ಮೈಸೂರು ಅರಮನೆಯಲ್ಲಿ ಈ ವರ್ಷವೂ ದೀಪಾವಳಿ ಹಬ್ಬದ ಸಂಭ್ರಮವು ಜೋರಾಗಿ ನಡೆಯಿತು. ನಾಡಹಬ್ಬ ದಸರಾದ ನಂತರ ಮತ್ತೆ ಅರಮನೆಯ ವಾತಾವರಣವು ದೀಪಗಳ ಅಲಂಕಾರ ಮತ್ತು ಆಚರಣೆಗಳಿಂದ ಕಳೆಗಟ್ಟಿತ್ತು.
ಮೈಸೂರು ಅರಮನೆಯ ವಾತಾವರಣ ದೀಪಾಲಂಕಾರ ಮತ್ತು ಹಬ್ಬದ ಸಡಗರದಿಂದ ತುಂಬಿತ್ತು. ದೀಪಗಳ ಸಾಲಿನಲ್ಲಿ ಮಿನುಗುತ್ತಿದ್ದ ಅಂಬಾವಿಲಾಸ ಅರಮನೆಯು ದೀಪಾವಳಿಯ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿತು.Aster Water Sensor LED Light Diyas / Deepak ( Pack of 12 ) / Flameless & Smokeless Warm Ambient Tea Light Candles for Diwali , New Year Home / Mandir Decoration ( Brown )
ಈ ದೀಪಗಳ ಹಬ್ಬವನ್ನು ರಾಜವಂಶಸ್ಥರು ತಮ್ಮ ಕುಟುಂಬ ಸದಸ್ಯರೊಂದಿಗೆ ಹಾಗೂ ಅರಮನೆ ಸಿಬ್ಬಂದಿಯೊಂದಿಗೆ ಅತ್ಯಂತ ಸಡಗರದಿಂದ ಆಚರಿಸಿದರು. ದೀಪಾವಳಿಯ ಪ್ರಮುಖ ಭಾಗವಾದ ಪಟಾಕಿಗಳನ್ನು ಹಚ್ಚುವ ಮೂಲಕ ರಾಜವಂಶಸ್ಥರು ಸಂತೋಷವನ್ನು ವ್ಯಕ್ತಪಡಿಸಿದರು.
ಆಕರ್ಷಕವಾದ ಪಟಾಕಿಗಳ ಬೆಳಕು ಅರಮನೆಯ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ, ನೋಡಲು ಅತಿ ಸುಂದರವಾಗಿತ್ತು. ವಂಶಸ್ಥರೊಂದಿಗೆ ಕುಟುಂಬಸ್ಥರು ಮತ್ತು ಅರಮನೆಯ ಸಿಬ್ಬಂದಿ ಕೂಡ ಸೇರಿ ಸಂಭ್ರಮವನ್ನು ಇಮ್ಮಡಿಗೊಳಿಸಿದರು.ಇದನ್ನು ಓದಿ: ಅಕ್ರಮ ಮರಳು ಸಾಗಣೆ - ಸಿಎಂ ಗೆ ಪತ್ರ ಬರೆದ ಬಸವರಾಜ ರಾಯರೆಡ್ಡಿ ವಿರುದ್ದ ತಿರುಗಿ ಬಿದ್ದ ಅಧಿಕಾರಿಗಳ ವರ್ಗ!?
ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಸಿಹಿ ಹಂಚಿ ದೀಪಾವಳಿಯ ಸಂಭ್ರಮವನ್ನು ಮಾಡಲಾಯಿತ್ತು. ಮೈಸೂರು ಅರಮನೆಯು ದೀಪಾಲಂಕಾರದಿಂದ ಮತ್ತಷ್ಟು ಕಂಗೊಳಿಸಿ, ನಾಡಿನ ಜನತೆಗೆ ರಾಜಮನೆತನದ ಸಂಪ್ರದಾಯಬದ್ಧ ಹಬ್ಬದ ಆಚರಣೆಯನ್ನು ಪರಿಚಯಿಸಿತು.ಇದನ್ನು ಓದಿ: RSS ಪಥಸಂಚಲನದಲ್ಲಿ ಭಾಗಿಯಾದ PDOಗೆ ಮತ್ತೊಂದು ಸಂಕಷ್ಟ...ಹಣದುರ್ಬಳಕೆ ಪ್ರಕರಣ ಆರೋಪ!