ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್.ವಿ. ದೇವರಾಜ್ ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. 68 ವರ್ಷ ವಯಸ್ಸಿನ ದೇವರಾಜ್ ಅವರ ಅಗಲಿಕೆಯು ಕಾಂಗ್ರೆಸ್ ಪಕ್ಷಕ್ಕೂ, ಚಿಕ್ಕಪೇಟೆ ಕ್ಷೇತ್ರಕ್ಕೂ ತೀವ್ರ ದುಃಖ ತಂದಿದೆ.
ರಾಜ್ಯದ ರಾಜಕಾರಣ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಅವರ ಕೊಡುಗೆಗಳು ಯಾವಾಗಲೂ ನೆನಪುಗಳಾಗಿರುತ್ತವೆ. ದೇವರಾಜ್ ಅವರ ರಾಜಕೀಯ ಜೀವನವು ಕೇವಲ ಚುನಾವಣೆಗಳಿಗೆ ಸೀಮಿತವಾಗಿರಲಿಲ್ಲ. EthnicJunction Women Georgette Relaxed Fit Tie & Dye & Embroidered A-Line Flared Kurta,Summer Kurta,Kurta For Office,Long Kurti
ಚಿಕ್ಕಪೇಟೆ ಕ್ಷೇತ್ರದಲ್ಲಿ ಸಮಾಜಸೇವಾ ಕಾರ್ಯಗಳ ಮೂಲಕ ಅವರು ಅಪಾರ ಕೊಡುಗೆ ನೀಡಿದ್ದಾರೆ. ಬಡವರು, ಹಿಂದುಳಿದವರ ಸಮಸ್ಯೆಗಳನ್ನು ಎತ್ತಿ ಹಿಡಿದು, ರಸ್ತೆ ಅಭಿವೃದ್ಧಿ, ಶಿಕ್ಷಣ ಸೌಲಭ್ಯ, ಆರೋಗ್ಯ ಸೇವೆಗಳಂತಹ ಕಾರ್ಯಗಳಲ್ಲಿ ತೊಡಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಅವರ ನಾಯಕತ್ವವು ಯುವಕರಿಗೆ ಸ್ಫೂರ್ತಿ ನೀಡುತ್ತಿತ್ತು.
ಹಿರಿಯ ನಾಯಕರೊಂದಿಗೆ ಸಹಕರಿಸಿ, ಪಕ್ಷದ ಐಕ್ಯತೆಯನ್ನು ಬೆಳೆಸಿದ್ದರು. ಚಿಕ್ಕಪೇಟೆಯಂತಹ ವಾಣಿಜ್ಯ ಕೇಂದ್ರದ ಕ್ಷೇತ್ರದಲ್ಲಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ್ದರು. ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದಾಗ ದೇವರಾಜ್ ಅವರಿಗೆ ಹೃದಯಾಘಾತ ಸಂಭವಿಸಿತು. ಇದನ್ನು ಓದಿ: ಟೊಮೋಟೊ ಬೆಲೆಯಲ್ಲಿ ದಿಢೀರ್ ಏರಿಕೆ: 15 ದಿನದಲ್ಲಿ ಕೆ.ಜಿ.ಗೆ ₹20 ರಿಂದ ₹60ಕ್ಕೆ ಜಂಪ್! ರೈತರಿಗೆ ಲಕ್!
ತಕ್ಷಣವೇ ಚಿಕಿತ್ಸೆಗೆ ದಾಖಲಿಸಲಾಯಿತು. ನಂತರ ಬೆಂಗಳೂರಿನ ಜಯದೇವ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್‌ಗೆ ಬದಲಾಯಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆ ಎಳೆದಿದ್ದಾರೆ. ಈ ಸುದ್ದಿ ರಾಜ್ಯಾದ್ಯಂತ ಶಾಕ್ ತಂದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟ್ವಿಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಿಕ್ಕಪೇಟೆಯ ಮಾಜಿ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇವರಾಜ್ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ರಾಜಕೀಯ ಮತ್ತು ಸಮಾಜಸೇವೆ ಮೂಲಕ ಚಿಕ್ಕಪೇಟೆ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅವರ ಅಗಲಿಕೆಯಿಂದ ರಾಜ್ಯ ರಾಜಕಾರಣ ಮತ್ತು ಚಿಕ್ಕಪೇಟೆ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ. ದೇವರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಇದನ್ನು ಓದಿ: ಸಾಂಸ್ಕೃತಿಕ ಶಿಕ್ಷಣ ಹಾಗೂ ಸಾಮಾಜಿಕ ನಾಯಕತ್ವವಿರದಿದ್ದರೆ ಸಮಾಜಕ್ಕೆ ಅಪಾಯ - ಸಾಹಿತಿ ಡಾ. ರಹಮತ್ ತರೀಕೆರೆ
ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತದೇಹವು ಬೆಂಗಳೂರಿಗೆ ತಲುಪಿದ್ದು. ನಾಳೆ ಕನಕಪುರದ ಸೋಮನಹಳ್ಳಿ ತೋಟದ ಮನೆ ಬಳಿ ಅಂತ್ಯಸಂಸ್ಕಾರ ನಡೆಯಲಿದೆ. ಇದೇ ದಿನ ಅವರ ಬರ್ತಡೇಯೂ ಸಂಗಮಿಸುತ್ತದೆ. ಮನೆಯ ಸಮೀಪ ಬರ್ತಡೇ ವಿಶ್ ಫ್ಲೆಕ್ಸ್‌ಗಳನ್ನು ಹಾಕಿರುವ ಅಭಿಮಾನಿಗಳು ದೇವರಾಜ್ ಅವರ ನೆನಪಿಗೆ ಕೃತಜ್ಞತೆಯೊಂದಿಗೆ ನಿಂತಿದ್ದಾರೆ.ಇದನ್ನು ಓದಿ: ಟ್ರಾಫಿಕ್ ದಂಡದಲ್ಲಿ 50% ರಿಯಾಯಿತಿ: ಜನತೆಯಿಂದ ಭರ್ಜರಿ ಸ್ಪಂದನೆ!