ಬೆಂಗಳೂರು: ಪುಷ್ಪ ಸಿನಿಮಾದಲ್ಲಿ ರಕ್ತಚಂದನ ಸ್ಮಗ್ಲಿಂಗ್‌ನ ದೃಶ್ಯಗಳನ್ನು ನೋಡಿರುವಿರಿ. ಇದೇ ರೀತಿಯ ಪ್ರೇರಣೆಯಿಂದ ಖತರ್ನಾಕ್ ಶ್ರೀಗಂಧ ಕಳ್ಳರು ಈರುಳ್ಳಿ ಮೂಟೆಗಳಲ್ಲಿ ಶ್ರೀಗಂಧವನ್ನು ಸಾಗಿಸುತ್ತಿದ್ದು, ಸಿದ್ಧಾಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.ಇದನ್ನೂ ಓದಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ದುರಂತ: ಶಿಕಾರಿಪುರ ಮಾಜಿ ಶಾಸಕನನ್ನು ತಿವಿದು ಕೆಳಗೆ ಎಸೆದ ಹೋರಿ
ಈರುಳ್ಳಿ ಮೂಟೆಗಳನ್ನು ಸಾಗಿಸುತ್ತಿದ್ದ ವ್ಯಾನ್ನ ತಪಾಸಣೆ ವೇಳೆ ಪೊಲೀಸರು ಒಂದು ಕ್ಷಣ ದಿಗ್ಭ್ರಮೆಗೊಂಡರು. ಕಾರಣ, ಕಳ್ಳರು ಈರುಳ್ಳಿ ಮೂಟೆಗಳ ಕೆಳಗೆ ಶ್ರೀಗಂಧದ ಮರದ ತುಂಡುಗಳನ್ನು ಅಡಗಿಸಿ, ಮೇಲೆ ಈರುಳ್ಳಿಯನ್ನು ತುಂಬಿ ಸಾಗಿಸುತ್ತಿದ್ದರು. ಆಂಧ್ರಪ್ರದೇಶದ ಕರ್ನೂಲ್ನಿಂದ ಬೆಂಗಳೂರಿಗೆ ಶ್ರೀಗಂಧವನ್ನು ತಂದು, ಗಮ್ಯಸ್ಥಾನಕ್ಕೆ ತಲುಪುವ ಮುನ್ನ ಸಿದ್ಧಾಪುರ ಪೊಲೀಸರ ನಾಕಾಬಂದಿಯಲ್ಲಿ ಸಿಕ್ಕಿಬಿದ್ದಿದ್ದಾರೆ.ಇದನ್ನೂ ಓದಿ: ತೇಜಸ್ವಿ ಯಾದವ್ ಸಣ್ಣ ಕಾರ್ಮಿಕರಿಗೆ ₹5 ಲಕ್ಷ ಸಹಾಯ: ಸ್ವಯಂ ಉದ್ಯೋಗಕ್ಕೆ ದೊಡ್ಡ ಘೋಷಣೆ ..!
ಸಿರಾಜ್ ಎಂಬಾತ ತನ್ನ ಗ್ಯಾಂಗ್ನೊಂದಿಗೆ ಕರ್ನೂಲ್ನ ಕಾಡುಗಳಲ್ಲಿ ಶ್ರೀಗಂಧದ ಮರಗಳನ್ನು ಕಡಿದು, ಈರುಳ್ಳಿ ವ್ಯಾಪಾರಿಗಳ ವೇಷದಲ್ಲಿ ಬೆಂಗಳೂರಿಗೆ ತಂದು, ಇಲ್ಲಿಂದ ಚೀನಾಕ್ಕೆ ಸಾಗಿಸುತ್ತಿದ್ದ. ಪೊಲೀಸರ ತಪಾಸಣೆಯಲ್ಲಿ 18 ಶ್ರೀಗಂಧದ ಮರದ ತುಂಡುಗಳನ್ನು ಒಳಗೊಂಡ ಚೀಲವನ್ನು ಜಪ್ತು ಮಾಡಲಾಗಿದೆ.ಇದನ್ನೂ ಓದಿ: ದತ್ತಪೀಠದ ಗೋರಿಗಳ ವಿವಾದ: ಗ್ರಾಮ ಪಂಚಾಯಿತಿಯ ಉತ್ತರದಿಂದ ಹಿಂದೂ ಸಂಘಟನೆಗಳಿಗೆ ಬಲ, ಹೋರಾಟಕ್ಕೆ ಹೊಸ ತಿರುವು..!!
ಸಿರಾಜ್ ಮತ್ತು ಆತನ ಗ್ಯಾಂಗ್ ಶ್ರೀಗಂಧವನ್ನು ಅಕ್ರಮವಾಗಿ ಕಡಿದು, ಬೆಂಗಳೂರಿನ ಡೀಲರ್ಗೆ ತಲುಪಿಸಿ, ತದನಂತರ ಚೀನಾಕ್ಕೆ ಸಪ್ಲೈ ಮಾಡುತ್ತಿದ್ದರು. ಈ ಸಂಬಂಧ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್, ಮತ್ತು ರಾಮ್ ಭೂಪಾಲ್ ಎಂಬ ನಾಲ್ವರು ಶ್ರೀಗಂಧ ಸ್ಮಗ್ಲರ್ಗಳನ್ನು ಬಂಧಿಸಲಾಗಿದೆ. ಪೊಲೀಸರು ಈಗ ತಲೆಮರೆಸಿಕೊಂಡಿರುವ ಬೆಂಗಳೂರಿನ ಡೀಲರ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.INDO ERA Women's Embroidered Pure Cotton Kurta Pant With Dupatta Set (Kh0Ph6072)