ಬೆಂಗಳೂರು: ಶ್ರೀರಾಮಪುರ ಮೆಟ್ರೋ ನಿಲ್ದಾಣದ ಬಳಿ ಪೆಟ್ರೋಲ್ ಕದಿಯುತ್ತಿದ್ದ ಯುವಕನನ್ನು ಪ್ರಶ್ನಿಸಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಮತ್ತು ಇಬ್ಬರು ಮೆಟ್ರೋ ಸಿಬ್ಬಂದಿಯ ಮೇಲೆ ಚಾಕು ಇರಿಯಲು ಯತ್ನಿಸಿದ ಘಟನೆ ನಡೆದಿದೆ.ಇದನ್ನೂ ಓದಿ: ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?
ವಿನಾಯಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಮೊನ್ನೆ ಬೆಳಗಿನ ಜಾವ ಪೆಟ್ರೋಲ್ ಕದಿಯಲು ಯತ್ನಿಸುತ್ತಿದ್ದ ವಿನಾಯಕನನ್ನು ಭದ್ರತಾ ಸಿಬ್ಬಂದಿ ಗಿರೀಶ್ ಹಾಗೂ ಇಬ್ಬರು ಮೆಟ್ರೋ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತುಕತೆ ವಾಗ್ವಾದಕ್ಕೆ ತಿರುಗಿ, ಕೋಪಗೊಂಡ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.ಇದನ್ನೂ ಓದಿ: ರಷ್ಯಾ-ಅಮೆರಿಕ-ಉಕ್ರೇನ್: ರಾಜತಾಂತ್ರಿಕ ಪರಿಹಾರ ಹತ್ತಿರದಲ್ಲಿದೆ ಎಂದ ರಷ್ಯಾದ ಪ್ರತಿನಿಧಿ!
ಈ ಘಟನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಿರೀಶ್ ಅವರ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಮೆಟ್ರೋ ಸಿಬ್ಬಂದಿ 112 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಶ್ರೀರಾಮಪುರ ಪೊಲೀಸರು ಆರೋಪಿ ವಿನಾಯಕನನ್ನು ವಶಕ್ಕೆ ಪಡೆದು, ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಹಿಜಾಬ್ ಪ್ರಕರಣ: ಶಾಲೆಯಲ್ಲಿ ಹಿಜಾಬ್ ನಿಷೇಧ, ಕೇರಳದ ಪ್ರಕರಣ ಅಂತ್ಯವಾಗಿದ್ದು ಹೇಗೆ?
ಈ ಸಂಬಂಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಟ್ರೋ ನಿಲ್ದಾಣದ ಸಮೀಪ ನಡೆದ ಈ ಕೃತ್ಯದಿಂದಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.INDO ERA Women's Straight Linen Floral Printed Kurta & Pant with Dupatta Set (IEOUT10562)