Skip to main content
ವಿಡಿಯೋ
1/3
general

ನಂದಿನಿ ತುಪ್ಪದ ಬೆಲೆಯಲ್ಲಿ ₹90 ಏರಿಕೆ: ಕೆಎಂಎಫ್‌ನಿಂದ ಗ್ರಾಹಕರಿಗೆ ಬಿಸಿ ತುಪ್ಪ!

By Pavitra Ganapathi Baradavalli
ನಂದಿನಿ ತುಪ್ಪದ ಬೆಲೆಯಲ್ಲಿ ₹90 ಏರಿಕೆ: ಕೆಎಂಎಫ್‌ನಿಂದ ಗ್ರಾಹಕರಿಗೆ ಬಿಸಿ ತುಪ್ಪ!

ದಿನೇ ದಿನೇ ಅಗತ್ಯ ವಸ್ತುಗಳ ಬೆಲೆಗಳು ಗಗನದೆತ್ತರಕ್ಕೆ ಹೋಗುತ್ತಿರುವುದನ್ನು ನಾವು ದೈನಂದಿನ ಜೀವನದಲ್ಲಿ ಕಾಣುತ್ತಿರುವುದು ಹೊಸತೇನಲ್ಲ ಆದರೆ ಈಗ ನಂದಿನಿ ತುಪ್ಪದಲ್ಲೂ ಏರಿಕೆ ಕಂಡಿರುವುದು ವಿಶೇಷವಾಗಿದೆ.

ಬೆಂಗಳೂರು: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆಗಳು ಗಗನದೆತ್ತರಕ್ಕೆ ಹೋಗುತ್ತಿರುವುದನ್ನು ನಾವು ದೈನಂದಿನ ಜೀವನದಲ್ಲಿ ಕಾಣುತ್ತಿರುವುದು ಹೊಸತೇನಲ್ಲ ಆದರೆ ಈಗ ನಂದಿನಿ ತುಪ್ಪದಲ್ಲೂ ಏರಿಕೆ ಕಂಡಿರುವುದು ವಿಶೇಷವಾಗಿದೆ. ರಾಜ್ಯದ ಜನತೆಗೆ ನಂದಿನಿ ತುಪ್ಪದ ಮೇಲಿನ ಬೆಲೆ ಏರಿಕೆಯು ಈಗ ನುಂಗಲಾರದ ತುತ್ತಾಗಿದೆ.ಇದನ್ನೂ ಓದಿ: ರಾಹುಲ್ ಗಾಂಧಿ ‘ಹೈಡ್ರೋಜನ್ ಬಾಂಬ್’ ಸುದ್ದಿಗೋಷ್ಠಿ: ಚುನಾವಣಾ ಆಯೋಗ-ಬಿಜೆಪಿ ಸಂಚು ಆರೋಪಕ್ಕೆ ಬೃಹತ್ ಸಾಕ್ಷ್ಯ..!!


ನಂದಿನಿ ತನ್ನ ತುಪ್ಪದ ಮೇಲೆ ಸತತ 90 ರೂಪಾಯಿಗಳಷ್ಟನ್ನು ಏರಿಕೆ ಮಾಡಿದೆ. ಇತ್ತೀಚೆಗಷ್ಟೆ ಜಿಎಸ್‌ಟಿ ಇಳಿಕೆಯಾದ ಬಳಿಕ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಕೆಎಂಎಫ್‌ 40 ರೂಪಾಯಿಗಳನ್ನು ಇಳಿಕೆ ಮಾಡಿತ್ತು. ಆದರೆ ಏಕಾಏಕಿ ತುಪ್ಪಕ್ಕೆ ಭಾರೀ ಬೇಡಕೆ ಕೇಳಿ ಬಂದ ಹಿನ್ನೆಲೆ ನಂದಿನಿ ತುಪ್ಪದ ದರವನ್ನು ಏರಿಕೆ ಮಾಡಿದೆ.
ಇದನ್ನೂ ಓದಿ: ನಕಲಿ ಶೇರು ಮಾರಾಟ - ಫೇಸ್‌ಬುಕ್‌ ಹುಡುಗಿ ನಂಬಿ; ಹೂಡಿಕೆ ಹೆಸರಲ್ಲಿ ಕೈ ಸುಟ್ಟುಕೊಂಡ ಯುವಕ!


ಮೊದಲು ನಂದಿನಿ ತುಪ್ಪದ ಬೆಲೆ 610 ರೂಪಾಯಿಗಳಿತ್ತು ಆದರೆ ಈಗ ನಂದಿನಿ ತುಪ್ಪದ ಬೆಲೆ 700 ರ ಗಡಿ ಮುಟ್ಟಿದೆ. ಜಿಎಸ್‌ಟಿ ಇಳಿಕೆ ಬಳಿಕ 40 ರೂಪಾಯಿಗಳಷ್ಟನ್ನು ಇಳಿಕೆ ಮಾಡಲಾಗಿತ್ತು. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ದರ ಹೆಚ್ಚಾದ ಹಿನ್ನೆಲೆಯಲ್ಲಿ ನಂದಿನಿ ತುಪ್ಪದ ಬೆಲೆಯನ್ನು ಏರಿಕೆ ಮಾಡಿಲಾಗಿದೆ ಎಂದು ಕೆಎಮ್‌ಎಫ್‌ ತಿಳಿಸಿದೆ. ನಂದಿನಿ ತುಪ್ಪದ ಮೇಲೆ ಪರಿಷ್ಕರಿಸಿದ ದರ ಇಂದಿನಿಂದಲೇ ಜಾರಿಯಾಗಲಿದೆ ಎಂಬುದನ್ನು ಕೆಎಮ್‌ಎಫ್‌ ಸ್ಪಷ್ಟಪಡಿಸಿದೆ.
SGF11 Women's Kanjivaram Pure Soft Silk Saree For Women Pure Golden Zari With Blouse Piece