ಕಮಲ್ ಹಾಸನ್ ಅವರ ಬಹುನಿರೀಕ್ಷಿತ ‘ಮರುಧನಾಯಗಂ’ ಸಿನಿಮಾ 1996ರಲ್ಲಿ ಭರ್ಜರಿಯಾಗಿ ಲಾಂಚ್ ಆಗಿತ್ತು. ಮದ್ರಾಸ್ ಫಿಲ್ಮ್ ಸಿಟಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ಕ್ವೀನ್ ಎಲಿಜಬೆತ್ ಮತ್ತು ಅಂದಿನ ಮುಖ್ಯಮಂತ್ರಿ ಕರುಣಾನಿಧಿ ಭಾಗಿಯಾದರು. ಆ ಕಾಲಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾಡಲಾಗುತ್ತಿದ್ದ ಈ ದೊಡ್ಡ ಚಿತ್ರದಲ್ಲಿ ನಟ ವಿಷ್ಣುವರ್ಧನ್ ಸಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರು. ಆದರೆ ಹಣಕಾಸಿನ ಸಮಸ್ಯೆಯಿಂದ ಎರಡು ವರ್ಷದ ಶೂಟಿಂಗ್ ಬಳಿಕ ಸಿನಿಮಾ ಸ್ಥಗಿತಗೊಂಡಿತು.ಚಿತ್ರಕ್ಕೆ ಅಂದಾಜು 50 ಕೋಟಿ ರೂಪಾಯಿ ಬಜೆಟ್ ಬೇಕಾಗಿತ್ತು. ಆ ಕಾಲದಲ್ಲಿ ಟಿಕೆಟ್ ದರ ಕೇವಲ 10–20 ರೂಪಾಯಿ ಇದ್ದುದರಿಂದ ಬಜೆಟ್ ವಾಪಸ