Skip to main content
ವಿಡಿಯೋ
1/2
crime

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮುಂದುವರೆದ ರೋಡ್ ರೇಜ್: ಕ್ಯಾಂಟರ್ ಚಾಲಕನಿಗೆ ಆಟೋ ಚಾಲಕನಿಂದ ಅವಾಜ್..!

By Sushmitha R
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮುಂದುವರೆದ ರೋಡ್ ರೇಜ್: ಕ್ಯಾಂಟರ್ ಚಾಲಕನಿಗೆ ಆಟೋ ಚಾಲಕನಿಂದ ಅವಾಜ್..!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 'ರೋಡ್ ರೇಜ್' (ರಸ್ತೆ ಕಲಹ) ಪ್ರಕರಣಗಳು ಮುಂದುವರೆಯುತ್ತಿದ್ದು, ಈ ಬಾರಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಮತ್ತು ತಾಂತ್ರಿಕ ಕೇಂದ್ರವಾದ ಎಲೆಕ್ಟ್ರಾನಿಕ್ ಸಿಟಿಯ ಹೃದಯ ಭಾಗದಲ್ಲಿ ಒಂದು ಗಂಭೀರ ಘಟನೆ ನಡೆದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 'ರೋಡ್ ರೇಜ್' (ರಸ್ತೆ ಕಲಹ) ಪ್ರಕರಣಗಳು ಮುಂದುವರೆಯುತ್ತಿದ್ದು, ಈ ಬಾರಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಮತ್ತು ತಾಂತ್ರಿಕ ಕೇಂದ್ರವಾದ ಎಲೆಕ್ಟ್ರಾನಿಕ್ ಸಿಟಿಯ ಹೃದಯ ಭಾಗದಲ್ಲಿ ಒಂದು ಗಂಭೀರ ಘಟನೆ ನಡೆದಿದೆ. ಕೇವಲ ಓವರ್‌ಟೇಕ್ ಮಾಡಿದ ಸಣ್ಣ ಕಾರಣಕ್ಕೆ, ಆಟೋ ಚಾಲಕನೊಬ್ಬ ಕ್ಯಾಂಟರ್ ಚಾಲಕನನ್ನು ಅಡ್ಡಗಟ್ಟಿ, ನಡು ರಸ್ತೆಯಲ್ಲಿ ಭಾರಿ ಅವಾಜ್ ಹಾಕಿ ಗಲಾಟೆ ನಡೆಸಿದ್ದಾನೆ.

ಘಟನೆಯು ಎಲೆಕ್ಟ್ರಾನಿಕ್ ಸಿಟಿಯ ಕಾವೇರಿ ಆಸ್ಪತ್ರೆ ಬಳಿ ನಡೆದಿದ್ದು, ಸಾರ್ವಜನಿಕರು ಈ ದೃಶ್ಯವನ್ನು ನೋಡಿ ಆತಂಕಗೊಂಡಿದ್ದಾರೆ. ಮೂಲಗಳ ಪ್ರಕಾರ, ಆಟೋ ಚಾಲಕನನ್ನು ಕ್ಯಾಂಟರ್ ಚಾಲಕ ಸಿಗ್ನಲ್ ಬಳಿ ಓವರ್‌ಟೇಕ್ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ಕೆರಳಿದ ಆಟೋ ಚಾಲಕ, ಅಲ್ಲಿಂದಲೇ ಕ್ಯಾಂಟರ್ ಅನ್ನು ಫಾಲೋ ಮಾಡಿಕೊಂಡು ಬಂದು, ಆಸ್ಪತ್ರೆ ಸಮೀಪದ ನಡು ರಸ್ತೆಯಲ್ಲಿ ವಾಹನವನ್ನು ಅಡ್ಡಗಟ್ಟಿದ್ದಾನೆ. ANNI DESIGNER Women's Rayon Viscose A-Line Solid Kurta with Palazzo & Dupatta

ಕ್ಯಾಂಟರ್ ಚಾಲಕನಿಗೆ ಅವಾಜ್ ಹಾಕಲು ಶುರು ಮಾಡಿದ ಆಟೋ ಚಾಲಕ, ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದರೂ, ಕ್ಯಾಂಟರ್ ಚಾಲಕ ಪದೇ ಪದೇ ಕ್ಷಮೆಯಾಚಿಸುತ್ತಾ, ಗಲಾಟೆ ಮುಗಿಸಲು ಪ್ರಯತ್ನಿಸಿದ್ದಾನೆ. ಆದರೆ, ಸಿಟ್ಟಿನಿಂದ ಕುದಿಯುತ್ತಿದ್ದ ಆಟೋ ಚಾಲಕ ಮಾತ್ರ ಆತನನ್ನು ಬಿಡದೆ, ರಸ್ತೆಯ ಮಧ್ಯದಲ್ಲೇ ಗಲಾಟೆ ಮುಂದುವರಿಸಿದ್ದಾನೆ.

ಈ ಘಟನೆಯಿಂದಾಗಿ ಎಲೆಕ್ಟ್ರಾನಿಕ್ ಸಿಟಿ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಈ ಸಂದರ್ಭದಲ್ಲಿ ಕರ್ತವ್ಯನಿರತ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬಂದರೂ ಸಹ, ಆಟೋ ಚಾಲಕನ ವರ್ತನೆ ಮಾತ್ರ ಬದಲಾಗಲಿಲ್ಲ. ಪೊಲೀಸರ ಮಾತನ್ನೂ ಕ್ಯಾರೇ ಮಾಡದ ಆತ, ಡೋಂಟ್ ಕೇರ್ ಎಂಬಂತೆ ವರ್ತಿಸಿದ್ದಾನೆ. ಆಟೋ ಚಾಲಕನ ಈ ಅಹಂಕಾರಿ ಮತ್ತು ನಿಯಮ ಮೀರಿದ ವರ್ತನೆಯಿಂದಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನು ಓದಿ: ಬೆಂಗಳೂರು: ಉದ್ಯಮಿ ಮೇಲೆ ಏರ್ ಗನ್ ಫೈರಿಂಗ್, ತೀವ್ರ ಕುತೂಹಲ..!

ಸಾರ್ವಜನಿಕ ಸ್ಥಳಗಳಲ್ಲಿ ಸಣ್ಣ ಕಾರಣಕ್ಕೆ ನಡೆಯುವ ಇಂತಹ ರೋಡ್ ರೇಜ್ ಘಟನೆಗಳು ಬೆಂಗಳೂರಿನ ಟ್ರಾಫಿಕ್ ಮತ್ತು ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿವೆ. ಆಟೋ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಪೊಲೀಸರನ್ನು ಆಗ್ರಹಿಸಿದ್ದಾರೆ.ಇದನ್ನು ಓದಿ: ನಾನು ದೂರು ನೀಡಿದ್ದು ಷಡ್ಯಂತ್ರ ಸುಜಾತಾ ಭಟ್ - ಪೊಲೀಸರ ಹಿಂಬರಹದ ಹೇಳಿಕೆ..!