Skip to main content
ವಿಡಿಯೋ
1/3
general

ಗೋಲ್ಡ್ ಲೋನ್ ಮೊರೆ ಹೋಗುವ ಮುನ್ನ ಎಚ್ಚರ ..ಕಟ್ಟೆಚ್ಚರ..!

By Pavitra Ganapathi Baradavalli
ಗೋಲ್ಡ್ ಲೋನ್ ಮೊರೆ ಹೋಗುವ ಮುನ್ನ ಎಚ್ಚರ ..ಕಟ್ಟೆಚ್ಚರ..!

ಬಡ್ಡಿ ಇಲ್ಲ ಅಂತಾ ನಿಮ್ಮ ಚಿನ್ನಾಭರಣ ಅಡಮಾನ ಇಡುವ ಮುನ್ನ ಎಚ್ಚರ ವಹಿಸಿ ನಂಬಿ ಅಡಮಾನವಿಟ್ಟರೆ ಚಿನ್ನದ ಜೊತೆ ಪರಾರಿಯಾಗಿ ಪಂಗನಾಮ ಹಾಕುತ್ತಾರೆ ಎಂಬ ಸತ್ಯ ಹೊರ ಬಿದ್ದಿದೆ. ಎಮಿರೆಟ್ ಎಂಬ ಕಂಪನಿ ಮೂಲಕ ಗ್ರಾಹಕರಿಗೆ ವಂಚನೆ ಆಗಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

ಬೆಂಗಳೂರು - ಬಡ್ಡಿ ಇಲ್ಲ ಅಂತಾ ನಿಮ್ಮ ಚಿನ್ನಾಭರಣ ಅಡಮಾನ ಇಡುವ ಮುನ್ನ ಎಚ್ಚರ ವಹಿಸಿ ನಂಬಿ ಅಡಮಾನವಿಟ್ಟರೆ ಚಿನ್ನದ ಜೊತೆ ಪರಾರಿಯಾಗಿ ಪಂಗನಾಮ ಹಾಕುತ್ತಾರೆ ಎಂಬ ಸತ್ಯ ಹೊರ ಬಿದ್ದಿದೆ.

ಎಮಿರೆಟ್ ಎಂಬ ಕಂಪನಿ ಮೂಲಕ ಗ್ರಾಹಕರಿಗೆ ವಂಚನೆ ಆಗಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ಚಿನ್ನ ಅಡಮಾನವಿಟ್ಟರೆ 11 ತಿಂಗಳು ಬಡ್ಡಿ ಇಲ್ಲದೇ ಸಾಲ ಕೊಡುತ್ತಿದ್ದ ಕಂಪನಿ ಚಿನ್ನಾಭರಣದ ಮೌಲ್ಯದ 50% ರಿಂದ 60% ಸಾಲ ಕೊಡುತ್ತಿದ್ದರು.ಇದನ್ನೂ ಓದಿ: ಟಿಕೆಟ್ ದರ ನಿರ್ಬಂಧ: ಮಲ್ಟಿಪ್ಲೆಕ್ಸ್‌ಗಳಿಗೆ ಸುಪ್ರೀಂ ಬಿಗ್ ರಿಲೀಫ್!

ಅಡಮಾನವಿಟ್ಟ 11 ತಿಂಗಳವರೆಗೆ ಯಾವುದೇ ಕಾರಣಕ್ಕೂ ಚಿನ್ನ ಬಿಡಿಸಿಕೊಳ್ಳಲು ಅವಕಾಶವಿರಲಿಲ್ಲ.

ಬಡ್ಡಿ ಇಲ್ಲವಲ್ಲ ಎಂದು ನಂಬಿ ಚಿನ್ನ ಅಡಮಾನವಿಟ್ಟು ಸಾಲ ಪಡೆದಿದ್ದ ಜನಕ್ಕೆ ಈಗ ಶಾಕ್ ಆಗಿದೆ.

ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಪನಿ ತೆರೆದಿದ್ದ ವಂಚಕರು , 11 ತಿಂಗಳ ನಂತರ ಕಂಪನಿ ಬಳಿ ಹೋಗಿ ನೋಡಿದಾಗ ಚಿನ್ನದ ಜೊತೆ ಆರೋಪಿಗಳು ಪರಾರಿಯಾಗಿದ್ದಾರೆ.ಇದನ್ನೂ ಓದಿ: ರೇಣುಕಾಸ್ವಾಮಿ ರೀತಿ ವಿಡಿಯೋ ಮಾಡಿದ್ದ ಮತ್ತೊಬ್ಬ ಭೂಪ - ಮುಂದೇನಾಯ್ತು ?!.

ಈ ಬಗ್ಗೆ ಸಿಸಿಬಿ ಪೊಲೀಸರಿಗೆ ದೂರು ಕೊಟ್ಟಿದ್ದವರು. ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಸಲಾಮ್, ಅಜಿತ್ ಎಂಬ ಆರೋಪಿಗಳನ್ನ ಬಂಧಿಸಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ಕೇರಳ, ಮಂಗಳೂರಿನಲ್ಲಿ ಇದೇ ರೀತಿ ಹಲವರಿಗೆ ವಂಚಿಸಿರುವ ಆರೋಪವೂ ಇದೆ .ಬಂಧಿತರಿಂದ 1.8 ಕೋಟಿ ಮೌಲ್ಯದ 1 ಕೆಜಿ 450 ಗ್ರಾಂ ಚಿನ್ನಾಭರಣ, ಐದು ಕೆಜಿ ಬೆಳ್ಳಿ,‌ ಚಿನ್ನ ಕರಗಿಸುವ ಯಂತ್ರ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಬಂಧಿಸಿ ಸಿಸಿಬಿ ಪೊಲೀಸರು ಜೈಲಿಗೆ ಹಾಕಿದ್ದಾರೆ.SGF11 Women's Kanjivaram Pure Soft Silk Saree With Unstitched Blouse Piece