ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಿಜಿಪಿ ಡಾ. ಎಂ.ಎ. ಸಲೀಂ ಐಪಿಎಸ್ ಅವರು ಇಲಾಖೆಯಲ್ಲಿ ಪಾರದರ್ಶಕತೆ, ಸೌಜನ್ಯ ಮತ್ತು ವೃತ್ತಿಪರತೆಯನ್ನು ಕಾಪಾಡುವ ನಿಟ್ಟಿನಲ್ಲಿ 18 ಅಂಶಗಳ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದ್ದಾರೆ.ಇದನ್ನೂ ಓದಿ: ಮೆಟ್ರೋ ಸಿಬ್ಬಂದಿ ಮೇಲೆ ಚಾಕು ಇರಿತಕ್ಕೆ ಯತ್ನ: ಪೆಟ್ರೋಲ್ ಕಳ್ಳನ ಕೃತ್ಯ..!!
ಸುತ್ತೋಲೆಯ ಪ್ರಕಾರ, ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರೊಂದಿಗೆ ಗೌರವಯುತವಾಗಿ ವರ್ತಿಸಬೇಕು. ಅಧಿಕಾರ ದುರ್ಬಳಕೆಯಿಂದ ದೂರವಿರಬೇಕು ಮತ್ತು ಯಾವುದೇ ಸಂದರ್ಭದಲ್ಲಿಯೂ ಮಹಿಳೆಯರೊಂದಿಗೆ ಸೂಕ್ಷ್ಮವಾಗಿ ಮತ್ತು ಸಂವೇದನಾಶೀಲರಾಗಿ ವ್ಯವಹರಿಸುವಂತೆ ಡಿಜಿಪಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.ಇದನ್ನೂ ಓದಿ: ತೇಜಸ್ವಿ ಸೂರ್ಯ 'ಖಾಲಿ ಟ್ರಂಕ್' ಇದ್ದಂತೆ, ಅವರ ಮಾತಿಂದ ಸುರಂಗ ಮಾರ್ಗ ಯೋಜನೆ ನಿಲ್ಲಲ್ಲ; ಡಿಕೆಶಿ ಸ್ಪಷ್ಟನೆ
ಪ್ರತಿಯೊಬ್ಬ ಅಧಿಕಾರಿ ಅಥವಾ ಸಿಬ್ಬಂದಿ ಕಾನೂನುಬದ್ಧ, ನ್ಯಾಯಸಮ್ಮತ ಮತ್ತು ಶಿಸ್ತುಬದ್ಧ ನಡತೆಯನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಮೂಲಕ ಪೊಲೀಸ್ ಇಲಾಖೆಯ ಬಗ್ಗೆ ನಾಗರಿಕರಲ್ಲಿ ವಿಶ್ವಾಸ ಮತ್ತು ಗೌರವ ಹೆಚ್ಚಿಸಲು ಡಿಜಿಪಿ ಕ್ರಮ ಕೈಗೊಂಡಿದ್ದಾರೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಘಟಕಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.INDO ERA Women's Straight Linen Floral Printed Kurta & Pant with Dupatta Set (IEOUT10562)