Skip to main content
ವಿಡಿಯೋ
1/3
politics

ಗಾಜಾ ವಿರುದ್ಧ ಇಸ್ರೇಲ್ ಮಿಲಿಟರಿ ದಾಳಿ: 30 ಮಂದಿ ಸಾ*ವು, ಹಲವರಿಗೆ ಗಾಯ!

By Pavitra Ganapathi Baradavalli
ಗಾಜಾ ವಿರುದ್ಧ ಇಸ್ರೇಲ್ ಮಿಲಿಟರಿ ದಾಳಿ: 30 ಮಂದಿ ಸಾ*ವು, ಹಲವರಿಗೆ ಗಾಯ!

ಕದನ ವಿರಾಮ ಉಲ್ಲಂಘನೆಯಲ್ಲೇ ಇಸ್ರೇಲ್ ಮಿಲಿಟರಿ ಗಾಜಾದ ಮೇಲೆ ವಾಯುದಾಳಿ ನಡೆಸಿ ಜನಾಪಾಯ ಸೃಷ್ಟಿಸಿದರೆ, ನಾಗರಿಕ ರಕ್ಷಣಾ ಸಂಸ್ಥೆ ಸಾವು-ನೋವು ವರದಿ ನೀಡಿದೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಆರಂಭಗೊಂಡ ವಿರಾಮ ಒಪ್ಪಂದವನ್ನು ಮೊದಲ ಬಾರಿ ಉಲ್ಲಂಘನೆ ಸಂಭವಿಸಿದೆ.

ಗಾಜಾ ಪಟ್ಟಿಯಲ್ಲಿ ಮಂಗಳವಾರ ನಡೆದ ಇಸ್ರೇಲ್ ಮಿಲಿಟರಿ ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಬುಧವಾರ ತಿಳಿಸಿದೆ. ಕದನ ವಿರಾಮ ಒಪ್ಪಂದ ಉಲ್ಲಂಘಿಸಿ ಈ ದಾಳಿ ನಡೆದಿದೆ ಎಂದು ಸಂಸ್ಥೆ ಹೇಳಿದೆ. "ನಮ್ಮ ಸಿಬ್ಬಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಮೃತರು ಮತ್ತು ಗಾಯಗೊಂಡವರನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ" ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯ ವಕ್ತಾರ ಮಹ್ಮದ್ ಬಸಲ್ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ...ಹೊಸ ಇತಿಹಾಸ ಸೃಷ್ಟಿ!

ಅಮೆರಿಕದ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದಿದ್ದ ಕದನ ವಿರಾಮವನ್ನು ಇಸ್ರೇಲ್ ಮಿಲಿಟರಿ ಉಲ್ಲಂಘಿಸಿ ಹಮಾಸ್ ಪಡೆಗಳ ಮೇಲೆ ಮಂಗಳವಾರ ವಾಯುದಾಳಿ ನಡೆಸಿದೆ ಎಂದು ನಾಗರಿಕ ರಕ್ಷಣಾ ಸಂಸ್ಥೆ ಆರೋಪಿಸಿತ್ತು. ಈ ಹೇಳಿಕೆಯ ಕೆಲವೇ ಗಂಟೆಗಳ ಬಳಿಕ ಈ ಸಾವು-ನೋವುಗಳ ವರದಿ ಪ್ರಕಟಗೊಂಡಿದೆ.ಇದನ್ನೂ ಓದಿ: ರಿಲಯನ್ಸ್ ಕಂಪನಿಗೆ 750 ಕೋಟಿ ಸಾಲ ಪ್ರಕರಣ: ಐಡಿಬಿಐ ವಿರುದ್ಧದ ಅರ್ಜಿ ಹಿಂಪಡೆದ ಅನಿಲ್ ಅಂಬಾನಿ!

ಕಳೆದ ವಾರ ಇಸ್ರೇಲ್‌ಗೆ ಭೇಟಿ ನೀಡಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಇಸ್ರೇಲ್ ಮಂಗಳವಾರ ನಡೆಸಿದ ದಾಳಿಯ ಹೊರತಾಗಿಯೂ ಕದನ ವಿರಾಮ ಮುಂದುವರೆದಿದೆ ಎಂದು ಹೇಳಿದ್ದಾರೆ. ಕ್ಯಾಪಿಟಲ್ ಹಿಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕದನ ವಿರಾಮ ಎಂದರೆ ಸಣ್ಣಪುಟ್ಟ ಘರ್ಷಣೆಗಳು ನಡೆಯುವುದಿಲ್ಲ ಎಂದರ್ಥವಲ್ಲ. ಹಮಾಸ್ ಅಥವಾ ಗಾಜಾದೊಳಗಿನ ಬೇರೆ ಯಾರಾದರೂ ಇಸ್ರೇಲ್ ಸೈನಿಕರ ಮೇಲೆ ದಾಳಿ ಮಾಡಿದ್ದಾರೆ ಎಂಬುದು ಗೊತ್ತಿದೆ. ಇದಕ್ಕೆ ಇಸ್ರೇಲಿಗಳು ಪ್ರತಿಕ್ರಿಯಿಸುತ್ತಾರೆ. ಇದರ ಹೊರತಾಗಿಯೂ ಶಾಂತಿ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಡಿ.ಕೆ. ಸುರೇಶ್ ಮಾತು: ಅಣ್ಣ ಸಿಎಂ ಆಗುವ ಆಸೆ; ಅದು ಹಣೆಯಲ್ಲಿ ಬರೆದಿದ್ದರೆ ಮಾತ್ರ..!

ಹಮಾಸ್ ಉಗ್ರಗಾಮಿ ಗುಂಪು ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಇಸ್ರೇಲ್ ಮಂಗಳವಾರ ಆರೋಪಿಸಿತ್ತು. ಇದಾದ ನಂತರವೇ ಇಸ್ರೇಲ್ ಯುದ್ಧ ವಿಮಾನಗಳು ಗಾಜಾದ ಮೇಲೆ ದಾಳಿ ನಡೆಸಿದವು. ಇದು ಈ ತಿಂಗಳ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಒಪ್ಪಂದದ ನಂತರ ನಡೆದಿರುವ ಮೊದಲ ಉಲ್ಲಂಘನೆ ಪ್ರಕರಣವಾಗಿದೆ.INDO ERA Women's Silk Blend Embroidered A-Line Kurta Pant with Dupatta Set