ಬೆಂಗಳೂರು - ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಡ್ ಗ್ಯಾಂಗ್ ನವರು ಓದಿ ಕಲಿಯಬೇಕಾದ ಸ್ಟೋರಿ ಆಗಿದೆ. ಈ ಸ್ಟೋರಿಯಲ್ಲಿ ಸಂತ್ರಸ್ತ ಮಹಿಳೆ ಮಾಡಿದ ರೀತಿ ಮಾಡಿದರೆ ದರ್ಶನ್ ಗ್ಯಾಂಗ್ ಜೈಲು ಸೇರುತ್ತಿರಲಿಲ್ಲ.
ಪವಿತ್ರಾ ಗೌಡರಂತೆ ಮಾಡಿಲ್ಲ ಈ ಸೀರಿಯಲ್ ನಟಿ .ಇದನ್ನೂ ಓದಿ: ವಾಕಿಂಗ್ ಗೆ ಹೋದ ಮಹಿಳೆ ಮುಂದೆ ಅಸಭ್ಯ ವರ್ತನೆ ?!. ಆಕೆ ಮಾಡಿದ್ದೇನು ಗೊತ್ತಾ.
ಹೌದು , ಬೆಂಗಳೂರಿನಲ್ಲಿ ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ ನೀಡಲಾಗಿದ್ದ ಎಂದು ದೂರು ದಾಖಲಾಗಿದೆ. ರೇಣುಕಸ್ವಾಮಿ ಮಾದರಿಯಲ್ಲೇ ನಟಿಗೆ ಲೈಂಗಿಕ ಕಿರುಕುಳ ಕೊಡಲಾಗಿದೆ. ಫೇಸ್ ಬುಕ್ ನಲ್ಲಿ ಗುಪ್ತಾಂಗದ ವೀಡಿಯೊ ಕಳಿಸಿ ಸೀರಿಯಲ್ ನಟಿಗೆ ಕಿರುಕುಳ ಕೊಡಲಾಗಿದೆ. ರೇಣುಕಸ್ವಾಮಿ ರೀತಿಯಲ್ಲಿ ಗುಪ್ತಾಂಗದ ವಿಡಿಯೋ ಕಳುಹಿಸಿ ಕಿರುಕುಳ ಕೊಡುವ ಕೃತ್ಯ ನಡೆದಿದೆ.ಇದನ್ನೂ ಓದಿ: ಮಂಡ್ಯ ಡಿಸಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡ ರೈತ ಆತ್ಮಹ**ತ್ಯೆಗೆ ಯತ್ನ: ಭೂ ಸಮಸ್ಯೆ ಪರಿಹಾರವಾಗದಕ್ಕೆ ಮನನೊಂದು ಕೃತ್ಯ!
ಈ ಸಂಬಂಧ ನಟಿ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣವನ್ನ ಬಹುಬೇಗ ಇತ್ಯರ್ಥ ಮಾಡಿದ್ದಾರೆ.
ಕಳೆದ ಮೂರು ತಿಂಗಳಿಂದ ಶುರುವಾದ ಲೈಂಗಿಕ ಕಿರುಕುಳ ಶುರುವಾಗಿತ್ತು. ಹಾಗೇ ನವೀನ್ ಎಂಬಾತನನ್ನು ಬಂಧಿಸಿರುವ ಪೊಲೀಸರು , ತೆಲಗು ಮತ್ತು ಕನ್ನಡ ಧಾರವಾಹಿಗಳಲ್ಲಿ ನಟಿಸಿರುವ ಸಂತ್ರಸ್ತ ನಟಿಯ ದೂರಿನ ವಿರುದ್ಧ ತ್ವರಿತ ಕ್ರಮ ವಹಿಸಲಾಗಿದೆ.ಇದನ್ನೂ ಓದಿ: ಹಿರಿಯ ನಾಗರಿಕರ ಖಾತೆಗೆ ವಂಚನೆ - ಡಿಜಿಟಲ್ ದೋಖಾ ಹೆಚ್ಚಾಗಿದ್ಯಾಕೆ ಗೊತ್ತಾ ?!.
NAVEENZ ಎಂಬ ಫೇಸ್ ಬುಕ್ ಐಡಿ ಯಿಂದ ಕಿರುಕುಳದ ಮೇಸೆಜ್ ಬಂದಿದೆ. ನಟಿಗೆ ಮೊದಲು ರಿಕ್ವೆಸ್ಟ್ ಕಳುಹಿಸಿದ್ದ ಆರೋಪಿ ನವೀನ್ , ಆದರೆ ನಟಿ ರಿಕ್ವೆಸ್ಟ್ ಒಪ್ಪಿರಲಿಲ್ಲ.ಆದರೆ ಮೆಸೆಂಜರ್ ನಲ್ಲಿ ಅಶ್ಲೀಲ ಮೆಸೆಜ್ ಮಾಡಿ ಕಿರುಕುಳ ನೀಡಿದ್ದ. ಮೆಸೆಜ್ ಮಾಡದಂತೆ ಎಚ್ಚರಿಕೆ ನೀಡಿದ್ದ ನಟಿ ಕಾಟ ಹೆಚ್ಚಾದ ಹಿನ್ನಲೆ ಬ್ಲಾಕ್ ಮಾಡಿದ್ದಾಳೆ.
ಮತ್ತೆ ಬೇರೆ ಬೇರೆ ಐಡಿಯಿಂದ ಅಶ್ಲೀಲ ಹಾಗೂ ಗುಪ್ತಾಂಗದ ಫೋಟೊ ಕಳಿಸಿ ವಿಕೃತಿ ಮೆರೆದಿದ್ದ. ಕಿರುಕುಳ ನೀಡಿದ ಹಿನ್ನಲೆ ಬುದ್ಧಿ ಹೇಳಿದ್ದ ನಟಿ ಕಡೆಗೆ ನವೆಂಬರ್ 1 ನಾಗರಭಾವಿ ಬಳಿ ಆರೋಪಿ ಭೇಟಿ ಮಾಡಿದ್ದ ನಟಿಯೂ11.30 ಕ್ಕೆ ನಂದನ್ ಪ್ಯಾಲೆಸ್ ಬಳಿ ನೇರವಾಗಿ ಭೇಟಿ ಆಗಿದ್ದ ನಟಿ ಈ ರೀತಿ ಮೆಸೆಜ್ ಮಾಡೋದು ಬೇಡ ಎಂದಿದ್ದಳು. ಆದರೆ ಮತ್ತೆ ಅದೇ ರೀತಿ ಕಿರುಕುಳ ನೀಡಲು ಆರೋಪಿ ಶುರು ಮಾಡಿದರು. ಲೈಂಗಿಕವಾಗಿ ಕಿರುಕುಳ ಹಿನ್ನಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದರು. ಕಡೆಗೆ ಆರೋಪಿ ಬಂಧಿಸಿದ್ದಾರೆ ಪೊಲೀಸರು , ಹಾಗೇ ಮುಂದಿನ ಕಾನೂನು ಕ್ರಮ ಮುಂದುವರೆಯುತ್ತಿದೆ.SGF11 Women's Kanjivaram Pure Soft Silk Saree With Unstitched Blouse Piece