Skip to main content
ವಿಡಿಯೋ
1/3
general

ವಿನೂತನ ಕೋರ್ಸ್‌ಗಳ ಆರಂಭ - ಬೆಂಗಳೂರು ನಗರ ವಿಶ್ವವಿದ್ಯಾಲಯ ಸಜ್ಜು

By Shravanthi R
ವಿನೂತನ ಕೋರ್ಸ್‌ಗಳ ಆರಂಭ - ಬೆಂಗಳೂರು ನಗರ ವಿಶ್ವವಿದ್ಯಾಲಯ ಸಜ್ಜು

ಬದಲಾಗುತ್ತಿರುವ ಉದ್ಯೋಗ ಜಗತ್ತಿನಲ್ಲಿ ನಿಮ್ಮಿಷ್ಟದ ಉದ್ದಿಮೆಗಳನ್ನು ಆಯ್ಕೆ ಮಾಡಿಕೊಳ್ಳಲು ವಿವಿಧ ಕೋರ್ಸ್‌ಗಳಿವೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲಿದೆ.

ಇವತ್ತಿನ ದಿನಮಾನಗಳಲ್ಲಿ ಉದ್ಯಮ ಜಗತ್ತಿನಲ್ಲಿ ಮಹತ್ತರ ಬದಲಾವಣೆಗಳು ಕಂಡುಬಂದಿದೆ. ಒಂದು ಕೋರ್ಸ್‌ ಮಾಡಿ ಇದೇ ಉದ್ಯೋಗ ಮಾಡುವ ಗೊಂದಲಗಳಿಗೆ ಇತಿಹಾಡಬೇಕಿದೆ. ಉದ್ಯೋಗಾವಕಾಶಗಳಿಗೆ ಅನುಗುಣವಾದ ವಿವಿಧ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ. 

ವರ್ಷಗಳಿಂದಲೂ ಇರುವ ಸಾಂಪ್ರಾದಾಯಿಕ ಕೋರ್ಸ್‌ಗಳಾದ ಬಿ.ಎ, ಬಿ.ಎಸ್ಸಿ, ಬಿ.ಕಾಂ ವಿವಿಧ ಕೋರ್ಸ್‌ ಕಾಂಬಿನೇಷನ್‌ ಕಳೆಗುಂದಿವೆ ಹಾಗೂ ಈ ಕೋರ್ಸ್‌ಗಳನ್ನು ಮಾಡುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿತವಾಗಿದೆ ಎನ್ನಲಾಗಿದೆ. ಹೀಗಾಗಿ ಉದ್ಯೋಗ ದೊರಕುವ ಹಾಗೂ ಇವತ್ತಿನ ಉದ್ಯೋಗ ಕ್ಷೇತ್ರದಲ್ಲಿ ಬೇಡಿಕೆಯಿರುವುದಕ್ಕೆ ತಕ್ಕಂತ ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ.

ಕಲೆ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೊಂದಿಕೊಳ್ಳುವಂತಹ ವಿಷಯಗಳ ಹೊರತಾಗಿಯೂ ಜೀವನ ಸಂದರ್ಶಕದಂತಹ ಮೌಲ್ಯಾಧಾರಿತ ಕೋರ್ಸ್‌ ಅಥವಾ ಶೈಕ್ಷಣಿಕ ಮಾರ್ಗಗಳು, ವಿಧಗಳು ಸ್ವ-ಉದ್ಯೋಗಕ್ಕೂ ನಾನಾ ಆಯ್ಕೆಗಳಿವೆ. 

ಕೌಶಲ್ಯಾಧಾರಿತ ಕೋರ್ಸ್‌ಗಳು - 

ಕಂಟೆಂಟ್ ರೈಟಿಂಗ್, ಸ್ಪೋಕನ್ ಇಂಗ್ಲಿಷ್, ಕನ್ನಡ ಭಾಷೆ, ಅಕಾಡೆಮಿಕ್ ರೈಟಿಂಗ್ ಆ್ಯಂಡ್ ಪಬ್ಲಿಕೇಷನ್, ಫೋಟೋಗ್ರಫಿ, ಹೇರ್ ಸ್ಟೈಲ್, ಬೇಕರಿ, ಸಮುದಾಯ ಅಭಿವೃದ್ಧಿ ಮತ್ತು ಆಡಳಿತದಲ್ಲಿ ಭಾಗವಹಿಸುವಿಕೆ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ, ಭಾಷೆ ಮತ್ತು ಸಾಹಿತ್ಯ ಸೇರಿದಂತೆ 38 ವಿಷಯಗಳಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ, ಪಿ.ಜಿ ಡಿಪ್ಲೊಮಾ ಆರಂಭಿಸಲಾಗುತ್ತದೆ ಎಂದು ಇತ್ತೀಚೆಗೆ ವರದಿಯೊಂದು ತಿಳಿಸಿದೆ. Magnetic Educational Chess Board Set with Folding Chess Board 2 Plyaers Travel Toys for Kids and Adults (10 Inch) (Black Color)

ಡಿಜಿಟಲ್‌ ಕಾರ್ಯತಾಂತ್ರಿಕ ಕೋರ್ಸ್‌ಗಳು -

ಕಂಪ್ಯೂಟರ್ ಅಪ್ಲಿಕೇಷನ್, ಫೈಥಾನ್, ಕಂಪ್ಯೂಟರ್ ಸಾಕ್ಷರತೆ, ಬ್ಲಾಕ್ ಚೈನ್ ಟೆಕ್ನಾಲಜಿ, ರೊಬೊಟಿಕ್ಸ್, ಸೇರಿದಂತೆ ತಂತ್ರಜ್ಞಾನ ಹಾಗೂ ಸೈಬರ್‌ಗೆ ಸಂಬಂಧಿಸಿದ ವಿಷಯಾಧಾರಿತ ಕೋರ್ಸ್‌ಗಳಿಗೆ ಸಂಬಂಧಿತ ಸರ್ಟಿಫಿಕೇಟ್‌, ಡಿಪ್ಲೋಮಾ, ಪಿ.ಜಿ ಡಿಪ್ಲೋಮಾ ಅಧ್ಯಯನಕ್ಕೆ ಅನುವು ಮಾಡಿಕೊಡಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: 10 ನೇ ತರಗತಿಯಲ್ಲಿರುವ ಶೈಕ್ಷಣಿಕ ಪಠ್ಯಕ್ರಮ ವಿಧಗಳು - ಶಿಕ್ಷಣ ಕ್ರಮ ಹಾಗೂ ವೃತ್ತಿಪರತೆ ಕುರಿತು ಇಲ್ಲಿದೆ ಮಾಹಿತಿ

ವೈಜ್ಞಾನಿಕ ವಿಷಯಾಧಾರಿತ ಕೋರ್ಸ್‌ಗಳು -

ವಿಜ್ಞಾನ ಹಾಗೂ ತಂತ್ರಜ್ಞಾನ ವಿನ್ಯಾಸವುಳ್ಳ ವಿಷಯಗಳಾದ ಹವಾಮಾನ ಬದಲಾವಣೆ, ನರ್ಸಿಂಗ್, ರೇಡಿಯಾಲಜಿ, ನವೀಕರಿಸಬಹುದಾದ ಇಂಧನ, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ, ಫ್ಯಾಷನ್, ಬ್ಯೂಟಿ ಆ್ಯಂಡ್ ಸ್ಕಿನ್‌ಕೇ‌ರ್ ವಿನ್ಯಾಸ ಸೇರಿದಂತೆ 25 ವಿಷಯಗಳಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ, ಪಿ.ಜಿ ಡಿಪ್ಲೊಮಾ ಅಧ್ಯಯನ ಮಾಡಬಹುದು ಎಂದು ತಿಳಿಸಲಾಗಿದೆ.

ವ್ಯವಹಾರಿಕ ಉದ್ದಿಮೆಗಳಿಗೆ ಸಂಬಂಧಿತ ಕೋರ್ಸ್‌ಗಳು-

ಕಾರ್ಪೊರೇಟ್ ಕಮ್ಯೂನಿಕೇಷನ್, ಹೆಲ್ತ್ ಆ್ಯಂಡ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ಮಾನವ ಸಂಪನ್ಮೂಲ ನಿರ್ವಹಣೆ, ಇ-ಕಾಮರ್ಸ್, ಆಡಳಿತ ನಿರ್ವಹಣೆ, ಇವೆಂಟ್ ಮ್ಯಾನೇಜ್‌ಮೆಂಟ್, ರಿಟೈಲ್ ಮ್ಯಾನೇಜ್‌ಮೆಂಟ್, ಹೀಗೆ ಆಲವಾದ ಅಧ್ಯಯನಕ್ಕೆ ವಿವಿಧ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಮಾಡಲು ಅವಕಾಶಗಳನ್ನು ಕಲ್ಪಿಸಿರುವುದಾಗಿ ತಿಳಿಸಲಾಗಿದೆ. 

ಇದಷ್ಟೇ ಅಲ್ಲದೇ, ಸೋಷಿಶಿಯಲ್ ಆ್ಯಂಡ್ ಮೀಡಿಯಾ ಮಾರ್ಕೆಟಿಂಗ್, ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಆ್ಯಂಡ್ ಮಷಿನ್ ಲರ್ನಿಂಗ್, ಸೈಬ‌ರ್ ಸೆಕ್ಯೂರಿಟಿ, ಡಿಜಿಟಲ್‌ ಮಾರ್ಕೆಟಿಂಗ್‌, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿ ಕಂಡಕ್ಟರ್ ಟೆಕ್ನಾಲಜಿ, ಅನಿಮೇಷನ್, ವೆಬ್ ಡೆವಲಪ್‌ಮೆಂಟ್ ಹೀಗೆ ನೂತನ ವಿಷಯಾಧಾರಿತ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಪುಟಾಣಿಗಳು ‌ಆಟಕ್ಕೂ ಸೈ, ಶಿಸ್ತಿಗೂ ಜೈ!