ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ 'ಡೆವಿಲ್' ನಾಳೆ, ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ನಡೆದ ಒಂದು ದುರದೃಷ್ಟಕರ ಘಟನೆಯಿಂದಾಗಿ ದರ್ಶನ್ ಅವರು ಜೈಲಿನಲ್ಲಿದ್ದರೂ, ಅವರ ಸಿನಿಮಾ ಮೇಲಿನ ಅಭಿಮಾನಿಗಳ ಪ್ರೀತಿ ಮತ್ತು ಕ್ರೇಜ್ ಒಂದಿಷ್ಟೂ ಕಡಿಮೆ ಆಗಿಲ್ಲ.
ಈ ಬಿಕ್ಕಟ್ಟಿನ ಸಮಯದಲ್ಲಿಯೂ ಅಭಿಮಾನಿಗಳ ಸಾರಥಿಯಾದ ದರ್ಶನ್ ಅವರು ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಜೈಲಿನಿಂದಲೇ ಒಂದು ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ.
ದರ್ಶನ್ ಅವರ ಈ ಸಂದೇಶವನ್ನು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳಿಗೆ ತಲುಪಿಸಿದ್ದಾರೆ. ‘ಡಿ ಡೆವಿಲ್’ ಕ್ರೇಜ್ ಪೀಕ್‌ನಲ್ಲಿ..!ದರ್ಶನ್ ಕುಳಿತುಕೊಂಡ ಕುರ್ಚಿ ನೋಡಲು ಜನ ಮುಗಿಬಿದ್ದ ಅಭಿಮಾನಿಗಳು
ವಿಜಯಲಕ್ಷ್ಮಿ ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ, ದರ್ಶನ್ ಅವರ ಮಾತುಗಳು ನೇರವಾಗಿ ಅಭಿಮಾನಿಗಳ ಹೃದಯಕ್ಕೆ ತಲುಪುವಂತಿವೆ. ದರ್ಶನ್ ಅವರು ಸಂದೇಶದಲ್ಲಿ, ನನ್ನ ಪ್ರೀತಿಯ ದಾಸನ ಸಂದೇಶವನ್ನು ನನ್ನ ಪತ್ನಿ ವಿಜಯಲಕ್ಷ್ಮಿ ನಿಮ್ಮೆಲ್ಲರಿಗೂ ತಲುಪಿಸುತ್ತಾರೆ ಎಂದು ಸಂದೇಶ ತಿಳಿಸಿದ್ದಾರೆ.
ಈ ಕಠಿಣ ಸಮಯದಲ್ಲಿ ನೀವು ತೋರಿಸುತ್ತಿರುವ ಪ್ರೀತಿ, ಕಾಳಜಿ ಮತ್ತು ಬೆಂಬಲಕ್ಕೆ ನಾನು ಆಭಾರಿ. ಈ ಪ್ರೀತಿಯು ನನ್ನ ವೈಯಕ್ತಿಕ ವಿಚಾರಗಳ ಬದಲಿಗೆ, ನಮ್ಮ ಕಷ್ಟದ ಪ್ರತಿಫಲವಾಗಿ ರೂಪುಗೊಂಡಿರುವ 'ಡೆವಿಲ್' ಸಿನಿಮಾದ ಪ್ರಚಾರದ ಮೇಲೆ ಇರಲಿ ಎಂದು ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.GoSriKi Women's 3 Piece Kurta Pant Dupatta Set | Silk Cotton Kurta Sets for Woman | Kurti Set for Woman | Elegant Suit Set for Women Cotton | Women Kurta Sets with Dupatta Cotton
ನಿಮ್ಮ ಈ ಪ್ರೀತಿ ನನಗೆ ಒಂದು ಶಕ್ತಿ. ನಿಮ್ಮ ನಾಯಕನಾಗಿ ನಾನು ಕೇಳಿಕೊಳ್ಳುವುದಿಷ್ಟೆ, ನೀವೆಲ್ಲರೂ ಯಾವುದೇ ಗೊಂದಲಗಳಿಗೆ ಒಳಗಾಗದೆ, ನಾಳೆ ತಪ್ಪದೇ ಚಿತ್ರಮಂದಿರಗಳಿಗೆ ಬಂದು 'ಡೆವಿಲ್' ಸಿನಿಮಾವನ್ನು ವೀಕ್ಷಿಸಿ. ಈ ಸಿನಿಮಾ ಗೆಲ್ಲುವುದು ನಮ್ಮೆಲ್ಲರ ಗೆಲುವು. ನಿಮ್ಮ ಬಾಸ್‌ನ ಗೆಲುವು ಎಂಬ ಅಭಿಮಾನಿಗಳ ಬಾಸ್‌ನ ಸಂದೇಶವನ್ನು ವಿಜಯಲಕ್ಷ್ಮಿ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ದರ್ಶನ್ ಅವರ ಈ ಮನವಿಯ ನಂತರ, ಅಭಿಮಾನಿಗಳ ಉತ್ಸಾಹ ಇಮ್ಮಡಿಗೊಂಡಿದೆ. ಈಗಾಗಲೇ ರಾಜ್ಯದಾದ್ಯಂತ 'ಡೆವಿಲ್' ಚಿತ್ರದ ಟಿಕೆಟ್‌ಗಳ ಬುಕ್ಕಿಂಗ್ ಭರದಿಂದ ಸಾಗಿದ್ದು, ಪ್ರದರ್ಶನಗಳು ಹೌಸ್‌ಫುಲ್ ಆಗುವ ನಿರೀಕ್ಷೆಯಿದೆ. ಇದನ್ನು ಓದಿ: ವೆಬ್‌ಸೈಟ್‌ಗಳ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಮೊರೆ ಹೋದ ಜೂನಿಯರ್ ಎನ್‌ಟಿಆರ್..! ಇಲ್ಲಿದೆ ಸಂಪೂರ್ಣ ಮಾಹಿತಿ
ಅಭಿಮಾನಿಗಳು ದರ್ಶನ್ ಅವರ ಸಂದೇಶವನ್ನು ಶಿರಸಾ ವಹಿಸಿ, ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ಸೃಷ್ಟಿಸಲು ಸಜ್ಜಾಗಿದ್ದಾರೆ. ದರ್ಶನ್ ಅವರ ಪರವಾಗಿ ನಿಂತಿರುವ ಅಭಿಮಾನಿಗಳ ಪ್ರೀತಿಗೆ ಇಡೀ ಕನ್ನಡ ಚಿತ್ರರಂಗವೇ ಸಲಾಮ್ ಹೇಳುತ್ತಿದೆ. 'ಡೆವಿಲ್' ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವುದನ್ನು ನೋಡಲು ಎಲ್ಲರೂ ಕಾತರರಾಗಿ ಕಾಯುತ್ತಿದ್ದಾರೆ.ಇದನ್ನು ಓದಿ: ರಿಷಬ್ ಶೆಟ್ಟಿಗಾಗಿ ದೈವ ನರ್ತಕರು ಮಾಡಿದ್ರಾ ದೊಡ್ಡ ತಪ್ಪು? ನಿಜ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ!