Skip to main content
ವಿಡಿಯೋ
1/3
technology

ಕೃತಕಬುದ್ದಿಮತ್ತೆ(AI) ಯಿಂದ ಸಾಮಾನ್ಯ ಕೃತಕಬುದ್ದಿಮತ್ತೆ(AGI) ಯವರೆಗೆ ಭವಿಷ್ಯದ ಬುದ್ದಿವಂತಿಕೆಗೆ ಏನಾಗಬಹುದು!?

By Shravanthi R
ಕೃತಕಬುದ್ದಿಮತ್ತೆ(AI) ಯಿಂದ ಸಾಮಾನ್ಯ ಕೃತಕಬುದ್ದಿಮತ್ತೆ(AGI) ಯವರೆಗೆ ಭವಿಷ್ಯದ ಬುದ್ದಿವಂತಿಕೆಗೆ ಏನಾಗಬಹುದು!?

ತಂತ್ರಜ್ಞಾನವು ಊಹಿಸಲಸಾಧ್ಯವಾದ ಮಟ್ಟಿಗಿನ ಬೆಳವಣಿಗೆ ತರುತ್ತಿದೆ. ಈಗಾಗಲೇ ಎಐ ದಾಂಗುಡಿಯು ಎಲ್ಲಾ ಕ್ಷೇತ್ರಗಳನ್ನು ಆಕ್ರಮಿಸಿರುವ ಕೃತಕಬುದ್ದಿಮತ್ತೆಗಿಂತಲೂ, ಸಾಮಾನ್ಯ ಕೃತಕಬುದ್ದಿಮತ್ತೆಯು ಭವಿಷ್ಯದಲ್ಲಿನ ಮಾನವ ಬುದ್ದಿವಂತಿಕೆ ಕುರಿತು ಆತಂಕವನ್ನು ತೋರಿದೆ ಎನ್ನಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಪರಿಚಿತವಾಗಿರುವ Artificial Intelligence - AI ಎಲ್ಲೆಡೆ ಹೆಸರಾಂತ. ಜೆಮಿನಿ, ಚಾಟ್‌ಜಿಪಿಟಿ, ಕ್ಲಾಡ್‌ ಎಐ ಹೀಗೆ ವಿವಿಧ ಚಾಟ್‌ಬಾಟ್‌ ಸೇರಿದಂತೆ ಎಐ ಪರಿಕರಗಳು ಬಗ್ಗೆ ಗೊತ್ತೇ ಇದೆ. ಆದರೆ, AI ಕ್ಷೇತ್ರದಲ್ಲಿ ಪ್ರಮುಖವಾಗಿ ಎರಡು ಪರಿಕಲ್ಪನೆಗಳಿವೆ:

  • ಕೃತಕಬುದ್ದಿಮತ್ತೆ (ಎಐ) - ಸೀಮಿತ ಎಐ (Narrow AI)

ಇದು ಸೀಮಿತ ಅಥವಾ ನಿರ್ಧಿಷ್ಟ ಕೆಲಸ ನಿರ್ವಹಣೆಯನ್ನು ತೋರುವ ಎಐ ಸಾಧನಗಳಾಗಿವೆ. ಇದರಲ್ಲಿ ಡೇಟಾದ ಹೊರತಾಗಿ, ಮಾನವನಂತೆ ಪ್ರತಿಕ್ರಿಯಿಸಲು ಅಥವಾ ಕಲಿಯುವ ಸಾಮರ್ಥ್ಯವಿರದ್ದಾಗಿದೆ. ಉದಾಹರಣೆಗೆ ವಾಯ್ಸ್‌ ಅಸಿಸ್ಟೆಂಟ್ಸ್‌ (Voice Assistants), ಸೆಲ್ಫ್‌ ಡ್ರೈವಿಂಗ್‌ ಕಾರ್ಸ್‌(Self-driving cars), ಫ್ರಾಡ್‌ ಡಿಟೆಕ್ಟಿಂಗ್‌ ಸಿಸ್ಟಮ್ಸ್‌.

  • ಸಾಮಾನ್ಯ ಕೃತಕಬುದ್ದಿಮತ್ತೆ - ಸಾಮಾನ್ಯ ಎಐ (Artificial General Intelligence AI)

ಇದರಲ್ಲಿ ಮಾನವನಂತೆಯೇ ಪ್ರತಿಕ್ರಿಯಿಸಲು, ಸಮಗ್ರ ಬುದ್ದಿಶಕ್ತಿಯನ್ನು ಹೊಂದಿರುವುದು ಹಾಗೂ ಕಲಿಯಲು ಸಾಮರ್ಥ್ಯವನ್ನು ಹೊಂದಿರುತ್ತದೆ. ಮಾನವ ಬೌದ್ದಿಕ ಸವಾಲುಗಳಿಗೆ ಅನ್ವಯಿಸುವ ಹಾಗೆ ಜ್ಞಾನ ಕೌಶಲವನ್ನು ಹೊಂದುವುದು ಎನ್ನಲಾಗಿದೆ. ಇದಿನ್ನೂ ಅಭಿವೃದ್ದಿಯ ಹಂತದಲ್ಲಿದ್ದು, ಸೈದ್ದಾಂತಿಕವಾಗಿ ಪ್ರಚಲಿತದಲ್ಲಿದೆ. ಉದಾಹರಣೆಗೆ, ಹಾಲಿವುಡ್‌ ಚಲನಚಿತ್ರಗಳಲ್ಲಿ ತೋರುವ ಸೂಪರ್‌ ಇಂಟಲಿಜೆನ್ಸ್‌ ರೋಬೋಗಳ ಹಾಗೆ. 

ಇವುಗಳ ಫಲಿತಾಂಶವಾಗಿ, ಮಾನವನ ಮುಂದಿನ ಬುದ್ದಿಮಟ್ಟ ಹಾಗೂ ಮಾನವೀಯತೆಯ ಅಸ್ತಿತ್ವಗಳಿಗೆ ಹೇಗೆ ಪರಿಣಮಿಸಲಿದೆ ಎಂದು ಭ್ರಮಿಸಲಾಗಿದೆ. ಇದರಿಂದ ಮಾನವ ಬುದ್ದಿಮತ್ತೆ ಮೀರಿಹೋಗಲಿದೆಯೇ ಅಥವಾ ಮಾನವ ಅಂತಃಕರಣವನ್ನು ಹಾಗೇ ಕಾಪಾಡಲಿದೆಯೇ ಎನ್ನುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. Noise Master Buds, Sound by Bose in-Ear Bluetooth Earbuds, Up to 49dB Adaptive ANC, LHDC 5.0, Immersive Spatial Audio, 44H Playtime with 6 mic ENC, Dual Pairing, IPX5 Ear Buds TWS (Onyx)

ಸಂಶೋಧನೆಗಳು, ವಿಮರ್ಶೆಗಳು ಈ ಬಗ್ಗೆ ವ್ಯಾಪಕ ಶ್ರೇಣಿಯ ಭವಿಷ್ಯ ನುಡಿಯುತ್ತಿವೆ. ಮಾನವಕುಲಕ್ಕೆ ತಂತ್ರಜ್ಞಾನದ ಕೊಡುಗೆಯಂತೆ ಎಐ ಅಭಿವೃದ್ದಿಗೊಳ್ಳುತ್ತಿದೆ. ಆದರೂ, ಇದರಿಂದ ಭವಿಷ್ಯದಲ್ಲಾಗಲಿರುವ ಪರಿಣಾಮಗಳು ವರದಾನವಾಗಲಿದೆಯೇ ಅಥವಾ ಅಪಾಯ ತಂದೊಡ್ಡಲಿವೆಯೇ ಎಂಬ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದೆ. ಇದನ್ನೂ ಓದಿ: ಆಧುನಿಕ ಮನೋಭೀತಿಗಳು: FoMo, FoFo ಹಾಗಂದರೇನು?