Skip to main content
ವಿಡಿಯೋ
1/3
spirituality

ಕಾಶಿಯ ಜ್ಞಾನವಾಪಿಯಲ್ಲಿ ಬೇಕೆಂದೇ ಹಿಂದೂಗಳ ಶ್ರದ್ಧೆಯನ್ನು ಅವಮಾನಿಸುವ ಕೆಲಸ ನಡೆಯಿತೇ.?

By Sushmitha R
ಕಾಶಿಯ ಜ್ಞಾನವಾಪಿಯಲ್ಲಿ ಬೇಕೆಂದೇ ಹಿಂದೂಗಳ ಶ್ರದ್ಧೆಯನ್ನು ಅವಮಾನಿಸುವ ಕೆಲಸ ನಡೆಯಿತೇ.?

ಜ್ಞಾನವಾಪಿ ಮಸೀದಿಗೆ ನಮಮಾಜ್‌ಗೆಂದು ಹೋಗುತ್ತಿದ್ದವರು, ಇಲ್ಲೊಂದು ಹಿಂದೂಗಳು ಪೂಜಿಸುವ, ಆರಾಧಿಸುವ ಭಾವನೆ ಇದೆ ಎಂದು ತಿಳಿದಿದ್ದರೂ ಕೂಡಾ, ಜ್ಞಾನವಾಪಿ ಕೊಳವನ್ನು ಕಾರಂಜಿ, ಕೈಕಾಲು ತೊಳೆಯುವ ಸ್ಥಳ ಎಂದು ಅಲ್ಲಿ ಉಗಿಯುವ ಕೆಲಸವನ್ನು ಕೂಡಾ ಮಾಡುತ್ತಿದ್ದರು.

ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಕಾಶಿಯನ್ನ ಶತಮಾನಗಳ ಕಾಲ ವಿದೇಶಿಗರು ಕೊಳ್ಳೆ ಹೊಡೆದರೂ, ಹತ್ಯೆಗಳನ್ನು ಮಾಡಿದರೂ, ದೇವಾಲಯಗಳನ್ನು ದ್ವಂಸ ಮಾಡಿದರೂ ಮತ್ತೆ ಏನೂ ಆಗಿಯೇ ಇಲ್ಲವೆಂಬಂತೆ ತಲೆ ಎತ್ತಿ ನಿಂತಿದೆ ಆ ಬೃಹತ್‌ ನಗರ.

ಆಗಿನ ಕಾಲವನ್ನು ಹೊರತುಪಡಿಸಿದರೆ, ಈಗಿನ ಜನಗಳು ಹಳೆಯ ಘಟನೆಗಳನ್ನು ಮರೆತು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕಿ, ಒಬ್ಬರ ಭಾವನೆಗಳಿಗೆ ಇನ್ನೊಬ್ಬರು ಬೆಲೆ ಕೊಡುವ ರೀತಿ ಆಗಬೇಕು. ಆದರೆ ಇಲ್ಲಿ ಅದೇನು ಆಗುತ್ತಿರುವಂತೆ ಕಾಣುತ್ತಿಲ್ಲ. Concept Kart KZ EDX Pro IEM Earphone, HiFi Stereo Special Dual Magnetic Circuit Dynamic Driver Resin Inlay Metal Process in-Ear Monitors Earbuds with 5N OFC 2Pin Detachable Cable (Cyan, with Mic)

ಜ್ಞಾನವಾಪಿ ಎನ್ನುವುದು ಕಾಶಿಯ ಚರಿತ್ರೆಯಲ್ಲಿಯೇ ಅತ್ಯಂತ ಪವಿತ್ರವಾದ ಸ್ಥಳ. ಅಲ್ಲಿಯೇ ಕಾಶಿ ವಿಶ್ವನಾಥ ನೆಲೆಸಿದ್ದಾನೆಂಬುದು ಅನೇಕ ಹಿಂದೂಗಳ ಭಾವನೆ. ಆದರೆ ಅಲ್ಲಿಗೆ ಪ್ರಾರ್ಥನೆಗೆ ತೆರಳುತ್ತಿದ್ದ ಅನ್ಯಧರ್ಮೀಯರು ಆ ಜ್ಞಾನವಾಪಿಯನ್ನು ಕಾರಂಜಿ ಎಂದು ಕರೆದು, ಕೈ ಕಾಲು ತೊಳೆಯುವ ಹಾಗೆ ಉಗಿಯುವ ಸ್ಥಳವಾಗಿ ಮಾಡಿಕೊಂಡಿದ್ದರು. ಇನ್ನೊಬ್ಬರ ಭಾವನೆಗಳನ್ನು ಅವಮಾನಿಸುವುದನ್ನು ಬಿಟ್ಟರೆ ದೇಶದಲ್ಲಿ ಸರ್ವಧರ್ಮ ಸಮಾಭಾವ ಎಂಬುದು ನೆರವೇರುವುದು.

ಒಂದು ವೇಳೆ ಪೊಬ್ಬ ಹಿಂದು ಹೋಗಿ ಮುಸಲ್ಮಾನರ ಪವಿತ್ರ ಕ್ಷೇತ್ರಗಳ ಮೇಲೆ ಅವಹೇಳನಕಾರಿ ಮಾತುಗಳನ್ನಾಡುವುದು ಅಥವಾ ಅವಮಾನಿಸುವುದನ್ನು ಮಾಡಿದರೆ ಅದನ್ನು ಕೂಡಾ ವಿರೋಧಿಸಬೇಕು.ಇದನ್ನು ಓದಿ: ನೈಜೀರಿಯಾದಲ್ಲಿ ಕಾರ್ಯಾಚರಣೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ!

ನಮ್ಮ ದೇಶದಲ್ಲಿರುವ ಪ್ರತಿಯೊಂದು ಮತ ಧರ್ಮಗಳಿಗೂ ಅವುಗಳದ್ದೆ ಆದ ಪ್ರಾಮುಖ್ಯತೆಗಳಿವೆ. ಅವುಗಳದ್ದೇ ಆದ ಪೂಜಾ ವಿಧಾನಗಳಿವೆ ಹಾಗೆ ಭಾವನೆಗಳಿವೆ. ಎಲ್ಲವನ್ನೂ ಹಾಗೆ ಎಲ್ಲರನ್ನೂ ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.ಇದನ್ನು ಓದಿ: ಹುಳು ಇರುವ ಊಟ ನೀಡಿದ IRCTCಗೆ ದೆಹಲಿ ಗ್ರಾಹಕ ನ್ಯಾಯಾಲಯದಿಂದ ₹25,000 ದಂಡ!