Skip to main content
ವಿಡಿಯೋ
1/3
general

10 ನೇ ತರಗತಿಯಲ್ಲಿರುವ ಶೈಕ್ಷಣಿಕ ಪಠ್ಯಕ್ರಮ ವಿಧಗಳು - ಶಿಕ್ಷಣ ಕ್ರಮ ಹಾಗೂ ವೃತ್ತಿಪರತೆ ಕುರಿತು ಇಲ್ಲಿದೆ ಮಾಹಿತಿ

By Shravanthi R
10 ನೇ ತರಗತಿಯಲ್ಲಿರುವ ಶೈಕ್ಷಣಿಕ ಪಠ್ಯಕ್ರಮ ವಿಧಗಳು - ಶಿಕ್ಷಣ ಕ್ರಮ ಹಾಗೂ ವೃತ್ತಿಪರತೆ ಕುರಿತು ಇಲ್ಲಿದೆ ಮಾಹಿತಿ

ಪ್ರೌಢ ಶಿಕ್ಷಣದ ಬಹುಮುಖ್ಯ ಘಟ್ಟವಾದ ಎಸ್‌ಎಸ್‌ಎಲ್‌ಸಿಯು, ಮಕ್ಕಳ Foundational Knowledge ಹಾಗೂ Carrer Foundation ಗೆ Gate Way ಆಗಿದೆ. ಹೀಗಾಗಿ, ಇಲ್ಲಿನ ಪಠ್ಯಕ್ರಮ ಹಾಗೂ ಕೋರ್‌ ಕಾನ್ಸೆಪ್ಟ್‌ಗಳನ್ನು ತಿಳಿಯುವುದು ಅತ್ಯವಶ್ಯಕವಾಗಿದೆ. ಜೊತೆಗೆ ಯಾವ ಬೋರ್ಡ್‌ಗಳಡಿ ಶಿಕ್ಷಣದ ಗುಣಮಟ್ಟದ ಹುದ್ದೆ ಲಭಿಸಲಿದೆ ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ.

10th - ಈ ಬಹುಮುಖ್ಯ ಶೈಕ್ಷಣಿಕ ಘಟ್ಟದಲ್ಲಿ, ವಿಷಯಗಳ ಆದ್ಯತೆಯ ಜೊತೆಗೆ, ವಿಷಯಗಳ ಆಳ ಮತ್ತು ವಿಶ್ಲೇಷಣಾ ಸಾಮರ್ಥ್ಯವನ್ನು ಮತ್ತು ಭವಿಷ್ಯದ ಸ್ಪರ್ಧಾತ್ಮಕತೆಗೆ ಒತ್ತು ನೀಡುವಂತಹ ಸಿಲಬಸ್‌ಗೆ ಒಗ್ಗಿಕೊಳ್ಳುವುದು ಸೂಕ್ತ . ಈ ಕುರಿತ ಮಾಹಿತಿ ಕೆಳಗಿನಂತಿವೆ:

ಭಾರತದಲ್ಲಿ, 10 ನೇ ತರಗತಿಯನ್ನು (SSLC - Secondary School Certificate Level) ಪೂರ್ಣಗೊಳಿಸಲು, ಮುಖ್ಯವಾಗಿ ಮೂರು ವಿಧದ ಪಠ್ಯಕ್ರಮಗಳು ಇವೆ. ಶಿಕ್ಷಣದ ಧ್ಯೇಯ ಹಾಗೂ ಭವಿಷ್ಯದ ವೃತ್ತಿಪರತೆಯನ್ನು ಗಮನದಲ್ಲಿಟ್ಟುಕೊಂಡು, ಮೂರು ಶಿಕ್ಷಣ ಮಂಡಳಿಗಳು (ಬೋರ್ಡ್‌ಗಳು) ಬುನಾದಿಯಾಗಿದೆ. 

ಮಕ್ಕಳ ಆಸಕ್ತಿ, ಗುರಿಯಷ್ಟೇ ಅಲ್ಲದೇ ಅವರ ಆಯ್ಕೆಯ ಆತ್ಮವಿಶ್ವಾಸ ಹಾಗೂ ಭೌದ್ದಿಕ ವಿಕಾಸಕ್ಕೆ ಒತ್ತು ನೀಡುವುದು ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟನಲ್ಲಿ ಆರ್ಥಿಕ ಹಿನ್ನೆಲೆಗೆ ಅನುಗುಣವಾಗಿ 10ನೇ ತರಗತಿಯ ಪಠ್ಯಕ್ರಮವನ್ನು (ಮಂಡಳಿ) ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ. OFF GT THE GRE TEST E04 Paperback – 31 January 2025

  1. ರಾಜ್ಯ ಮಂಡಳಿ (State Board - SSLC/KSEEB)

ರಾಜ್ಯ ಮಟ್ಟದಲ್ಲಿ ಅನುಸರಿಸುವ ಪಠ್ಯಕ್ರಮವು ಸಾಮಾನ್ಯವಾಗಿ ಕಡಿಮೆ ಶುಲ್ಕ ಮತ್ತು ಸ್ಥಳೀಯ ಭಾಷೆ (ಕನ್ನಡ) ಮಾಧ್ಯಮಕ್ಕೆ ಹೆಚ್ಚು ಒತ್ತು ನೀಡುತ್ತದೆ. ರಾಜ್ಯದೊಳಗಿನ ಸರ್ಕಾರಿ ಅಥವಾ ಖಾಸಗಿ PUC ಕಾಲೇಜುಗಳಿಗೆ ಅಥವಾ ಡಿಪ್ಲೋಮಾ ಕೋರ್ಸ್‌ಗಳಿಗೆ ಸೇರಲು ಇದು ಸುಲಭ ಮತ್ತು ನೇರ ಮಾರ್ಗವಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ, KSEEB - Karnataka Secondary Education Examination Board.

  1. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE)

ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಪಠ್ಯಕ್ರಮವಿದಾಗಿದ್ದು, ಶಿಕ್ಷಣ ಪರಿಕಲ್ಪನೆಗಳ ಆಳವಾದ ಅಧ್ಯಯನ ಒತ್ತು ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಕರಿಸುತ್ತದೆ. ವಿದ್ಯಾರ್ಥಿಗಳಿಗೆ ಮುಂದಿನ ಹೆಜ್ಜೆಯಾಗಿ JEE/NEET ನಂತಹ ರಾಷ್ಟ್ರೀಯ ಮಟ್ಟದ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅತ್ಯುತ್ತಮ ಅವಕಾಶವನ್ನು ನೀಡುತ್ತದೆ. ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಬೇಕಾದ ಶೈಕ್ಷಣಿಕ ಸ್ಪರ್ಧಾತ್ಮಕತೆಯನ್ನು ಉಳ್ಳದ್ದಾಗಿದೆ. 

  1. ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ICSE/ISC)

ಇದು ಖಾಸಗಿ ಶಿಕ್ಷಣ ಮಂಡಳಿಯಾಗಿದ್ದು, ಹೆಚ್ಚು ವಿಸ್ತೃತ ಮತ್ತು ಅಪ್ಲಿಕೇಶನ್-ಆಧಾರಿತ (Application-based) ಪಠ್ಯಕ್ರಮಕ್ಕೆ ಉದಾಹರಣೆಯಾಗಿದೆ. ವೃತ್ತಿ ಅವಕಾಶಗಳ ಮೇಲೆ ಪರಿಣಾಮ ಬೀರಿದೆಯಲ್ಲದೇ; ವಿಷಯಗಳ ವೈಶಿಷ್ಟ್ಯಗಳ (ವಿಜ್ಞಾನ ಮತ್ತು ಇಂಗ್ಲಿಷ್‌ಗೆ) ಬಗ್ಗೆ ಹೆಚ್ಚು ಸಮಗ್ರ ಮತ್ತು ವಿವರವಾದ ಜ್ಞಾನಕ್ಕೆ ಒತ್ತು ನೀಡುತ್ತದೆ. Indian Certificate of Secondary Education / Indian School Certificate ಜಾಗತೀಕ ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ಹಾಗೂ ಕಲಾ ವಿಭಾಗಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಪಡೆಯಲು ಇದು ಒತ್ತು ನೀಡುತ್ತದೆ. ಇದನ್ನೂ ಓದಿ: ತಂತ್ರಜ್ಞಾನ ಮತ್ತು ಸುಸ್ಥಿರತೆ - ʻಜಾಗತೀಕ ಡಿಕಾರ್ಬೊನೈಸೇಷನ್‌ʼ ಬಗ್ಗೆ ನಿಮಗೆಷ್ಟು ಗೊತ್ತು?

ಅಂತರರಾಷ್ಟ್ರೀಯ ಮಂಡಳಿಗಳು:

ಅಂತರರಾಷ್ಟ್ರೀಯ ಬ್ಯಾಕಲೌರಿಯೇಟ್ (IB) 11-16 ವಯಸ್ಸಿನ ವಿದ್ಯಾರ್ಥಿಗಳಿಗೆ ಮಿಡಲ್ ಇಯರ್ಸ್ ಪ್ರೋಗ್ರಾಂ ಅನ್ನು ಹೊಂದಿದೆ. ಕೇಂಬ್ರಿಡ್ಜ್ ಅಸೆಸ್‌ಮೆಂಟ್ ಇಂಟರ್ನ್ಯಾಷನಲ್ ಎಜುಕೇಶನ್ (CAIE) 14 ರಿಂದ 16 ವರ್ಷ ವಯಸ್ಸಿನವರಿಗೆ ಅಂತರರಾಷ್ಟ್ರೀಯ ಜನರಲ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (IGCSE) ಅನ್ನು ವ್ಯಾಪಕ ಶ್ರೇಣಿಯ ವಿಷಯ ಆಯ್ಕೆಗಳೊಂದಿಗೆ ನೀಡುತ್ತದೆ.

ಮತ್ತಿತರ ಶಿಕ್ಷಣ ಮಂಡಳಿಗಳು -

  • ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) - ಖಾಸಗಿ ಹಾಗೂ ರಾಷ್ಟ್ರೀಯ ಮಟ್ಟದ ಮಂಡಳಿಯಾಗಿದ್ದು, ಸಮಗ್ರ ಹಾಗೂ ವಿವರವಾದ ಪಠ್ಯಕ್ರಮಕ್ಕೆ ಗಮನನೀಡಿದೆ. ಸಿಬಿಎಸ್‌ಇಗಿಂತಲೂ ವಿಸ್ತಾರವಾದ ಪಠ್ಯವಿಷಯವನ್ನು ಪರಿಗಣಿಸುತ್ತದೆ.

  • ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) - ಇದು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಮುಕ್ತ ಶಾಲಾ ಮಂಡಳಿಯಾಗಿದ್ದು, ದೂರದ ಪ್ರದೇಶಗಳಲ್ಲಿರುವವರು ಅಥವಾ ನಿರ್ದಿಷ್ಟ ಔದ್ಯೋಗಿಕ ಆಸಕ್ತಿಗೆ ಹೊಂದಿಕೊಳ್ಳುವ ಶಿಕ್ಷಣದ ಆಯ್ಕೆಗಳನ್ನು ಒದಗಿಸುತ್ತದೆ.

CBSE ಮತ್ತು ICSE ಪಠ್ಯಕ್ರಮಗಳು ಸಾಮಾನ್ಯವಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಬುನಾದಿ ನೀಡಿದರೆ, SSLC ವಿದ್ಯಾರ್ಥಿಗಳು PUC ನಂತರ ಡಿಪ್ಲೋಮಾ ಅಥವಾ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು, ವೃತ್ತಿ ಪ್ರಯೋಜನಗಳನ್ನು ಹಾಗೂ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ನಂತರದ ವೃತ್ತಿಶಿಕ್ಷಣ ಹಾಗೂ ಶೈಕ್ಷಣಿಕ ಆಯ್ಕೆಗಳು - ಇಲ್ಲಿದೆ ಮಾಹಿತಿ