದಾರೆ ಆಗ ಬಯಲಾಗಿದೆ ನೋಡಿ. ಈ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಮಹೇಂದ್ರ ರೆಡ್ಡಿಯ ಮೊಬೈಲ್‌, ಲ್ಯಾಪ್‌ಟಾಪ್‌ ಎಲ್ಲವನ್ನೂ ಪೊಲೀಸರು ಸೀಜ್‌ ಮಾಡಿದ್ದಾರೆ. ಜೊತೆಗೆ ಪತ್ನಿಯ ಮೆಡಿಕಲ್‌ ಸರ್ಟಿಫಿಕೇಟ್ಸ್‌ ಮತ್ತು ಮೊಬೈಲ್‌ ಹಾಗೂ ಐಪ್ಯಾಡ್‌ ಅನ್ನು ಸಹ ಸೀಜ್‌ ಮಾಡಲಾಗಿದೆ.
ಇದನ್ನೂ ಓದಿ: ಬಿ- ಫಾರ್ಮಸಿ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಕೊಲೆ ಕೇಸ್‌ನಲ್ಲಿ ಪೊಲೀಸರ ಬೇಜಾವಾಬ್ದಾರಿ ಕಾರಣ..!!


ಸದ್ಯ ವೈದ್ಯ ಮಹೇಂದ್ರ ರೆಡ್ಡಿ ನಿವಾಸದಲ್ಲಿ ಪೊಲೀಸರು ಮಹಜರು ಕಾರ್ಯ ನಡೆಸಿದ್ದಾರೆ. ನಿನ್ನೆ ಸುಮಾರು 3ಗಂಟೆಗಳ ಕಾಲ ಮಹಜರು ಕಾರ್ಯವನ್ನು ನಡೆಸಿದ್ದರು. ಗುಂಜೂರಿನ ಮಹೇಂದ್ರ ರೆಡ್ಡಿ ನಿವಾಸದಲ್ಲಿ ನಡೆಯುತ್ತಿರುವ ಮಹಜರು ಕಾರ್ಯ. ಕ್ರತಿಕಾ ರೆಡ್ಡಿಯನ್ನು ಮದುವೆಯಾಗಲು ಸಂಪೂರ್ಣ ಇಷ್ಟವಿಲ್ಲದ ಕಾರಣ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.
SGF11 Women's Kanjivaram Patola Soft Pure Silk Sarees With Unstitched Blouse Piece