ಬೆಂಗಳೂರು - ಕೈಗಾರಿಕೆ , ಐಟಿ ಸಂಬಂಧ ನೂತನ ಆವಿಷ್ಕಾರಕ್ಕಾಗಿ ಅಗತ್ಯವಾದ ಸಲಕರಣೆ , ಮೂಲಭೂತ ಸೌಕರ್ಯವನ್ನ ಬಾಡಿಗೆ ರೂಪದಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ. ಐಟಿ ಸಚಿವ ಪ್ರಿಯಾಂಕ ಖರ್ಗೆ ದಿಢೀರ್ ಸುದ್ದಿಗೋಷ್ಟಿಯಲ್ಲಿ ವಿಚಾರ ತಿಳಿಸಿದ್ದಾರೆ.ಇದನ್ನೂ ಓದಿ: ಕರ್ನಾಟಕ ಕನ್ನಡ ರಾಜ್ಯೋತ್ಸವ 2025-ಸಚಿವರಿಂದ ಹಲವೆಡೆ ಧ್ವಜಾರೋಹಣದ ಸಂಭ್ರಮ..!!
ನಗರದಲ್ಲಿ ಮಾತನಾಡಿ , ಕರ್ನಾಟಕ ಡಿಜಿಟಲ್ ಎಕಾನಾಮಿಕ್ ಮಿಷನ್ ಮೂಲಕ ನೂತನ ಯೋಜನೆಗಳು ಜಾರಿಗೆ ಬರಲಿದೆ. ಕಲ್ಬುರ್ಗಿಯಲ್ಲಿ ಸರ್ಕಾರದ ವತಿಯಿಂದ ವ್ಯಾಪಾರಿಗಳಿಗಾಗಿ 4 ಸಾವಿರ ಸ್ಕ್ವಾಯರ್ ಮೀಟರ್ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಇದನ್ನ ವ್ಯಾಪಾರಿಗಳು ಎಂಎಸ್ ಎಂಇ , ಟ್ರೇಡ್ , ಎಸ್ ಎಂ ಇ , ವ್ಯಾವಹಾರಿಕ ಉದ್ದೇಶಗಳಿಗೆ ಗುತ್ತಿಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರಫ್ತು ಪ್ರಮಾಣ ಏರಿಕೆ ಮಾಡುವ ಉದ್ದೇಶದಿಂದ ವ್ಯಾಪಾರಿಗಳು ಪ್ರಯೋಗಕ್ಕಾಗಿ ಕಟ್ಟಡ ಬಳಕೆ ಮಾಡಬಹುದಾಗಿದೆ.ಇದನ್ನೂ ಓದಿ: ಬಿಹಾರ ಚುನಾವಣೆ ಮುಂಚಿತ: ನಿತೀಶ್ ಕುಮಾರ್‌ನ ವೀಡಿಯೊ ಕರೆ - ಎನ್‌ಡಿಎ ಅಭ್ಯರ್ಥಿಗಳಿಗೆ ಮತ ನೀಡಿ..!
ಎಲೆಕ್ಟ್ರಾನಿಕ್ ಮ್ಯಾನಿಫ್ಯಾಕ್ಚರ್ ಇಂಡಸ್ಟ್ರಿಸ್ ನಿರ್ಮಾಣಕ್ಕಾಗಿ 36.89 ಎಕರೆ ಜಾಗವನ್ನ ಮೀಸಲು ಇಡಲಾಗಿದೆ. ಮೈಕ್ರೋ ಕಾಂಪೊನೆಂಟ್ , ಅಸೆಂಬ್ಲಿ ಕಾಂಪೊನೆಂಟ್ ತಯಾರಿಕೆಗಾಗಿ ಈ ಘಟಕ ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಕೆಮಿಕಲ್ ಗ್ಯಾಸ್ ಇಂಡಸ್ಟ್ರೀಸ್ ಗಳಿಗಾಗಿ ಇಂಧನ , ಗ್ಯಾಸ್ ಸ್ವಚ್ಛ ಕಾರ್ಯಕ್ಕಾಗಿ 48.01 ಎಕರೆ ಜಾಗವನ್ನ ಮೀಸಲು ಇಡಲಾಗಿದೆ. ಪ್ಲಾಗ್ ಅಂಡ್ ಪ್ಲೇ ಇಂಡಸ್ಟ್ರಿಯಲ್ ಯೂನಿಟ್ ಗಾಗಿ 6 ಎಕರೆ ಜಾಗದಲ್ಲಿ ಮಾಡಲು ತೀರ್ಮಾನಿಸಲಾಗಿದೆ.ಇದನ್ನೂ ಓದಿ: ಸಮೀಕ್ಷಾ ವರದಿ: ಹಿಂದುಳಿದ ವರ್ಗಗಳ ಆಯೋಗದಿಂದ ಮಹತ್ವದ ಮಾಹಿತಿ ಬಿಡುಗಡೆ..!!
ಸಣ್ಣ , ಮಧ್ಯಮ ಕೈಗಾರಿಕೆಗಳಿಗೆ ನೀಡುತ್ತಿರುವ ಸೌಲಭ್ಯ ಇದಾಗಿದು, ಉದ್ಯೋಗ ಸೃಷ್ಟಿಗೆ ಈ ಯೋಜನೆ ನೆರವಾಗಲಿದೆ. ವಿಶೇಷವಾಗಿ ಲೈಟ್ ತಯಾರಿಕಾ ಕಂಪನಿಗಳಿಗೆ ಮಣೆ ಹಾಕಲು ತೀರ್ಮಾನವಾಗಿದೆ.
ತೊಗರಿ ಪೋಷ್ಟಿಕಾಂಶದಿಂದ ನೂತನ ಫುಡ್ ಪ್ಯಾಕ್ ತೊಗರಿ ಪೋಷಕಾಂಶವನ್ನ ತೆಗೆದು ಸೂಪರ್ ಫುಡ್ ಮಾಡಿ ಮಾರುಕಟ್ಟೆ ವ್ಯಾಪಾರಕ್ಕೆ ತರುವುದರ ಬಗ್ಗೆ ಆವಿಷ್ಕಾರ ನಡೆಯಬೇಕಿದೆ. ಕಚ್ಚಾ ವಸ್ತುಗಳನ್ನ ತಂದು ನೂತನ ಪದಾರ್ಥವಾಗಿ ಪ್ರಯೋಗಗಳ ಮೂಲಕ ಬದಲಾಯಿಸಿ ಮಾರಾಟ ಮಾಡಲು ಬೇಕಾದ ಅವಕಾಶ ಈ ಯೋಜನೆ ಮೂಲಕ ಸಿಗಲಿದೆ ಎಂದರು.SWORNOF Women's Kanjivaram Soft Silk Banarasi Sarees With Unstiched Blouse Piece