Skip to main content
ವಿಡಿಯೋ
1/3
technology

ಭಾರತದಲ್ಲಿ ಎಐ ಸೌಕರ್ಯ ನಿರ್ಮಾಣ - 1.5 ಲಕ್ಷ ಕೋಟಿ ಹೂಡಿಕೆ ಘೋಷಿಸಿದ ಮೈಕ್ರೋಸಾಫ್ಟ್‌ ಸಿಇಒ!

By Shravanthi R
ಭಾರತದಲ್ಲಿ ಎಐ ಸೌಕರ್ಯ ನಿರ್ಮಾಣ - 1.5 ಲಕ್ಷ ಕೋಟಿ ಹೂಡಿಕೆ ಘೋಷಿಸಿದ  ಮೈಕ್ರೋಸಾಫ್ಟ್‌ ಸಿಇಒ!

ಭಾರತದಲ್ಲಿ ಎಐ ಕೌಶಲ್ಯ ಹಾಗೂ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಮೈಕ್ರೋಸಾಫ್ಟ್‌ ಮುಂದಾಗಿದೆ. ಬರೋಬ್ಬರಿ 17.5 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಇಡೀ ಏಷ್ಯಾದಲ್ಲೇ ಇದುವರೆಗೆ ಅತಿದೊಡ್ಡ ಹೂಡಿಕೆ ಇದೆನ್ನಲಾಗಿದೆ.

ಜಗತ್ತಿನಾದ್ಯಂತ ಕೃತಕಬುದ್ದಿಮತ್ತೆ (ಎಐ) ಬಳಕೆ ಅತ್ಯಂತ ವೇಗವಾಗಿದೆ. ಉದ್ಯಮ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ AI ಕಂಪನಿಗಳು ತಲೆಎತ್ತುತ್ತಿವೆ. ಈ ನಿಟ್ಟಿನಲ್ಲಿ ಇದರಲ್ಲಿ ಹೂಡಿಕೆ ಮಾಡಲು ದೊಡ್ಡ ಮಟ್ಟದಲ್ಲಿ ಹೆಜ್ಜೆ ಇಡಲಾಗಿದೆ. ಇದೀಗ ಭಾರತದಲ್ಲಿಯೇ ಮೆಗಾ ಹೂಡಿಕೆ ಮುಂದಾಗಿದೆ ಮೈಕ್ರೋಸಾಫ್ಟ್‌ ಇನ್‌ಫೋ-ಟೆಕ್‌ ಕಂಪನಿ. 

ಮಂಗಳವಾರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ, ಮೈಕ್ರೋಸಾಫ್ಟ್‌ ಕಂಪನಿ ಮುಖ್ಯಸ್ಥ ಸತ್ಯ ನಾಡೆಲ್ಲಾ. ಈ ಮಧ್ಯೆ ಅವರು, ಭಾರತದಲ್ಲಿ ಎಐ ಸ್ಕಿಲ್ಲಿಂಗ್‌, ಇನ್‌ಫ್ರಾಸ್ಟ್ರಕ್ಚರ್‌ ಹಾಗೂ ಡೆವಲೆಪ್‌ಮೆಂಟ್‌ಗಾಗಿ 17.5 ಬಿಲಿಯನ್‌ ಡಾಲರ್‌ ( ಸುಮಾರು 1.50 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಎಐ ಯುಗದಲ್ಲಿ ಜಗತ್ತು ಭಾರತದ ಬಗ್ಗೆ ಆಶಾವಾದಿಯಾಗಿದೆ ಎಂದು ಹೇಳಿದ್ದಾರೆ.  Sounce Earphone Cleaning Pen for Airpods, 4-in-1 Soft Brush Cleaning kit, Compatible with AirPods Pro, AirPods 3 Case Cleaner Tool Kit Set - White

ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮೂಲಕ ಕೌಶಲ್ಯ ಹಾಗೂ ಸ್ವಾವಲಂಬನೆಯನ್ನು ನಿರ್ಮಿಸುವ ಸಲುವಾಗಿ ಈ ಹೂಡಿಕೆ ಮಹತ್ವದ್ದಾಗಿದೆ ಎಂದಿದ್ದಾರೆ. ಕ್ಲೌಡ್‌ ಹಾಗೂ ಕಂಪ್ಯೂಟರ್‌ ಇನ್‌ಫ್ರಾಸ್ಟ್ರಕ್ಚರ್‌, ಎಲ್ಲಾ ಸೆಕ್ಟರ್‌ಗಳಲ್ಲಿ ಸ್ಥಳೀಯ ಡಾಟಾ ಸಿಸ್ಟಂಗಳನ್ನು ಸ್ಥಾಪಿಸುವುದು ಹಾಗೂ ಕೌಶಲ್ಯಾಧಾರಿತ ಯೋಜನೆಗಳನ್ನು ರೂಪಿಸುವುದು ಮೈಕ್ರೋಸಾಫ್ಟ್‌ನ ಗುರಿಯಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಗರುಡ್‌ ಡಿಫೆನ್ಸ್‌ ಟೆಕ್‌: ಭಾರತೀಯ ಆಧುನಿಕ ಕಣ್ಗಾವಲು ತಂತ್ರಜ್ಞಾನಕ್ಕೆ ಹೊಸ ಭರವಸೆ!

ಇದರೊಟ್ಟಿಗೆ ಎಐ ಭವಿಷ್ಯದ ಆದ್ಯತೆಯ ಮೇರೆಗೆ, AI 1st ಫ್ರೂಚರ್‌ಗಾಗಿ ಹೂಡಿಕೆಗೆ ಸಜ್ಜಾಗಿದೆ. ಟೆಕ್‌ ದೈತ್ಯ ಗೂಗಲ್‌, ಅಮೆಜಾನ್‌ ನಂತರ ಹೂಡಿಕೆಗೆ ಇದೀಗ ಮೈಕ್ರೋಸಾಫ್ಟ್‌ ಸರದಿಯಾಗಿದೆ. ಮೈಕ್ರೋಸಾಫ್ಟ್‌ನ ಈ ಮಹತ್ವದ ಹೂಡಿಕೆಯನ್ನು ಪ್ರಧಾನಿ ಮೋದಿಯವರು  ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ, ಶುಚಿ-ರುಚಿ ಮತ್ತು ಪರಂಪರೆಯ ಅಪೂರ್ವ ಮಿಶ್ರಣ: ʻಗುಡ್ ಗುರ್ʼ ಸಿಹಿ!