ರೇಣುಕಾಸ್ವಾಮಿ ಕೊಲೆ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರದೂಷ್ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೆಷನ್ಸ್ ಕೋರ್ಟ್ನಲ್ಲಿ ನಡೆಯಿತು. ವಾದ-ಪ್ರತಿವಾದಗಳು ಮುಕ್ತಾಯಗೊಂಡಿದ್ದು, ಕೋರ್ಟ್ ನಾಳೆ (ಅಕ್ಟೋಬರ್ 25) ತೀರ್ಪು ಪ್ರಕಟಿಸುವುದಾಗಿ ಘೋಷಿಸಿದೆ. ಪ್ರಕರಣದ ಈ ಹಂತದಲ್ಲಿ ಎಲ್ಲರ ಗಮನ ಕೋರ್ಟ್ ತೀರ್ಪಿನತ್ತ ನೆಟ್ಟಿದೆ.ಇದೇ ವೇಳೆ, ಈ ಪ್ರಕರಣದ ಎ-5 ಆರೋಪಿಯಾಗಿರುವ ನಂದೀಶ್ ಸಲ್ಲಿಸಿದ್ದ ಡಿಶ್ಚಾರ್ಜ್ ಅರ್ಜಿಯ ವಿಚಾರಣೆಗೂ ಸೆಷನ್ಸ್ ಕೋರ್ಟ್ನಲ್ಲಿ ಚರ್ಚೆ ನಡೆಯಿತು. ನಂದೀಶ್ ಪರ ವಕೀಲರು ವಾದ ಮಂಡಿಸಲು ಮತ್ತೆ ಸಮಯ ಕೋರಿ ಕೋರ್ಟ್ಗೆ ವಿನಂತಿಸಿದರು. ಆದರೆ ಕೋರ್