ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಗ್ಗೆ ನಡೆಯುತ್ತಿರುವ ಚರ್ಚೆಗಳ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿ ಪ್ರವಾಸದ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದ್ದಾರೆ.
ದೆಹಲಿಗೆ ಹೋಗುವುದು ದೇವಸ್ಥಾನಕ್ಕೆ ಹೋಗುವಂತೆ. ಯಾವಾಗ ಅವಶ್ಯಕತೆ ಬೀಳುತ್ತದೆ, ಆಗ ನಾವು ದೆಹಲಿಗೆ ಹೋಗುತ್ತೇವೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯು ಪಕ್ಷದ ಹೈಕಮಾಂಡ್‌ನೊಂದಿಗಿನ ಸಂಬಂಧವನ್ನು ಹೇಳುತ್ತದೆ .Designer Maroon Kurta Set with Embroidered Dupatta, 3-Piece Traditional Suit with Golden Work
ನಾಯಕನಾದವನಿಗೆ ಲಕ್ಷಾಂತರ ಜನ ಬೇಕಿಲ್ಲ. ನಾಯಕನಿಗೆ ದೃಢ ನಿರ್ಧಾರವಿರುವುದರಿಂದ ಸಾಕು. ನಾವು ಎಲ್ಲರೂ ಒಂದೇ ಚಕ್ರದಲ್ಲಿರುವವರು. ಪಕ್ಷದ ಹೈಕಮಾಂಡ್ ನಿರ್ಧಾರಿಸುವುದು ಸರಿಯಾದದ್ದು" ಎಂದು ಹೇಳಿದರು.
ಈ ಮಾತುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಸಹಬಾಳ್ವೆಯನ್ನು ದೃಢಪಡಿಸುವಂತಿವೆ. ಕಳೆದ ಕೆಲ ದಿನಗಳಿಂದ ಶಿವಕುಮಾರ್ ಬೆಂಬಲಿಗ ಶಾಸಕರು ದೆಹಲಿಗೆ ಭೇಟಿ ನೀಡುತ್ತಿದ್ದು, ಸಿಎಂ ಹುದ್ದೆಯ ಬಗ್ಗೆ ಚರ್ಚೆಗಳು ಜೋರಾಗಿವೆ. ಆದರೆ ಶಿವಕುಮಾರ್ ಅವರು ನಾನು ಯಾವುದೇ ಹುದ್ದೆಗಾಗಿ ಧಾವಂತಪಡುತ್ತಿಲ್ಲ.ಇದನ್ನು ಓದಿ: ಎಐ ಬೂಮ್ ಅಥವಾ ಎಐ ಬಿಕ್ಕಟ್ಟು - ಅಮೆರಿಕಾ ಆರ್ಥಿಕತೆಗೆ ಹೊಸ ಕಂಗಾಲು!?
ಪಕ್ಷ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 2.5 ವರ್ಷಗಳನ್ನು ಪೂರೈಸಿದ್ದು, ಸಿದ್ದರಾಮಯ್ಯ-ಶಿವಕುಮಾರ್ ನಡುವಿನ ಒಡಂಬಡಿಕೆಯ ಬಗ್ಗೆ ಕುತೂಹಲ ಮೂಡಿದೆ.ಇದನ್ನು ಓದಿ: ಶಕ್ತಿ ಯೋಜನೆಯ ಹೆಸರಲ್ಲಿ ಮಹಿಳಾ ಮೀಸಲು ಸೀಟುಗಳಿಗೆ ಅವಮಾನ: ಕಂಡಕ್ಟರ್‌ನ ಉಡಾಫೆ..!