ದೆಹಲಿಯಲ್ಲಿ ಹೆಚ್ಚಿರುವ ವಾಯುಮಾಲಿನ್ಯ ಹಾಗೂ ಕಳಪೆ ವಾಯುಗುಣಮಟ್ಟದ ಕುರಿತು ವರದಿಯಾಗುತ್ತಲಿದೆ. ಭಾನುವಾರ ಇಂಡಿಯಾ ಗೇಟ್ ಬಳಿ ವಾಯುಮಾಲಿನ್ಯದ ವಿರುದ್ದ ಜನರು ಪ್ರತಿಭಟಿಸಿದರು. ಈ ನಡುವೆ ಅಲ್ಲಿನ ವಾಯುಗುಣಮಟ್ಟವು ಅತ್ಯಂತ ಕಳಪೆ ವರ್ಗದಲ್ಲಿ ಉಳಿದಿದೆ ಎನ್ನಲಾಗಿದೆ.ಮುಂಬರುವ ದಿನಗಳಲ್ಲಿ, ಹವಾಮಾನ ವೈಪರೀತ್ಯಗಳು, ವಾಹನಗಳ ಹೊರಸೂಸುವಿಕೆ ಸೇರಿದಂತೆ ಇನ್ನಿತರೆ ಮಾಲಿನ್ಯ ಮೂಲಗಳಿಂದ, ಗಾಳಿಯ ಗುಣಮಟ್ಟವು “ಅತ್ಯಂತ ಕಳಪೆ” ವ್ಯಾಪ್ತಿಯಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿರೋಲಜಿ ಮುನ್ಸೂಚನೆಗಳು ಸೂಚಿಸಿದೆ ಎನ್ನಲಾಗಿದೆ. ರಾಷ್ಟ