ಮಹಾಭಾರತದಲ್ಲಿ ಬರುವ ಪಾತ್ರಗಳ ಮೂಲ ಯಾವುದು ಎಂದು ಕೇಳಿದರೆ ಅದು ಕಾಶಿ ಎಂದರೆ ತಪ್ಪಾಗಲಾರದು. ಅದಕ್ಕೆ ಕಾರಣ ಇದೆ. ಭೀಷ್ಮನು ತನ್ನ ಸಹೋದರ ವಿಚಿತ್ರವೀರ್ಯನಿಗಾಗಿ ಸ್ವಯಂವರದಿಂದ ಅಪಹರಿಸಿದ ಅಂಬೆ, ಅಂಬಿಕೆ ಹಾಗೂ ಅಂಬಾಲಿಕೆ ಕಾಶೀರಾಜನ ಮಕ್ಕಳಾಗಿದ್ದರು. ಅವರಲ್ಲಿ ಅಂಬಾಲಿಕೆ ಪಾಂಡವರಿಗೆ ಜನ್ಮ ಕೊಟ್ಟ ಪಾಂಡುವಿನ ತಾಯಿ ಹಾಗೇ ಅಂಬಿಕೆ ಕೌರವರಿಗೆ ಜನ್ಮ ಕೊಟ್ಟ ಧೃತರಾಷ್ಟ್ರನ ತಾಯಿ.
ಮಹಾಭಾರತ ಯುಧ್ದದ ನಂತರ ವಾಸುದೇವ ಕೃಷ್ಣನು ಕಾಶಿ ನಗರದ ಮೇಲೆ ದಾಳಿ ಮಾಡಿದನು. ದಾಳಿಯ ಪರಿಣಾಮ ಕಾಶಿ ನಗರವು ಹೊತ್ತಿ ಹುರಿದಿತ್ತು. ದಾಳಿಗೆ ಸೂಕ್ತ ಕಾರಣಗಳು ಲಭ್ಯವಿಲ್ಲದಿದ್ದರೂ ಕೆಲವರ ಪ್ರಕಾರ ಕೃಷ್ಣನ ದಾಳಿಗೆ ಕಾರಣವಿತ್ತು.ANNI DESIGNER | Rayon Anarkali Printed Kurta Pant Dupatta Set | Stylish Cotton Kurti Set for Women | Ethnic Co-ord Suit Set with Dupatta Festive Kurta Sets for Women
ಆ ಸಮಯದಲ್ಲಿ ಕಾಶಿ ನಗರವನ್ನು ಆಳುತ್ತಿದ್ದ ದೊರೆ ʼಪೌಂಡ್ರಕʼ. ಆತ ವಂಚಕನಾಗಿದ್ದರಿಂದ ಆತ ಹಾಗೂ ಆತನ ಸ್ನೇಹಿತರ ಮೇಲೆ ಕೃಷ್ಣ ದಾಳಿ ಮಾಡಬೇಕಾಯಿತು ಎಂದು ಹೇಳಲಾಗಿದೆ. ಹಾಗಾಗಿ ಸ್ವತಂತ್ರ ಸಾಮ್ರಾಜ್ಯ ಎಂಬ ಹಗ್ಗಳಿಕೆಯಿಂದ ಕಾಶಿ ನಗರ ಹಿಂದೆ ಉಳಿಯಿತು ಎಂದು ಹೇಳಲಾಗಿದೆ.ಇದನ್ನು ಓದಿ: ದಾಖಲೆಗಳ ಪ್ರಕಾರ ಕಾಶಿ ನಗರ ಎಷ್ಟು ಹಳೆಯದ್ದು.? ಧನ್ವಂತರಿಗೂ ಕಾಶಿಗೂ ಇರುವ ಸಂಬಂಧವೇನು.?
ಹೀಗೇ ಮನೆತನದಿಂದ ಮನೆತನಕ್ಕೆ, ಸಾಮ್ರಾಜ್ಯದಿಂದ ಸಾಮ್ರಾಜ್ಯಕ್ಕೆ ಕಾಶಿ ನಗರ ಮುಂದುವರೆದು, ಯುಗಗಳನ್ನು ದಾಟಿ ಈಗ ಧರ್ಮ ಹಾಗೂ ಮತಗಳ ನಡುವೆ ಈ ನಗರ ಸಿಕ್ಕಿ ಬಿದ್ದಿರುವುದು ಹಳೆಯ ನೆನಪುಗಳನ್ನು ಮರುಕಳಿಸುವಂತಿದೆ.ಇದನ್ನು ಓದಿ: ಕಾಶಿಯ ಜ್ಞಾನವಾಪಿಯಲ್ಲಿ ಬೇಕೆಂದೇ ಹಿಂದೂಗಳ ಶ್ರದ್ಧೆಯನ್ನು ಅವಮಾನಿಸುವ ಕೆಲಸ ನಡೆಯಿತೇ.?