ಬೆಂಗಳೂರು : ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ನಿನ್ನೆ ಮಧ್ಯಾಹ್ನ 12:30ರ ಸುಮಾರಿಗೆ ಪೋಷಕರಿಂದ ತಪ್ಪಿಸಿಕೊಂಡಿದ್ದ 6 ವರ್ಷದ ಬಾಲಕಿಯನ್ನು, ನಮ್ಮ ಮೆಟ್ರೋ ಸಿಬ್ಬಂದಿಯು ಕ್ಷಿಪ್ರ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಪತ್ತೆಹಚ್ಚಿ ತಾಯಿಗೆ ಒಪ್ಪಿಸಿದ್ದಾರೆ.ಇದನ್ನೂ ಓದಿ: ರಾಮ್ ಜೀ ಗ್ಯಾಂಗ್ ಬಲೆಗೆ: ಕಳ್ಳತನವಾದ ನಿರ್ಮಾಪಕ ರವಿ ಗೌಡರ ಹಾರ್ಡ್ ಡಿಸ್ಕ್ ವಶ, ಓರ್ವನ ಬಂಧನ..!!
ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಪ್ರಯಾಣಿಕರು ಬಾಲಕಿಯು ಒಂಟಿಯಾಗಿರುವುದನ್ನು ಗಮನಿಸಿ, ಕೂಡಲೇ ಆಕೆಯನ್ನು ನಿಲ್ದಾಣದ ಭದ್ರತಾ ಸಿಬ್ಬಂದಿಯ ಬಳಿ ಬಿಟ್ಟರು. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಯು, ಎಲ್ಲ ನಿಲ್ದಾಣ ನಿಯಂತ್ರಕರಿಗೂ ಈ ಕುರಿತು ಮಾಹಿತಿ ರವಾನಿಸಿದರು.ಇದನ್ನೂ ಓದಿ: ಸಿಲಿಕಾನ್ ಸಿಟಿ ಗುಂಡಿ ವಿಡಿಯೋ ಸಂಚಲನ: ಸಿಎಂ ಡೆಡ್‌ಲೈನ್ ನಡುವೆಯೂ ರಸ್ತೆ ಗುಂಡಿಗಳದ್ದೇ ಆಧಿಪತ್ಯ!
ನಮ್ಮ ಮೆಟ್ರೋದ ಸಮನ್ವಯದ ಪ್ರಯತ್ನದಿಂದಾಗಿ, ಗೊಂದಲಕ್ಕೆ ಒಳಗಾಗಿದ್ದ ಬಾಲಕಿಯ ತಾಯಿಯನ್ನು ಶೀಘ್ರವಾಗಿ ಪತ್ತೆಹಚ್ಚಲು ಸಾಧ್ಯವಾಯಿತು. ನಂತರ, ಎಲ್ಲಾ ದೃಢೀಕರಣ ಪ್ರಕ್ರಿಯೆಗಳ ಬಳಿಕ, ಸುರಕ್ಷತಾ ಸಿಬ್ಬಂದಿ ಬಾಲಕಿಯನ್ನು ಆಕೆಯ ತಾಯಿಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಬಾಲಕಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೆರವಾದ ಪ್ರಯಾಣಿಕರು ಮತ್ತು ಸಮಯಪ್ರಜ್ಞೆ ಮೆರೆದ ಮೆಟ್ರೋ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.SWORNOF Women's Kanjivaram Soft Silk Banarasi Sarees With Unstiched Blouse Piece