ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಜಾರಿಯಾಗಿದೆ. ಆದರೆ ಈ ಗ್ಯಾರಂಟಿ ಯೋಜನೆಯಿಂದ ಮಹಿಳಾ ಮೀಸಲು ಸೀಟುಗಳ ವ್ಯವಸ್ಥೆಗೆ ತೀವ್ರ ಸವಾಲು ಎದುರಾಗುತ್ತಿದೆ.
ಇಂದು ಬೆಳಗ್ಗೆ ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಏರ್‌ವಾಟಿಕ ಬಸ್ (KA-19 F-3196)ನಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಬಸ್‌ನಲ್ಲಿ ಸಾಕಷ್ಟು ಸೀಟುಗಳು ಖಾಲಿ ಇದ್ದರೂ ಮಹಿಳಾ ಮೀಸಲು ಸಾಲಿಗಳಲ್ಲೇ ಪುರುಷ ಪ್ರಯಾಣಿಕರು ಕುಳಿತಿದ್ದರು.ANNI DESIGNER Pure Cotton Maroon Kurta Pant Set with Dupatta for Women | 3 Piece Gold Hand Block Printed Suit Set | Cotton Kurta Set for Women | Festive Kurti Set
ಈ ಬಗ್ಗೆ ಗಮನ ಸೆಳೆದ ಮಹಿಳಾ ಪ್ರಯಾಣಿಕಿ ನಿರ್ವಾಹಕರನ್ನು ಕೇಳಿದಾಗ ಅವರು ಬೇಜವಾಬ್ದಾರಿಯಿಂದ ಉತ್ತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿರ್ವಾಹಕರ ಮಾತುಗಳು ಹೀಗಿವೆ ಎಂದು ಪ್ರಯಾಣಿಕರು ಹೇಳಿದ್ದಾರೆ.
ಮಹಿಳೆಯರು ಫ್ರೀಯಾಗೇ ಪ್ರಯಾಣ ಮಾಡ್ತಾ ಇದ್ದಾರೆ. ಶಕ್ತಿ ಯೋಜನೆ ಬಂದ ಮೇಲೆ ಮಹಿಳಾ ಮೀಸಲು ಸೀಟು ಎನ್ನುವುದೇ ಇಲ್ಲ. ಖಾಲಿ ಇರುವ ಕಡೆ ಕುಳಿತುಕೊಳ್ಳಿ ಮಹಿಳೆ ವಿನಯದಿಂದ ಇದು ಮಹಿಳಾ ಮೀಸಲು ಸೀಟು ಸಾರ್, ದಯವಿಟ್ಟು ಬೇರೆಡೆಗೆ ಹೋಗಿ ಎಂದು ಕೇಳಿದರೂ ಆ ಪುರುಷ ಪ್ರಯಾಣಿಕ ತಿರಸ್ಕಾರದಿಂದ ನೋಡಿ ನಕ್ಕಿದ್ದಾನೆ. ಇದನ್ನು ಓದಿ: ಹಣಕಾಸಿನ ಮನೋಭಾವ: ಆದಾಯಕ್ಕಿಂತಲೂ ಮನಸ್ಥಿತಿಯೇ ದೊಡ್ಡ ಬಂಡವಾಳ!
ಇನ್ನು ಗಂಭೀರ ಬೇಕಾದ ನಿರ್ವಾಹಕ ಸಹ ಆತನ ಪರವಾಗೇ ನಿಂತಿದ್ದಾನೆ ಎಂಬುದು ದುಃಖದ ಸಂಗತಿ. ಶಕ್ತಿ ಯೋಜನೆ ಮಹಿಳೆಯರಿಗೆ ಆರ್ಥಿಕ ನೆರವು ನೀಡಿದೆ ನಿಜ. ಆದರೆ ಮೀಸಲು ಸೀಟುಗಳ ಗೌರವ ಕಾಪಾಡುವಲ್ಲಿ ಸಾರಿಗೆ ಸಿಬ್ಬಂದಿ ಮತ್ತು ಪುರುಷ ಪ್ರಯಾಣಿಕರ ವರ್ತನೆಯಿಂದ ಮಹಿಳೆಯರು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ತಕ್ಷಣದ ತಾಂತ್ರಿಕ ಮತ್ತು ಜಾಗೃತಿ ಕ್ರಮಗಳ ಅಗತ್ಯವಿದೆ.ಇದನ್ನು ಓದಿ: ಚಳಿಗಾಲದ ಆರೋಗ್ಯ ಮತ್ತು ಫ್ಯಾಷನ್ ಗೈಡ್ - ಸೇವಿಸಬೇಕಾದ ಆಹಾರಗಳು ಮತ್ತು ಧರಿಸಬೇಕಾದ ಬಟ್ಟೆಗಳು